ಮದುವೆ ಡ್ರೆಸ್ ಮೇಲೆ ಪತಿಯ ಹೆಸರು ಬರೆಯಿಸಿಕೊಂಡ ನಟಿ ಪರಿಣಿತಿ ಚೋಪ್ರಾ

Public TV
1 Min Read

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಸಂಸದ ರಾಘವ್ ಚಡ್ಡಾ ವಿವಾಹ ಅದ್ಧೂರಿಯಾಗಿ ನಡೆಯಿತು. ಅದರಲ್ಲೂ ಪರಿಣಿತಿ ಮದುವೆಗಾಗಿ ಡಿಸೈನ್ ಮಾಡಿದ ಡ್ರೆಸ್ (Dress)ಸಾಕಷ್ಟು ವೈರಲ್ ಆಗಿದೆ. ಮದುವೆ ಡ್ರೆಸ್ ಮೇಲೆ ಪರಿಣಿತಿ ತಮ್ಮ ಪತಿ ‘ರಾಘವ್’ ಹೆಸರು ಬರೆಯಿಸಿಕೊಂಡಿದ್ದು ಮೆಚ್ಚುಗೆಗೆ ಕಾರಣವಾಗಿದೆ. ಪರಿಣಿತಿಯ ಪ್ರೀತಿಯ ಬಗ್ಗೆ ಅಭಿಮಾನಿಗಳು ಕೊಂಡಾಡಿದ್ದಾರೆ.

ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghav Chadha) ಸೆ.24ರಂದು ರಾಜಸ್ಥಾನದ ಲೀಲಾ ಪ್ಯಾಲೇಸ್‌ನಲ್ಲಿ ಅದ್ದೂರಿಯಾಗಿ ಮದುವೆ ನೆರವೇರಿದೆ. ಪರಿಣಿತಿ-ರಾಘವ್ ಕುಟುಂಬಸ್ಥರ ಸಮ್ಮುಖದಲ್ಲಿ ಸಿಖ್‌ ಪದ್ಧತಿಯಂತೆ ಮದುವೆಯಾಗಿದ್ದಾರೆ. ಇದೀಗ ಪರಿಣಿತಿ (Parineeti Chopra) ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಸೆ.24ರ ಸಂಜೆ 6:30ಕ್ಕೆ ಶುಭ ಮುಹೂರ್ತದಲ್ಲಿ ಹೊಸ ಬಾಳಿಗೆ ಈ ಜೋಡಿ ಕಾಲಿಟ್ಟಿದೆ. ಸ್ಟಾರ್ ಮದುವೆಗೆಂದು ಲೀಲಾ ಪ್ಯಾಲೇಸ್‌ನನ್ನು (Leela Palace) ಭವ್ಯವಾಗಿ ಅಲಂಕರಿಲಾಗಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ – ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಈ ವಿವಾಹದಲ್ಲಿ ಪಾಲ್ಗೊಂಡಿದ್ದರು.

ಪರಿಣಿತಿ-ರಾಘವ್ ಲೈಟ್ ಬಣ್ಣದ ಉಡುಗೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸಿಂಪಲ್ ಜ್ಯುವೆಲ್ಲರಿ ಧರಿಸಿ ನಟಿ ಹೈಲೆಟ್ ಆಗಿದ್ದಾರೆ. ನವಜೋಡಿ ಧರಿಸಿರುವ ಉಡುಗೆಯನ್ನ ಖ್ಯಾತ ಡಿಸೈನರ್ ಮನೀಷ್ ಮಲ್ಹೋತ್ರಾ ಡಿಸೈನ್ ಮಾಡಿದ್ದಾರೆ.

 

ಪರಿಣಿತಿ ಮದುವೆಗೆ ಸಾನಿಯಾ ಮಿರ್ಜಾ, ಮನೀಷ್ ಮಲ್ಹೋತ್ರಾ ಸೇರಿದಂತೆ ಹಲವರು ಭಾಗಿಯಾಗಿರೋದು ಹೈಲೆಟ್. ಮೇ ತಿಂಗಳಿನಲ್ಲಿ ಈ ಜೋಡಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ರು. ಹಲವು ವರ್ಷಗಳ ಪ್ರೀತಿಗೆ ಉಂಗುರದ ಮುದ್ರೆ ಒತ್ತಿದ್ದರು. ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾಗಿರುವ ನವ ಜೋಡಿಗೆ, ಚಿತ್ರರಂಗದ ಗಣ್ಯರು, ಆಪ್ತರು, ಅಭಿಮಾನಿಗಳು ಶುಭಕೋರಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್