ನಾನು ಭೇಟಿಯಾದ ಅದ್ಭುತ ವ್ಯಕ್ತಿಗಳಲ್ಲಿ ದರ್ಶನ್ ಸಹ ಒಬ್ಬರು – ಡೆವಿಲ್ ನಾಯಕಿ ರಚನಾ ರೈ

Public TV
1 Min Read

– ದರ್ಶನ್ ಜೊತೆ ನಟಿಸಿದ ಅನುಭವ ಒಂದು ಪಾಠ

ರ್ಶನ್ ಅಭಿನಯದ ಡೆವಿಲ್ (Devil )ಸಿನಿಮಾದ ಎರಡನೇ ಹಾಡು ರಿಲೀಸ್ ಆಗಿ ಅಪಾರ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಸಿನಿಮಾದ ನಾಯಕಿ ರಚನಾ ರೈ (Rachana Rai) ಹಾಡಿನ ಸ್ಟಿಲ್‍ಗಳನ್ನ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಅದರ ಜೊತೆಗೆ ನಟ ಚಾಲೆಂಜಿಂಗ್‍ಸ್ಟಾರ್ ದರ್ಶನ್ (Darshan) ಜೊತೆ ನಟಿಸಿದ ಅನುಭವ, ಶೂಟಿಂಗ್ ಸೆಟ್‍ನಲ್ಲಿ ದರ್ಶನ್ ನಡೆದುಕೊಂಡ ರೀತಿಯ ಬಗ್ಗೆ ಹಂಚಿಕೊಂಡಿದ್ದಾರೆ.

ಸಾಮಾಜಿಕ ಪೋಸ್ಟ್ ಹಂಚಿಕೊಂಡಿರುವ ರಚನಾ ರೈ, `ನಿಮ್ಮಂಥಹಾ ಸೂಪರ್ ಸ್ಟಾರ್ ಜೊತೆಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಅದೃಷ್ಟ. ಸೆಟ್‍ನಲ್ಲಿ ನಿಮ್ಮ ಏಕಾಗ್ರತೆ, ನಿಮ್ಮ ತಾಳ್ಮೆ ಮತ್ತು ನಿಮ್ಮ ಅಚಲ ಸಮರ್ಪಣೆ, ಪಾತ್ರಗಳಿಗೆ ಜೀವ ತುಂಬುವ ನಿಮ್ಮ ಆ ಪ್ರಕ್ರಿಯೆಗಳನ್ನು ಪ್ರತಿದಿನವೂ ಸೆಟ್‍ನಲ್ಲಿ ನೋಡುವುದು ನನಗೆ ಒಂದು ಅದ್ಭುತ ಪಾಠವಾಯ್ತು. ಕ್ಯಾಮೆರಾ ಮುಂದೆ ಮಾತ್ರವಲ್ಲದೆ ಕ್ಯಾಮೆರಾ ಹಿಂದೆ ನಿಮ್ಮ ಪ್ರೀತಿ, ಆಪ್ತತೆ, ದಯೆ ನಿಮ್ಮ ವ್ಯಕ್ತಿತ್ವ ಇತರರಲ್ಲಿ ದೊಡ್ಡ ಛಾಪು ಮೂಡಿಸುತ್ತದೆ. ನಾನು ಭೇಟಿ ಆಗಿರುವ ಅದ್ಭುತ ವ್ಯಕ್ತಿಗಳಲ್ಲಿ ನೀವೂ ಒಬ್ಬರು. ಒಬ್ಬ ಅದ್ಭುತ ಸಹನಟ ಆಗಿದ್ದಕ್ಕೆ ನಿಮಗೆ ಧನ್ಯವಾದಗಳು. ಅದಕ್ಕಿಂತಲೂ ಹೆಚ್ಚಾಗಿ ಒಬ್ಬ ಅದ್ಭುತ ವ್ಯಕ್ತಿಯಾಗಿ ಜೊತೆಗಿದ್ದಿದ್ದಕ್ಕೆ ನಿಮಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ರಚನಾ ರೈ ಹಂಚಿಕೊಂಡ ಈ ಪೋಸ್ಟ್‍ಗೆ ದರ್ಶನ್ ಅಭಿಮಾನಿಗಳು ಅಪಾರ ಮೆಚ್ಚುಗೆಯನ್ನ ವ್ಯಕ್ತಪಡಿಸುತ್ತಿದ್ದಾರೆ. ಡೆವಿಲ್ ಸಿನಿಮಾದ ಎರಡನೇ ಹಾಡು ಬಿಡುಗೆಯಾಗಿದೆ. ಎಲ್ಲೆಲ್ಲೂ ಒಂದೇ ಒಂದು ಸಲಾ ಅಂತಾ ರಿಂಗಣಿಸುತ್ತಿದೆ. ಡಿಸೆಂಬರ್ 12ಕ್ಕೆ ರಾಜ್ಯಾದ್ಯಂತ ಡೆವಿಲ್ ಸಿನಿಮಾ ರಿಲೀಸ್ ಆಗಲಿದೆ. ಈ ನಿಟ್ಟಿನಲ್ಲಿ ಒಂದೊಂದೇ ಕಂಟೆಂಟ್ ರಿಲೀಸ್ ಮಾಡುವ ಮೂಲಕ ಪ್ರಚಾರ ಕಾರ್ಯವನ್ನ ಮುಂದುವರೆಸಿದೆ.

ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ದರ್ಶನ್ ಅನುಪಸ್ಥಿತಿಯಲ್ಲಿ ಸಿನಿಮಾ ಕೂಡಾ ಡಿಸೆಂಬರ್‍ಗೆ ತೆರೆಗೆ ಬರಲಿದೆ. ಶೂಟಿಂಗ್ ದಿನಗಳಲ್ಲಿ ರಚನಾ ರೈಗೆ, ಹೊಸ ಪ್ರತಿಭೆಗೆ ನಟ ದರ್ಶನ್ ತೋರಿದ ಕಾಳಜಿ, ನೀಡಿದ ಪ್ರೋತ್ಸಾಹ, ಪ್ರೀತಿಯ ಬಗ್ಗೆ ಮೆಲುಕು ಹಾಕಿದ್ದಾರೆ.

Share This Article