ಪುನೀತ್ ರಾಜ್‌ಕುಮಾರ್ ಜೊತೆ ತೆರೆ ಹಂಚಿಕೊಂಡಿದ್ದ ನಟಿಗೆ ಕಿರುಕುಳ- ಆರೋಪಿ ಬಂಧನ

Public TV
1 Min Read

ತಿರುವನಂತಪುರಂ: ದಕ್ಷಿಣ ಭಾರತದ ಜನಪ್ರಿಯ ನಟಿ ಪಾರ್ವತಿ ತಿರುವೋತು ಅವರನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲ್ಲಂ ಮೂಲದ ಅಫ್ಸಲ್ (34) ಬಂಧಿತ ಆರೋಪಿ. ನಟಿಗೆ ನಿರಂತರ ಫೋನ್ ಕರೆಗಳ ಮೂಲಕ ಆರೋಪಿಯು ತೊಂದರೆಯನ್ನು ನೀಡುತ್ತಿದ್ದ. ಅಷ್ಟೇ ಅಲ್ಲದೆ ಈತ ಆಹಾರ ಪೊಟ್ಟಗಳನ್ನು ನೀಡಲು ಕೊಚ್ಚಿಯಲ್ಲಿರುವ ನಟಿ ಪಾರ್ವತಿ ನಿವಾಸಕ್ಕೆ ಆಗಾಗ ಬಂದು ಅಲ್ಲಿನ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುತ್ತಿದ್ದ.

ಕಳೆದ ಕೆಲವು ವರ್ಷಗಳಿಂದ ಫೋನ್ ಸಂದೇಶಗಳ ಮೂಲಕ ನಟಿಗೆ ತೊಂದರೆ ನೀಡುತ್ತಿದ್ದನು. ಇದರ ಬೆನ್ನಲ್ಲೇ ನಟಿ ಎರ್ನಾಕುಲಂನ ಮರಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಆರೋಪಿ ಅಫ್ಸಲ್‌ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಹೆರಿಗೆ ನಂತರ ತೂಕ ಇಳಿಸಿಕೊಳ್ಳೋದು ಸುಲಭ ಅಲ್ಲ: ಯುವರತ್ನ ನಟಿ 

ನಟಿ ಪಾರ್ವತಿ ಅವರು ಕನ್ನಡದಲ್ಲೂ ನಟಿಸಿದ್ದರು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜೊತೆ ‘ಮಿಲನ್’ ಹಾಗೂ ‘ಪೃಥ್ವಿ’ ಸಿನಿಮಾದಲ್ಲಿ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದರು. ಇತ್ತೀಚೆಗೆ ವಸಂತ್ ನಿರ್ದೇಶನದ ಸಿವರಂಜಿನಿಯಂ ಇನ್ನುಮ್ ಸಿಲಾ  ಪೆಂಗಲುಮ್ ನಲ್ಲಿನ ಅಭಿನಯಿಸಿ ಹೆಚ್ಚಿನ ಜನಪ್ರಿಯತೆ ಗಳಿಸಿದ್ದರು. ಸಿವರಂಜಿನಿಯಂ ಇನ್ನುಮ್ ಸಿಲಾ ಪೆಂಗಲುಮ್ ಸಿನಿಮಾವು ಅಶೋಕ ಮಿತ್ರನ್, ಅಧವನ್ ಮತ್ತು ಜಯಮೋಹನ್ ಬರೆದ ಕಥೆಗಳನ್ನು ಆಧರಿಸಿದ ಮೂರು ಮಹಿಳಾ ಕೇಂದ್ರಿತ ಕಿರುಚಿತ್ರಗಳ ಸಂಕಲನವಾಗಿದೆ. ಈ ಚಿತ್ರದಲ್ಲಿ ಲಕ್ಷ್ಮಿ ಪ್ರಿಯಾ ಚಂದ್ರಮೌಳಿ, ಪಾರ್ವತಿ ತಿರುವೋತ್ತು ಮತ್ತು ಕಾಳೇಶ್ವರಿ ಶ್ರೀನಿವಾಸನ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.  ಇದನ್ನೂ ಓದಿ: ಕಪಿಲ್‌ ದೇವ್‌ ಆಗಲು ನಿತ್ಯ 4 ಗಂಟೆ ಕ್ರಿಕೆಟ್‌ ಅಭ್ಯಾಸ ಮಾಡುತ್ತಿದ್ದ ರಣವೀರ್‌ ಸಿಂಗ್‌!

 

Share This Article
Leave a Comment

Leave a Reply

Your email address will not be published. Required fields are marked *