ಸಿನಿಮಾ ಆಫರ್‌ಗಾಗಿ ಹೀಗೆಲ್ಲಾ ಮಾಡಿದ್ರಾ ಪೂನಂ ಪಾಂಡೆ?

Public TV
1 Min Read

ಬಾಲಿವುಡ್ ಹಾಟ್ ನಟಿ ಪೂನಂ ಪಾಂಡೆ (Poonam Pandey) ನಿಧನದ ಸುದ್ದಿ ಇನ್ನೂ ಅಭಿಮಾನಿಗಳು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪೂನಂ ಹಠಾತ್ ನಿಧನ (ಫೆ.2) ಫ್ಯಾನ್ಸ್‌ಗೆ ಶಾಕ್ ಕೊಟ್ಟಿದೆ. ಇನ್ನೂ ಸದಾ ವಿವಾದಗಳಿಂದ ಸುದ್ದಿಯಾಗ್ತಿದ್ದ ನಟಿ ಪೂನಂಗೆ ಬದುಕು ಬದಲಿಸುವ ಉತ್ತಮ ಪ್ರಾಜೆಕ್ಟ್‌ಗಳು ಸಿಗಲೇ ಇಲ್ಲ. ಕೆಲಸ ಇಲ್ಲದಿರುವ ಬಗ್ಗೆ ನಟಿ ಓಪನ್ ಆಗಿ ಮಾತನಾಡಿದ್ದರು.

ಸದಾ ಒಂದಲ್ಲಾ ಒಂದು ಕಾಂಟ್ರವರ್ಸಿ ಮೂಲಕ ಪೂನಂ ಸದ್ದು ಮಾಡುತ್ತಿದ್ದರು. ಸಿನಿಮಾ ಸಿಗಬೇಕು, ಕೆಲಸ ಮಾಡಬೇಕು ಎಂದಿದ್ದ ಪೂನಂಗೆ ಸರಿಯಾದ ಅವಕಾಶಗಳು ಸಿಕ್ಕಿರಲಿಲ್ಲ. 2022ರಲ್ಲಿ ಕಂಗನಾ ರಣಾವತ್ ನಡೆಸಿಕೊಟ್ಟಿದ್ದ ‘ಲಾಕಪ್’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ಅವರು ಹಲವು ವಿಚಾರಗಳನ್ನು ಹೇಳಿಕೊಂಡಿದ್ದರು. ಇದನ್ನೂ ಓದಿ:ಗದಗ ಕಟೌಟ್ ದುರಂತ: ಗಾಯಾಳುಗಳ ಕುಟುಂಬಕ್ಕೆ ಯಶ್ 1 ಲಕ್ಷ ಪರಿಹಾರ

ವಿವಾದಾತ್ಮಕ ವ್ಯಕ್ತಿಗಳೇ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ನನ್ನನ್ನು ಜನರು ಕೇವಲ ವಿವಾದಗಳಿಂದ ಮಾತ್ರ ಜಡ್ಜ್ ಮಾಡುತ್ತಾರೆ. ನನ್ನ ಬದುಕಿನಲ್ಲಿ ಏನೆಲ್ಲ ಆಗಿದೆ ಎಂಬುದು ಅವರಿಗೆ ತಿಳಿದಿಲ್ಲ ಎಂದು ಪೂನಂ ಪಾಂಡೆ ಹೇಳಿದ್ದರು. ನನಗೆ ಕೆಲಸ ಇಲ್ಲದಾಗ ವಿವಾದ ಮಾಡಿಕೊಂಡರೆ ಕೆಲಸ ಸಿಗುತ್ತದೆ ಎಂದು ಅನೇಕರು ಹೇಳಿದ್ದರು. ಆದರೆ ಅದು ತಪ್ಪು ಅನ್ನೋದು ಈಗ ಅರಿವಾಗಿದೆ. ವಿವಾದ ಮಾಡಿಕೊಳ್ಳುವ ಮೂಲಕ ಪೂನಂ ತಪ್ಪು ಹೆಜ್ಜೆ ಇಟ್ಟಿದ್ದರು. ಒಳ್ಳೆಯ ಕೆಲಸ ಮಾಡಿ ಮೆಚ್ಚುಗೆ ಗಳಿಸುತ್ತೇನೆ ಎಂದು ಪೂನಂ ಓಪನ್ ಆಗಿ ಹೇಳಿಕೊಂಡಿದ್ದರು. ಆದರೆ ಅವರಿಗೆ ಸೂಕ್ತ ಪ್ರಾಜೆಕ್ಟ್‌ಗಳು ಅರಸಿ ಬರಲೇ ಇಲ್ಲ.

2013ರಲ್ಲಿ ‘ನಶಾ’ (Nasha) ಎಂಬ ಸಿನಿಮಾ ಮೂಲಕ ಬಾಲಿವುಡ್‌ಗೆ ಪೂನಂ ಪಾಂಡೆ ಪಾದಾರ್ಪಣೆ ಮಾಡಿದ್ದರು. ‘ದಿ ಜರ್ನಿ ಆಫ್ ಕರ್ಮ’, ‘ಲವ್ ಇನ್ ಎ ಟ್ಯಾಕ್ಸಿ’, ಕನ್ನಡದ ‘ಲವ್ ಇನ್ ಪಾಯಿಸನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Share This Article