ಸ್ಟೈಲೀಶ್ ಆಗಿ ಸೀರೆಯುಟ್ಟು ಹಾಟ್ ಆಗಿ ಕಾಣಿಸಿಕೊಂಡ ನಿಶ್ವಿಕಾ‌ ನಾಯ್ಡು

Public TV
1 Min Read

ಸ್ಯಾಂಡಲ್‌ವುಡ್ ನಟಿ ನಿಶ್ವಿಕಾ ನಾಯ್ಡು (Nishvika Naidu) ಅವರು ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಾರೆ. ಇದೀಗ ಹೊಸ ಫೋಟೋಶೂಟ್‌ನಲ್ಲಿ ನಿಶ್ವಿಕಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ದರ್ಶನ್‌ಗೆ ಆಪರೇಷನ್‌ ಮಾಡಬೇಕಿದೆ, ಜಾಮೀನು ನೀಡಿ: ಹೈಕೋರ್ಟ್‌ನಲ್ಲಿ ವಕೀಲರ ಮನವಿ

ಸ್ಟೈಲೀಶ್ ಆಗಿ ಸೀರೆಯುಟ್ಟು ಹಾಟ್ ಆಗಿ ನಿಶ್ವಿಕಾ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಸೀರೆಯಲ್ಲಿ ನಟಿ ಮಿಂಚಿದ್ದಾರೆ. ಹೇರ್ ಸ್ಟೈಲ್‌ನಲ್ಲಿ ಮಿಂಚುತ್ತಾ ವಿವಿಧ ಭಂಗಿಯಲ್ಲಿ ನಟಿ ಪೋಸ್ ನೀಡಿದ್ದಾರೆ. ನಟಿಯ ಮುದ್ದಾದ ನಗುವಿಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ.

ಇನ್ನೂ 2018ರಲ್ಲಿ ‘ಅಮ್ಮ ಐ ಲವ್ ಯೂ’ ಚಿತ್ರದ ಮೂಲಕ ನಿಶ್ವಿಕಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ನಟಿಸಿದರು.

ವಾಸು ನಾನು ಪಕ್ಕಾ ಕಮರ್ಷಿಯಲ್, ಪಡ್ಡೆಹುಲಿ, ಜೆಂಟಲ್‌ಮ್ಯಾನ್, ರಾಮರ್ಜುನ, ಸಖತ್, ಗಾಳಿಪಟ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಿಶ್ವಿಕಾ ನಾಯಕಿಯಾಗಿ ನಟಿಸಿದರು.

ಈ ವರ್ಷ ತೆರೆಕಂಡ ‘ಕರಟಕ ದಮನಕ’ ಸಿನಿಮಾದಲ್ಲಿ ‘ಹಿತ್ತಲಕ ಕರಿಬ್ಯಾಡ ಮಾವ’ ಹಾಡಿಗೆ ಖ್ಯಾತ ನಟ ಪ್ರಭುದೇವ ಜೊತೆ ನಿಶ್ವಿಕಾ ಹೆಜ್ಜೆ ಹಾಕಿದರು. ಈ ಸಾಂಗ್ ಸೂಪರ್ ಹಿಟ್ ಆಗಿತ್ತು. ಈ ಚಿತ್ರಕ್ಕೆ ಯೋಗರಾಜ್ ಭಟ್ ನಿರ್ದೇಶನ ಮಾಡಿದರು.

 

View this post on Instagram

 

A post shared by Nishvika Naidu (@nishvika_)

ಇದರ ಜೊತೆಗೆ ತೆಲುಗಿನಲ್ಲೂ ನಟಿಗೆ ಉತ್ತಮ ಅವಕಾಶಗಳು ಅರಸಿ ಬರುತ್ತಿವೆ. ಉತ್ತಮ ಕಥೆಗಾಗಿ ನಿಶ್ವಿಕಾ ಎದುರು ನೋಡ್ತಿದ್ದಾರೆ. ಸೂಕ್ತ ಕಥೆ ಸಿಕ್ಕಿದ್ದಲ್ಲಿ ನಟಿ ಟಾಲಿವುಡ್‌ಗೂ ಪಾದಾರ್ಪಣೆ ಮಾಡುತ್ತಾರೆ.

ಈ ವರ್ಷ ‘ಮಹಾನಟಿ’ ಎಂಬ ಶೋನಲ್ಲಿ ಪ್ರೇಮಾ, ತರುಣ್ ಸುಧೀರ್, ರಮೇಶ್ ಅರವಿಂದ್ ಜೊತೆ ನಿಶ್ವಿಕಾ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು.

Share This Article