ಪ್ರಭಾಸ್‌ಗಾಗಿ ಏನು ಬೇಕಾದ್ರೂ ಮಾಡ್ತೀನಿ ಎಂದ ‘ಹೆಡ್‌ಬುಷ್’ ನಟಿ ಪಾಯಲ್

Public TV
1 Min Read

ನ್ನಡದ ‘ಹೆಡ್‌ಬುಷ್’ (Headbush Film) ನಟಿ ಪಾಯಲ್ ರಜಪೂತ್ (Payal Rajput) ತೆಲುಗಿನ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಸಿನಿಮಾವೊಂದರ ಸಂದರ್ಶನವೊಂದರಲ್ಲಿ ಪ್ರಭಾಸ್‌ಗಾಗಿ ಏನು ಬೇಕಾದ್ರೂ ಮಾಡ್ತೀನಿ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ನನ್ನ ಜೀವನದ ಆಧಾರಸ್ತಂಭ- ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಪತ್ನಿ ಲವ್ಲಿ ವಿಶ್

ಚಿತ್ರರಂಗದಲ್ಲಿನ ನೆಚ್ಚಿನ ನಟ, ನಟಿಯರ ಬಗ್ಗೆ ಮಾತನಾಡಿದ್ದಾರೆ. ಇಲಿಯಾನಾ ಮತ್ತು ಅನುಷ್ಕಾ ಶೆಟ್ಟಿ ಎಂದರೆ ನನಗೆ ತುಂಬಾ ಇಷ್ಟ ಎಂದು ಪಾಯಲ್ ಹೇಳಿದ್ದಾರೆ. ಅಲ್ಲದೇ, ಪವನ್ ಕಲ್ಯಾಣ್ ಸಿನಿಮಾಗಳನ್ನು ಹೆಚ್ಚಾಗಿ ನೋಡುತ್ತೇನೆ. ಅವಕಾಶ ಸಿಕ್ಕರೆ ಮಹೇಶ್ ಬಾಬು, ಪ್ರಭಾಸ್ ಚಿತ್ರಗಳಲ್ಲಿ ನಟಿಸುವ ಆಸೆಯಿದೆ. ಪ್ರಭಾಸ್ (Prabhas) ನನ್ನ ನೆಚ್ಚಿನ ವ್ಯಕ್ತಿ ಎಂದು ಪಾಯಲ್ ಮಾತನಾಡಿದ್ದಾರೆ.

ಇನ್ನೂ ಪ್ರಭಾಸ್‌ಗೆ ನಾನು ಅಡುಗೆ ಮಾಡಿ ಬಡಿಸಲು ಇಷ್ಟಪಡುತ್ತೇನೆ. ಅಷ್ಟೇ ಅಲ್ಲ, ಅವರು ಏನು ಕೇಳುತ್ತಾರೋ ಅದನ್ನು ಮಾಡಿ ಕೊಡಲು ಸಿದ್ಧ ಎಂದಿದ್ದಾರೆ. ನನಗೆ ರಾಜ್ಮಾ ರೈಸ್ ತುಂಬಾ ಇಷ್ಟ. ಅದನ್ನು ವಿಶೇಷವಾಗಿ ಅಡುಗೆ ಮಾಡಿ ಪ್ರಭಾಸ್‌ಗೆ ನನ್ನ ಕೈಯಿಂದ ತಿನ್ನಿಸಲು ಬಯಸುತ್ತೇನೆ. ಅಂತಹ ಅವಕಾಶ ಬಂದರೆ ನಾನು ಅದನ್ನು ಬಿಟ್ಟು ಕೊಡುವುದಿಲ್ಲ ಎಂದಿದ್ದಾರೆ ‘ಹೆಡ್‌ಬುಷ್’ ನಟಿ.

ಅಂದಹಾಗೆ, ಇತ್ತೀಚೆಗೆ ತೆರೆಕಂಡ ‘ರಕ್ಷಣಾ’ (Rakshana) ಸಿನಿಮಾದಲ್ಲಿ ನಟಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಥಿಯೇಟರ್ ಬಳಿಕ ಒಟಿಟಿಯಲ್ಲಿ ರಿಲೀಸ್ ಆಗಿ ಸಿನಿಮಾ ಸದ್ದು ಮಾಡುತ್ತಿದೆ.

Share This Article