ಮಳೆ ಜೊತೆ ರಚಿತಾ ರಾಮ್ ತುಂಟಾಟ

Public TV
2 Min Read

ಸ್ಯಾಂಡಲ್ವುಡ್ (Sandalwood) ಡಿಂಪಲ್ ಕ್ವೀನ್ ರಚಿತಾ ರಾಮ್ (Rachitha Ram) ಅವರು ಸದ್ಯ ಮಳೆಗಾಲವನ್ನ ಎಂಜಾಯ್ ಮಾಡ್ತಿದ್ದಾರೆ. ಮಳೆ ಅಂದರೆ ತನಗೆ ಇಷ್ಟ ಎಂದು ರಚಿತಾ, ಮಳೆ ಜೊತೆಗಿನ ತುಂಟಾದ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಸೌಂದರ್ಯ ಹೆಚ್ಚಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಮೊರೆ ಹೋಗಿದ್ರಾ ಹನಿ ರೋಸ್?‌ ನಟಿ ಸ್ಪಷ್ಟನೆ

‘ಬುಲ್ ಬುಲ್’ (Bul Bul Film) ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 10 ವರ್ಷಗಳಾಗಿದೆ. ಬಗೆ ಬಗೆಯ ಪಾತ್ರಗಳ ಮೂಲಕ ರಚ್ಚು ರಂಜಿಸಿದ್ದಾರೆ. ‘ವೀರಂ’ (Veeram)  ಸಿನಿಮಾ ನಂತರ 5ಕ್ಕೂ ಹೆಚ್ಚು ಸಿನಿಮಾಗಳು ರಚಿತಾ ರಾಮ್ (Rachitha Ram) ಬ್ಯುಸಿಯಾಗಿದ್ದಾರೆ. ರಚಿತಾ ಕನ್ನಡದ ಬಹುಬೇಡಿಕೆಯ ನಟಿಯಾಗಿದ್ದಾರೆ. ಕನ್ನಡದ ಜೊತೆ ತೆಲುಗಿನಲ್ಲೂ ಡಿಂಪಲ್‌ ಕ್ವೀನ್‌ ರಚ್ಚು ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ:‘ಓ ಮೈ ಗಾಡ್ 2’ ಚಿತ್ರಕ್ಕೆ 20 ಕಡೆ ಕತ್ತರಿಯ ಜೊತೆಗೆ ‘ಎ’ ಸರ್ಟಿಫಿಕೇಟ್

ಎಲ್ಲೆಲ್ಲೂ ಮಳೆಯ ಅಬ್ಬರ ಜೋರಾಗಿದೆ. ವರುಣನ ರೌದ್ರ ಅವತಾರ ತಾಳಿದ್ದಾನೆ. ಸಹಜವಾಗಿ ಮಳೆ ಅಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ಯುವತಿಯರಿಗೆ ಮಳೆ ಜೊತೆ ಆಟವಾಡೋದಂದ್ರೆ ಭಾರೀ ಇಷ್ಟ. ಇದೀಗ ನಟಿ ರಚಿತಾ ರಾಮ್ ಕೂಡ ಮಳೆ ಜೊತೆ ಆಟವಾಡಿರುವ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಮಳೆ ಅಂದರೆ ಇಷ್ಟ ಎಂದು ನಟಿ ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಮಳೆ ತಲೆಯ ಮೇಲೆ ಬೀಳುವಾಗ ಓಡಿದ್ದಾರೆ. ಅದಕ್ಕೆ ಅಭಿಮಾನಿಯೊಬ್ಬ, ಮಳೆ ಅಂದರೆ ಇಷ್ಟ ಅಂತಾ ಹೇಳೋದ್ಯಾಕೆ, ಮಳೆ ಬಂದರೆ ಓಡೋದ್ಯಾಕೆ ಎಂದು ಕಾಲೆಳೆದಿದ್ದಾರೆ.

ವೀರಂ ಸಿನಿಮಾ ಬಳಿಕ ಮ್ಯಾಟ್ನಿ(Matnee), ಬ್ಯಾಡ್ ಮ್ಯಾನರ್ಸ್, ಶಬರಿ ಸರ್ಚಿಂಗ್ ಫಾರ್ ರಾವಣ, ಲವ್ ಮಿ ಔರ್ ಹೇಟ್ ಮಿ, ಸಂಜು ವೆಡ್ಸ್ ಗೀತಾ 2 (Sanju Weds Geetha 2) ಸಿನಿಮಾಗಳು ರಚಿತಾ ರಾಮ್ ಕೈಯಲ್ಲಿದೆ. ಒಂದೊಂದೇ ಸಿನಿಮಾಗಳು ತೆರೆಗೆ ಬರಲಿದೆ. ಸಂಜು ವೆಡ್ಸ್ ಗೀತಾ 2ನಲ್ಲಿ ರಚಿತಾ ರಾಮ್ ಪಾತ್ರ ಭಿನ್ನವಾಗಿದೆ ಸದ್ಯದಲ್ಲೇ ಈ ಬಗ್ಗೆ ಅಪ್‌ಡೇಟ್ ಸಿಗಲಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್