ಲಂಕೆಯಲ್ಲಿ ಕರಾವಳಿ ಬ್ಯೂಟಿ ಪೂಜಾ ಹೆಗ್ಡೆ

Public TV
1 Min Read

ಹುಭಾಷಾ ನಟಿ ಪೂಜಾ ಹೆಗ್ಡೆ (Pooja Hegde) ಇತ್ತೀಚಿಗೆ ಮಂಗಳೂರಿಗೆ (Mangaluru) ಬಂದಿದ್ದರು. ಈ ಬೆನ್ನಲ್ಲೇ ಶ್ರೀಲಂಕಾಗೆ (Srikanka) ನಟಿ ಪೂಜಾ ಹೆಗ್ಡೆ ಹಾರಿದ್ದಾರೆ. ಈ ಕುರಿತ ಫೋಟೋವನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಬಾಲಿವುಡ್‌ನ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಚಿತ್ರದಲ್ಲಿ ಸಲ್ಮಾನ್ ಖಾನ್‌ಗೆ ಜೋಡಿಯಾಗಿ ನಟಿಸಿದ್ದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡೋದ್ರಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ರಿಲೀಸ್ ಬಳಿಕ ನಟಿ ಮಂಗಳೂರಿಗೆ ತೆರಳಿ ಕಾಡು ಮೇಡು ಸುತ್ತಿ, ಒಳ್ಳೆಯ ಮೀನೂಟ ಮಾಡಿ ಎಂಜಾಯ್ ಮಾಡಿದ್ದರು. ಇದನ್ನೂ ಓದಿ:ಶಂಕರ್ ನಾಗ್ ಇದ್ದಿದ್ರೆ ಕರ್ನಾಟಕದಲ್ಲಿ ಸ್ಲಮ್ ಇರ್ತಾ ಇರಲಿಲ್ಲ- ಸಿಹಿ ಕಹಿ ಚಂದ್ರು

 

View this post on Instagram

 

A post shared by Pooja Hegde (@hegdepooja)

ಇದೀಗ ಮತ್ತೆ ಶ್ರೀಲಂಕಾಗೆ (Srilanka) ಪೂಜಾ ಹೆಗ್ಡೆ ತೆರಳಿದ್ದಾರೆ. ಸುಂದರ ತಾಣಗಳಿಗೆ ಭೇಟಿ ನೀಡ್ತಿದ್ದಾರೆ. ಶ್ರೀಲಂಕಾದ ಫೋಟೋಗಳನ್ನ ನಟಿ ಶೇರ್ ಮಾಡಿದ್ದಾರೆ. ವೆಸ್ಟರ್ನ್ ಲುಕ್ ನಟಿ ಮಿಂಚಿದ್ದಾರೆ.

 

View this post on Instagram

 

A post shared by Pooja Hegde (@hegdepooja)

ಪೂಜಾ ಹೆಗ್ಡೆ ಕೈಯಲ್ಲಿ, ಮಹೇಶ್ ಬಾಬು ಜೊತೆಗಿನ ಪ್ರಾಜೆಕ್ಟ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿ, ತೆಲುಗು, ತಮಿಳು ಚಿತ್ರಗಳಲ್ಲಿ ಪೂಜಾ ಕಾಣಿಸಿಕೊಳ್ತಿದ್ದಾರೆ.

Share This Article