ಅಭಿಮಾನಿಗಳಿಂದ ಸಿಕ್ತು ರಾಧಿಕಾ ಪಂಡಿತ್‌ಗೆ ಸ್ವೀಟ್ ಸರ್ಪ್ರೈಸ್‌

Public TV
1 Min Read

ಸ್ಯಾಂಡಲ್‌ವುಡ್ ಬ್ಯೂಟಿ ರಾಧಿಕಾ ಪಂಡಿತ್ (Radhika Pandit) ಅವರಿಗೆ ಇಂದು ಜನ್ಮ ದಿನದ ಸಂಭ್ರಮವಾಗಿದ್ದು, ಇದೀಗ ಅಭಿಮಾನಿಗಳಿಂದ ನಟಿಗೆ ಬಿಗ್ ಸರ್ಪ್ರೈಸ್‌ವೊಂದು ಸಿಕ್ಕಿದೆ. ಈ ವರ್ಷ ಅಭಿಮಾನಿಗಳಿಗೆ ನಟಿ ಸಮಯ ನೀಡಿದ್ದು, ಅವರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಕೊವೀಡ್ ನಂತರ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಸೆಲೆಬ್ರೇಶನ್‌ಗೆ ನಟಿ ಬ್ರೇಕ್ ಹಾಕಿದ್ದರು. ಈ ಬಾರಿ ಅಭಿಮಾನಿಗಳ ಆಸೆಯಂತೆ ತಮ್ಮ ಹುಟ್ಟುಹಬ್ಬದ ದಿನವನ್ನು ಆಚರಿಸಿಕೊಂಡಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಫ್ಯಾನ್ಸ್ ತಂದಿರುವ ಕೇಕ್ ಅನ್ನು ಕತ್ತರಿಸಿ ಸಂಭ್ರಮಿಸಿದ್ದಾರೆ. ಪ್ರತಿಯೊಬ್ಬರಿಗೂ ಸೆಲ್ಫಿಗೆ ಪೋಸ್ ಕೊಟ್ಟು ನಟಿ ಖುಷಿಪಡಿಸಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳ ನಡೆಗೆ ಮುನಿಸಿಕೊಂಡ ಸಮಂತಾ

 

View this post on Instagram

 

A post shared by iamyashikarsy (@iamyashikarsy_)

‘ಮೊಗ್ಗಿನ ಮನಸ್ಸು’ (Moggina Manasu) ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ರಾಧಿಕಾ ಪಂಡಿತ್, ಸಾಗರ್, ದೊಡ್ಮನೆ ಹುಡುಗ, ಅದ್ಧೂರಿ, ಡ್ರಾಮಾ, ಕಡ್ಡಿಪುಡಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 2019ರಲ್ಲಿ ಕಡೆಯದಾಗಿ ‘ಆದಿಲಕ್ಷ್ಮಿ ಪುರಾಣ’ ಸಿನಿಮಾದಲ್ಲಿ ನಟಿಸಿದ್ದರು.

ಬೇಡಿಕೆಯಿರುವಾಗಲೇ ನಟಿ ಯಶ್ (Yash) ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ ಮದುವೆ ಬಳಿಕವೂ ಸಿನಿಮಾ ಮಾಡಿ ರಾಧಿಕಾ ಗಮನ ಸೆಳೆದರು. ಇದನ್ನೂ ಓದಿ:ಅಭಿಮಾನಿಯ ಅಸಭ್ಯ ವರ್ತನೆಗೆ ‘ಮಗಧೀರ’ ನಟಿ ಶಾಕ್

ಇದೀಗ ಮತ್ತೆ ಸಿನಿಮಾಗೆ ಕಮ್‌ಬ್ಯಾಕ್ ಆಗೋದಕ್ಕೆ ನಟಿ ಸಕಲ ಸಿದ್ಧತೆ ನಡೆಸಿದ್ದಾರೆ. ಹೊಸ ಬಗೆಯ ಕಥೆ ಕೇಳ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸಂತೂರ್ ಮಮ್ಮಿ ಆಗಿರುವ ರಾಧಿಕಾ ಪಂಡಿತ್ ಮತ್ತೆ ಬಣ್ಣ ಹಚ್ತಾರೆ ಎಂದು ಫ್ಯಾನ್ಸ್ ಕಾತರದಿಂದ ಎದುರು ನೋಡ್ತಿದ್ದಾರೆ. ಸದ್ಯ 40ನೇ ವರ್ಷಕ್ಕೆ ಕಾಲಿಟ್ಟಿರುವ ನಟಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

Share This Article