ಹಾಲಿವುಡ್ ಎಂಟ್ರಿ ಬಗ್ಗೆ ಶಾರುಖ್‌ಗೆ ತಿರುಗೇಟು ಕೊಟ್ಟ ಪ್ರಿಯಾಂಕಾ ಚೋಪ್ರಾ

Public TV
1 Min Read

ಬಾಲಿವುಡ್ (Bollywood) ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಈಗ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಿಕ್ ಜೋನಸ್ ಅವರನ್ನ ಮದುವೆಯಾಗಿ ಅಮೆರಿಕಾದಲ್ಲೇ ನಟಿ ಸೆಟಲ್ ಆಗಿದ್ದಾರೆ. ಹೀಗಿರುವಾಗ ಹಾಲಿವುಡ್ (Hollywood) ಎಂಟ್ರಿಯ ಬಗ್ಗೆ ಪ್ರಿಯಾಂಕಾ ಮಾತನಾಡಿದ್ದಾರೆ.

ಪ್ರಿಯಾಂಕಾ ನಟನೆಯ ಹಾಲಿವುಡ್‌ನ `ಸಿಟಾಡೆಲ್’ (Citadel) ಸಿನಿಮಾ ಮುಂದಿನ ಏಪ್ರಿಲ್ 28ಕ್ಕೆ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಇದೀಗ ತಮ್ಮ ಸಿಟಾಡೆಲ್ ವೆಬ್ ಸರಣಿ ಬಗ್ಗೆ ಮಾತನಾಡಿದ್ದಾರೆ.  ಶಾರುಖ್ ಖಾನ್‌ (Sharukh Khan) ಹಾಲಿವುಡ್‌ ಎಂಟ್ರಿ ಬಗ್ಗೆ ನೀಡಿದ್ದ ಹೇಳಿಕೆಗೆ ಪ್ರಿಯಾಂಕಾ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಡಾಲಿ ನಟನೆಯ `ಹೊಯ್ಸಳ’ ಚಿತ್ರದ ಟೈಟಲ್ ಬದಲಾಗಿದ್ದೇಕೆ?

ಸಂದರ್ಶನವೊಂದರಲ್ಲಿ ಶಾರುಖ್ ಖಾನ್ ಹೇಳಿಕೆಯ ಬಗ್ಗೆ ಪ್ರಿಯಾಂಕಾ ಚೋಪ್ರಾ ಅವರಿಗೆ ಪ್ರಶ್ನೆ ಮಾಡಲಾಯಿತು. ಶಾರುಖ್ ಈ ಹಿಂದೆ ತಾನು ಯಾಕೆ ಹಾಲಿವುಡ್‌ಗೆ ಹೋಗಲ್ಲ ಎಂದು ಬಹಿರಂಗಪಡಿಸಿದ್ದರು. ಹಾಲಿವುಡ್‌ಗೆ ಹೋಗುವ ಪ್ರಶ್ನೆ ಮಾಡಿದ್ದಕ್ಕೆ ಶಾರುಖ್, ನಾನೇಕೆ ಅಲ್ಲಿಗೆ ಹೋಗಬೇಕು. ನಾನು ಇಲ್ಲೇ ಆರಾಮಾಗಿ ಇದ್ದೀನಿ ಎಂದು ಹೇಳಿದರು. ಶಾರುಖ್ ಮಾತನ್ನು ಉಲ್ಲೇಖಿಸಿ ಪ್ರಿಯಾಂಕಾ ಅವರಿಗೆ ಪ್ರಶ್ನೆ ಮಾಡಲಾಯಿತು. ಉತ್ತರ ನೀಡಿದ ಪ್ರಿಯಾಂಕಾ ತನಗೆ ಆರಾಮಾಗಿ ಇರುವುದು ಬೋರಿಂಗ್ ಎಂದು ಹೇಳಿದ್ದಾರೆ.

ಆರಾಮಾಗಿ ಇರುವುದು ನನಗೆ ಬೋರ್ ಆಗಿದೆ. ಹಾಗಂತ ನಾನು ಅಹಂಕಾರಿಯಲ್ಲ. ನಾನು ಸೆಟ್‌ಗೆ ಕಾಲಿಟ್ಟಾಗ ಏನು ಮಾಡುತ್ತೇನೆ ಎಂದು ಅರಿವಿದೆ. ನನಗೆ ಆತ್ಮವಿಶ್ವಾಸವಿದೆ. ನಾನು ಈಗಲೂ ಆಡಿಶನ್ ತೆಗೆದುಕೊಳ್ಳಲು ಸಿದ್ಧಳಿದ್ದೇನೆ. ನಾನು ಈಗಲೂ ಕೆಲಸ ಮಾಡಲು ಸಿದ್ಧ. ಇನ್ನೊಂದು ದೇಶಕ್ಕೆ ಕಾಲಿಟ್ಟಾಗ ನನ್ನ ಯಶಸ್ಸನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ಹೇಳಿದ್ದಾರೆ. ಪ್ರಿಯಾಂಕಾ ಹೇಳಿಕೆ ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದು ಶಾರುಖ್ ಖಾನ್ ಅವರಿಗೆ ಕೊಟ್ಟ ತಿರುಗೇಟು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *