ರಶ್ಮಿಕಾ ಹೇಳಿದ್ರೆ ಅದು ನಿಜ ಆಗೋಲ್ಲ – ನಿಧಿ ಸುಬ್ಬಯ್ಯ ಕೌಂಟರ್

By
1 Min Read

ಎರಡ್ಮೂರು ದಿನಗಳಿಂದ ನಟಿ ರಶ್ಮಿಕಾ ಮಂದಣ್ಣ‌ (Rashmika Mandanna) ಹೇಳಿರುವ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೊಡವ ಕಮ್ಯೂನಿಟಿಯಿಂದ ಸಿನಿಮಾ ಇಂಡಸ್ಟ್ರಿಗೆ ನಾನೇ ಫಸ್ಟ್ ಬಂದಿದ್ದು ಎಂದು ಹೇಳಿಕೊಟ್ಟಿರುವ ರಶ್ಮಿಕಾ ವಿರುದ್ದ ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೊಡಗಿನ ಜನರಷ್ಟೇ ಅಲ್ಲ ಕರುನಾಡಿನ ಜನರೆಲ್ಲ ರಶ್ಮಿಕಾ ಮಂದಣ್ಣ ಹೇಳಿಕೆ ಖಂಡಿಸಿ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಇದೇ ವೇಳೆ ನಟಿ ನಿಧಿ ಸುಬ್ಬಯ್ಯ (Nidhi Subbaiah) ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ʻಪಬ್ಲಿಕ್ ಟಿವಿʼ (Public TV) ಜೊತೆಗೆ ಮಾತನಾಡಿದ ನಟಿ, ʻರಶ್ಮಿಕಾ ಮಾತಾಡಿರುವ ವಿಚಾರವನ್ನ ಒಂದು ಕಿವಿಯಿಂದ ತೆಗೆದುಕೊಂಡು ಮತ್ತೊಂದು ಕಿವಿಯಿಂದ ಬಿಡೋಣ. ಇದು ದೊಡ್ಡ ವಿಷಯವೇ ಅಲ್ಲ, ರಶ್ಮಿಕಾ ಅವರು ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ ಅದು ಖುಷಿ ಇದೆ. ಅವರಿಗೆ ಒಳ್ಳೆಯದಾಗಲಿ. ಆಲ್ ದಿ ಬೆಸ್ಟ್ ರಶ್ಮಿಕಾʼ ಎಂದು ಹೇಳುವ ಮೂಲಕ ಬಟ್ಟೆ ಸುತ್ತಿ ಹೊಡೆದಿದ್ದಾರೆ. ಇದನ್ನೂ ಓದಿ: ʻಕಿಲ್ಲರ್‌ʼ ಚಿತ್ರಕ್ಕೆ ರೆಹಮಾನ್‌ ಮ್ಯೂಸಿಕ್‌ – ಗನ್‌ ಮಾದರಿಯ ಗಿಟಾರ್‌ ಹಿಡಿದು ಪೋಸ್‌ ಕೊಟ್ಟ ಸಂಗೀತ ದಿಗ್ಗಜ!

ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್‌ನ (Sandalwood) ಹಿರಿಯ ನಟಿಯರಾದ ಪ್ರೇಮ ಮಾತನಾಡಿದ್ದಾರೆ. ಅಲ್ಲದೇ ನಟಿ ತನಿಷಾ ಕುಪ್ಪಂಡ, ಹರ್ಷಿಕಾ ಪೂಣಚ್ಚ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ ರಶ್ಮಿಕಾ ಪರವಾಗಿ ಬ್ಯಾಟಿಂಗ್ ಬೀಸಿದ್ದಾರೆ. ಇದನ್ನೂ ಓದಿ: ಕಾಂತಾರ ಚಾಪ್ಟರ್‌-1 ಪೋಸ್ಟರ್‌ ವಿಶೇಷತೆ ಏನು? – ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಬಿಗ್‌ ಅಪ್ಡೇಟ್‌

ರಶ್ಮಿಕಾ ಒಂದಿಲ್ಲೊಂದು ವಿಚಾರದಿಂದ ವಿವಾದವನ್ನ ಎಳೆದುಕೊಳ್ಳುತ್ತಾರೆ. ಈ ಹಿಂದೆ ನಾನು ಹೈದರಾಬಾದ್‌ನವಳು ಎಂದು ಹೇಳುವ ಮೂಲಕ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದರು. ಅವರನ್ನ ನಿರಂತರವಾಗಿ ಟ್ರೋಲ್ ಮಾಡಲಾಗ್ತಿದೆ. ಟ್ರೋಲ್ ಮಾಡಬೇಡಿ ಹಾಗೂ ಕೆಟ್ಟದಾಗಿ ಬಿಂಬಿಸಬೇಡಿ ಅಂತಾ ಕೊಡವ ಸಮುದಾಯದ ಮುಖಂಡರು ರಶ್ಮಿಕಾ ನೆರವಿಗೆ ನಿಂತಿದ್ದರು. ಇದೀಗ ತಮ್ಮ ಸಮುದಾಯದ ನಟಿಯರಿಗೆ ಇರಿಸುಮುರಿಸಾಗುವ ಹೇಳಿಕೆಯನ್ನ ನೀಡಿದ್ದಾರೆ ರಶ್ಮಿಕಾ. ಇದನ್ನೂ ಓದಿ: ರಿಷಬ್ ಶೆಟ್ಟಿ ಹುಟ್ಟುಹಬ್ಬದಂದೇ ಫ್ಯಾನ್ಸ್‌ಗೆ ಬಂಪರ್ ಗಿಫ್ಟ್‌ – ʻಕಾಂತಾರ: ಚಾಪ್ಟರ್ 1ʼ ಹೊಸ ಪೋಸ್ಟರ್‌ ರಿಲೀಸ್‌

Share This Article