ತೆಲುಗು ನಟ ನಾನಿ ಜೊತೆ ಪೂಜಾ ಹೆಗ್ಡೆ ರೊಮ್ಯಾನ್ಸ್

Public TV
1 Min Read

ರಾವಳಿ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ಸದ್ಯ ಬಾಲಿವುಡ್‌ನಲ್ಲಿ (Bollywood) ಬ್ಯುಸಿಯಾಗಿದ್ದಾರೆ. ಜೊತೆಗೆ ತೆಲುಗು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಇದೀಗ ನ್ಯಾಚುರಲ್ ಸ್ಟಾರ್ ನಾನಿಗೆ (Nani) ನಾಯಕಿಯಾಗಿ ಪೂಜಾ ಹೆಗ್ಡೆ ಸೆಲೆಕ್ಟ್ ಆಗಿದ್ದಾರೆ.

ಐರೆನ್ ಲೆಗ್ ಎಂದು ಕರೆಸಿಕೊಳ್ತಿದ್ದ ನಟಿ ಪೂಜಾಗೆ ಈಗ ಉತ್ತಮ ಅವಕಾಶಗಳು ಅರಸಿ ಬರುತ್ತಿವೆ. ನಾಗಚೈತನ್ಯ ಜೊತೆಗಿನ ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ. ಇದೀಗ ನಾನಿ ಹೊಸ ಸಿನಿಮಾದಲ್ಲಿ ಪೂಜಾ ರೊಮ್ಯಾನ್ಸ್ ಮಾಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ:ಲಿಪ್‌ಲಾಕ್‌ ಮಾಡಿದ್ಮೇಲೆ ಬದಲಾಯ್ತು ಲಕ್-‌ ಅನುಪಮಾಗೆ ಬಂಪರ್‌ ಆಫರ್ಸ್

ನಾನಿ ಕಥೆಗೆ ತುಂಬಾನೇ ಪ್ರಾಮುಖ್ಯತೆ ಕೊಡುತ್ತಾರೆ. ಈ ಕಥೆ ಪ್ರೇಕ್ಷಕರಿಗೆ ಡಿಫರೆಂಟ್ ಎನಿಸಲಿದೆ ಎಂದು ಅನಿಸಿದರೆ ಮಾತ್ರ ಆ ಪ್ರಾಜೆಕ್ಟ್ ಒಪ್ಪಿಕೊಳ್ತಾರೆ. ಇದೀಗ ನಿರ್ದೇಶಕ ಸುಜೀತ್ ಸಿನಿಮಾಗೆ ನಾನಿ ಓಕೆ ಎಂದಿದ್ದಾರೆ. ಈ ಚಿತ್ರದಲ್ಲಿ ನಾನಿ ಮತ್ತು ಕುಡ್ಲದ ಬೆಡಗಿ ಪೂಜಾ ಹೆಗ್ಡೆ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ.

ಇಬ್ಬರೂ ಜೊತೆಯಾಗಿ ನಟಿಸುವ ಬಗ್ಗೆ ಹಲವು ಬಾರಿ ಸುದ್ದಿಯಾಗಿದೆ. ಆದರೆ ಈ ಬಾರಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸದ್ಯದಲ್ಲೇ ಈ ಸಿನಿಮಾದ ಬಗ್ಗೆ ಅಧಿಕೃತ ಅಪ್‌ಡೇಟ್ ಹೊರಬೀಳಲಿದೆ.

Share This Article