ಪ್ರಿ- ಆಸ್ಕರ್ ಇವೆಂಟ್‌ನಲ್ಲಿ ಭಾಗಿಯಾದ Priyanka Chopra ದಂಪತಿ

Public TV
1 Min Read

ಬಾಲಿವುಡ್ (Bollywood) ನಟಿ ಪ್ರಿಯಾಂಕಾ ಚೋಪ್ರಾ – ನಿಕ್ ದಂಪತಿ ಇತ್ತೀಚಿಗೆ ಪ್ರಿ- ಆಸ್ಕರ್ (Pre-Oscar) ಇವೆಂಟ್‌ನಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಜೋಡಿ ಸುದ್ದಿ ಮಾಡಿದೆ.

 

View this post on Instagram

 

A post shared by Priyanka (@priyankachopra)

ಪ್ರಿ-ಆಸ್ಕರ್ ಕಾರ್ಯಕ್ರಮ ಮಾರ್ಚ್ 8ರಂದು ಲಾಸ್ ಏಂಜಲೀಸ್‌ನಲ್ಲಿ ನಡೆದಿದ್ದು, ಪ್ರಿಯಾಂಕಾ- ನಿಕ್ ದಂಪತಿ ಭಾಗವಹಿಸಿದ್ದಾರೆ. ಈ ಕುರಿತ ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಆಸ್ಕರ್ ಅಕಾಡೆಮಿ ಅವಾರ್ಡ್ ಇವೆಂಟ್ ಮಾರ್ಚ್ 12ರಂದು ಲಾಸ್ ಏಂಜಲೀಸ್‌ನಲ್ಲಿ ನಡೆಯಲಿದೆ.

ಪ್ರಿಯಾಂಕಾ ಚೋಪ್ರಾ (Priyanka Chopra) ಹಾಲಿವುಡ್ (Hollywood) ವೆಬ್ ಸಿರೀಸ್ `ಸಿಟಾಡೆಲ್’ (Citadel) ರಿಲೀಸ್‌ಗಾಗಿ ಎದುರು ನೋಡ್ತಿದ್ದಾರೆ. ಈಗಾಗಲೇ ನಟಿಯ ಟ್ರೈಲರ್ ಬಿಡುಗಡೆಯಾಗಿದ್ದು, ಆ್ಯಕ್ಷನ್ ಅವತಾರದಲ್ಲಿ‌ ಪ್ರಿಯಾಂಕಾ ಮಿಂಚಿದ್ದಾರೆ. ಇದನ್ನೂ ಓದಿ: ರಿಷಬ್ ಶೆಟ್ಟಿ ಮಗಳ ಬರ್ತ್‌ಡೇ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

 

View this post on Instagram

 

A post shared by Priyanka (@priyankachopra)

`ಸಿಟಾಡೆಲ್’ ವೆಬ್ ಸರಣಿ ಅಮೆಜಾನ್ ಪ್ರೈಂ ವೀಡಿಯೋ ಮೂಲಕ ಪ್ರಸಾರವಾಗಲಿದೆ. ಇದೇ ಏಪ್ರಿಲ್ 28ಕ್ಕೆ ಸ್ಟ್ರೀಮ್ ಆಗಲಿದೆ. ಪ್ರಿಯಾಂಕಾ ನಟನೆಯ ಸಿಟಾಡೆಲ್ ಹಾಲಿವುಡ್ ಅಂಗಳದಲ್ಲಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತೆ ಎಂಬುದನ್ನ ಕಾದುನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *