ಐರೆನ್ ಲೆಗ್ ಎಂದು ಕೆಣಕುವವರಿಗೆ ಕೆಲಸದ ಮೂಲಕ ಉತ್ತರ ಕೊಟ್ರು ಪೂಜಾ ಹೆಗ್ಡೆ

Public TV
1 Min Read

ಮಂಗಳೂರಿನ ಬೆಡಗಿ ಪೂಜಾ ಹೆಗ್ಡೆಗೆ (Pooja Hegde) ಸದ್ಯದ ಮಟ್ಟಿಗೆ ಸಕ್ಸಸ್ ಸಿಗದೇ ಇದ್ದರೂ ಸಿನಿಮಾ ಅವಕಾಶಗಳು ಮಾತ್ರ ಕಮ್ಮಿಯಾಗಿಲ್ಲ. ಅಹಾನ್ ಶೆಟ್ಟಿ ಜೊತೆ ನಟಿಸಲಿರುವ ಪ್ರಾಜೆಕ್ಟ್‌ವೊಂದಿಗೆ ಶಾಹಿದ್ ಕಪೂರ್ (Shahid Kapoor) ಜೊತೆ ಹೊಸ ಸಿನಿಮಾ ಮಾಡ್ತಿದ್ದಾರೆ. ಐರೆನ್ ಲೆಗ್ ಎಂದು ಕೆಣಕಿ ಮಾತನಾಡುತ್ತಿದ್ದವರಿಗೆ ನಟಿ ಬ್ಯಾಕ್ ಟು ಬ್ಯಾಕ್ ಅವಕಾಶ ಪಡೆಯುತ್ತಿದ್ದಾರೆ.

ಇತ್ತೀಚೆಗಷ್ಟೇ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರ ಅಹಾನ್‌ಗೆ ಪೂಜಾ ನಾಯಕಿ ಎಂದು ಅನೌನ್ಸ್ ಮಾಡಲಾಗಿತ್ತು. ಈ ಬೆನ್ನಲ್ಲೇ ಮತ್ತೊಂದು ಚಿತ್ರದ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ದಿಲ್ಲದೇ ಶಾಹಿದ್ ಕಪೂರ್ ನಟನೆಯ ‘ದೇವಾ’ ಸಿನಿಮಾದ ಚಿತ್ರೀಕರಣದಲ್ಲಿ ಪೂಜಾ ಭಾಗಿಯಾಗಿದ್ದಾರೆ.

ಮೊದಲ ಬಾರಿಗೆ ಶಾಹಿದ್ ಕಪೂರ್ ಜೊತೆ ಪೂಜಾ ಜೋಡಿಯಾಗಿ ನಟಿಸುತ್ತಿದ್ದಾರೆ. ಪ್ರಾಮುಖ್ಯತೆ ಇರುವ ಭಿನ್ನ ಪಾತ್ರದಲ್ಲಿ ಪೂಜಾ ನಟಿಸುತ್ತಿದ್ದಾರೆ. ಹಾಗಾಗಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ದೇವಾ ಸಿನಿಮಾ ಕಳೆದ ಅಕ್ಟೋಬರ್‌ನಲ್ಲಿಯೇ ಶುರುವಾಗಿದೆ. ಆದರೆ ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಎಲ್ಲೂ ಬಿಟ್ಟು ಕೊಡುತ್ತಿರಲಿಲ್ಲ. ಈಗ ಮುಂಬೈನಲ್ಲಿ ಸೆಕೆಂಡ್‌ ಶೆಡ್ಯೂಲ್‌ ಶೂಟಿಂಗ್‌ ಭರದಿಂದ ನಡೆಯುತ್ತಿದೆ.

ಈ ಚಿತ್ರವನ್ನು ಮಲಯಾಳಂನ ಹೆಸರಾಂತ ನಿರ್ಮಾಪಕ ರೋಶನ್ ಆಂಡ್ರ್ಯೂಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ದೇವಾ ಸಿನಿಮಾ ಇದೇ ಅಕ್ಟೋಬರ್ 11ಕ್ಕೆ ರಿಲೀಸ್ ಆಗಲಿದೆ. ಇದನ್ನೂ ಓದಿ:‘ಪುಷ್ಪ’ಗಾಗಿ ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಜಾಹ್ನವಿ ಕಪೂರ್

ಸಲ್ಮಾನ್ ಖಾನ್ ಜೊತೆಗಿನ ‘ಕಿಸಿ ಕಾ ಬಾಯ್ ಕಿಸಿ ಕೀ ಜಾನ್’ ಸಿನಿಮಾದಲ್ಲಿ ಪೂಜಾ ಹೆಗ್ಡೆ ಕಡೆಯದಾಗಿ ನಟಿಸಿದ್ದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು. ಈಗ ಒಂದು ವರ್ಷ ನಂತರ ಮತ್ತೆ ಪೂಜಾ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ, ಶ್ರೀಲೀಲಾ, ನೇಹಾ ಶೆಟ್ಟಿ ಅವರಂತಹ ನಟಿಮಣಿಯರ ಮಧ್ಯೆ ಪೂಜಾ ಹೆಗ್ಡೆಗೆ ಬೇಡಿಕೆಯೇನು ಕಮ್ಮಿಯಾಗಿಲ್ಲ. ಐರೆನ್ ಲೆಗ್ ನಟಿ ಎಂದು ಕಿಡಿಕಾರುವವರಿಗೆ ಸೈಲೆಂಟ್ ಆಗಿ ತಮ್ಮ ಸಿನಿಮಾದ ಅಪ್‌ಡೇಟ್ ಮೂಲಕ ನಟಿ ಉತ್ತರ ನೀಡುತ್ತಿದ್ದಾರೆ.

Share This Article