ಬೋಲ್ಡ್ ಆದ ನೇಹಾ ಶೆಟ್ಟಿ- ಸೊಂಟ ಸೂಪರ್ ಎಂದ ನೆಟ್ಟಿಗರು

Public TV
1 Min Read

ರಾವಳಿ ಬ್ಯೂಟಿ ನೇಹಾ ಶೆಟ್ಟಿ (Neha Shetty) ಸದ್ಯ ತೆಲುಗಿನಲ್ಲಿ ಗುರುತಿಸಿಕೊಳ್ತಿದ್ದಾರೆ. ಕನ್ನಡದ ‘ಮುಂಗಾರು ಮಳೆ 2’ (Mungarumale 2) ಚಿತ್ರದ ಮೂಲಕ ಪರಿಚಿತರಾದ ನಟಿ ಇದೀಗ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಸೊಂಟ ತೋರಿಸಿ ಸಖತ್ ಗ್ಲ್ಯಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

ನೇಹಾ ಶೆಟ್ಟಿಗೆ ಇದೀಗ ಟಾಲಿವುಡ್‌ನಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಸದಾ ಹೊಸ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡುಸುತ್ತಿರುತ್ತಾರೆ. ಸೊಂಟ ತೋರಿಸಿ ಪೋಸ್ ಕೊಟ್ಟಿರುವ ನೇಹಾರನ್ನು ನೋಡಿ ಸೊಂಟದ ವಿಷ್ಯ ಬೇಡವೋ ಶಿಷ್ಯ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಕೆಲವರು ಸೊಂಟ ಸೂಪರ್ ಎಂದು ಬಗೆ ಬಗೆಯ ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ. ಇದನ್ನೂ ಓದಿ:ಚಿತ್ರರಂಗಕ್ಕೆ ದ್ವಾರಕೀಶ್ ಕೊಡುಗೆ ಅಪಾರ- ನರೇಂದ್ರ ಮೋದಿ ಸಂತಾಪ

ಅಂದಹಾಗೆ, ತೆಲುಗಿನ ಮೆಹಬೂಬಾ, ಗಲ್ಲಿ ಬಾಯ್, ಡಿಜೆ ಟಿಲ್ಲು ಚಿತ್ರಗಳ ಮೂಲಕ ಗಮನ ಸೆಳೆದ ನೇಹಾ ಶೆಟ್ಟಿಗೆ ಈಗ ಅವಕಾಶಗಳು ಕಮ್ಮಿಯಾಗಿದೆ. ಕೆರಿಯರ್‌ನಲ್ಲಿ ಬಿಗ್ ಬ್ರೇಕ್ ಸಿಗದೇ ನಟಿ ಕಂಗಾಲಾಗಿದ್ದಾರೆ. ಸದ್ಯ ತೆಲುಗಿನಲ್ಲಿ ಸೌಂಡ್ ಮಾಡುತ್ತಿರುವ ಹೆಸರು ಅಂದರೆ ರಶ್ಮಿಕಾ ಮಂದಣ್ಣ, ಶ್ರೀಲೀಲಾ. ನೇಹಾ ಶೆಟ್ಟಿ ಠಕ್ಕರ್ ಕೊಟ್ಟಿದ್ದಾರೆ. ಸ್ಟಾರ್ ನಟರ ಸಿನಿಮಾಗಳಿಗೆ ರಶ್ಮಿಕಾ ಅಥವಾ ಶ್ರೀಲೀಲಾನೇ (Sreeleela) ಬೇಕು ಅನ್ನುವಷ್ಟರ ಮಟ್ಟಿಗೆ ಅವರಿಗೆ ಬೇಡಿಕೆ ಇದೆ. ರಶ್ಮಿಕಾ (Rashmika Mandanna) ತೆಲುಗಿನ ಜೊತೆ ಬಾಲಿವುಡ್‌ನತ್ತ ಮುಖ ಮಾಡಿದ್ರೆ, ಶ್ರೀಲೀಲಾ ಕಾಲಿವುಡ್‌ನಲ್ಲಿ ಹೊಸ ಹೆಜ್ಜೆ ಇಡಲು ಪ್ಲ್ಯಾನ್ ಮಾಡಿದ್ದಾರೆ.

‘ಡಿಜೆ ಟಿಲ್ಲು’ ಸಿನಿಮಾದಲ್ಲಿ ಸಿದ್ದು ಜೊತೆ ನೇಹಾ ಬೋಲ್ಡ್ ಆಗಿ ನಟಿಸಿದ್ದರು. ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನಟಿ ಮೋಡಿ ಮಾಡಿದ್ದರು. ‘ಟಿಲ್ಲು ಸ್ಕ್ವೇರ್’ ಸಿನಿಮಾದಲ್ಲಿ ಗೆಸ್ಟ್ ರೋಲ್‌ನಲ್ಲಿ ನಟಿಸಿದ್ದಾರೆ. ಸದ್ಯ ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾ ಬಿಟ್ಟು ಯಾವುದೇ ಹೊಸ ಚಿತ್ರವನ್ನು ನಟಿ ಒಪ್ಪಿಕೊಂಡಿಲ್ಲ. ಇದೇ ಮೇನಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ.

‘ಗ್ಯಾಂಗ್ಸ್ ಆಫ್ ಗೋದಾವರಿ’ ಚಿತ್ರದ ನಂತರ ನೇಹಾ ಶೆಟ್ಟಿ ಲಕ್ ಬದಲಾಗುತ್ತಾ? ಈ ಚಿತ್ರ ಮುಂಗಾರು ಮಳೆ 2 ನಟಿಯ ಕೈ ಹಿಡಿಯುತ್ತಾ? ಎಂದು ಕಾದುನೋಡಬೇಕಿದೆ.

Share This Article