ನಯನತಾರಾ- ವಿಘ್ನೇಶ್ ಶಿವನ್ ಬಾಡಿಗೆ ತಾಯ್ತನದ ಕೇಸ್‌ಗೆ ಬಿಗ್ ಟ್ವಿಸ್ಟ್

Public TV
1 Min Read

ಕಾಲಿವುಡ್‌ನ ಕ್ಯೂಟ್ ಕಪಲ್ ನಯನತಾರಾ(Nayanatara) ಮತ್ತು ವಿಘ್ನೇಶ್ ಶಿವನ್ (Vignesh Shivan) ದಂಪತಿ ಸಂಕಷ್ಟವೊಂದರಲ್ಲಿ ಸಿಲುಕಿದ್ದಾರೆ. ಬಾಡಿಗೆ ತಾಯ್ತನದ ಪ್ರಕರಣ ಭಾರೀ ರೋಚಕ ತಿರುವು ಪಡೆದುಕೊಂಡಿದೆ. ಅವಳಿ ಮಕ್ಕಳನ್ನು ಪಡೆದ (Surrogate Mother)( ನಯನತಾರಾ ದಂಪತಿಗೆ ವಿವಾದವೊಂದು ಸೃಷ್ಟಿಯಾಗಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಕೆಲ ದಿನಗಳಿಂದ ನಯನತಾರಾ ದಂಪತಿ(Nayanatara Couple) ಸಖತ್ ಸುದ್ದಿಯಲ್ಲಿದ್ದಾರೆ. ಬಾಡಿಗೆ ತಾಯ್ತನದ ವಿಚಾರವಾಗಿ ತೀವ್ರ ಆಕ್ಷೇಪ ಎದುರಿಸುತ್ತಿದ್ದಾರೆ. ಕಳೆದ ಜೂನ್ 2ರಂದು ಮದುವೆಯಾದ ಈ ಜೋಡಿಗೆ 4 ತಿಂಗಳಲ್ಲಿ ಮಗು ಹೇಗೆ ಸಾಧ್ಯ ಎಂದು ಅಭಿಮಾನಿಗಳ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದಾರೆ ಎಂದು ಸುದ್ದಿಯಾದ ಬೆನ್ನಲ್ಲೇ, ಇವರು ಬಾಡಿಗೆ ತಾಯ್ತನದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಮಾತು ಹರಿದಾಡಿತ್ತು. ನಂತರ ಈ ದಂಪತಿಯ ವಿರುದ್ಧ ದೂರು ದಾಖಲಾಗಿತ್ತು. ಆದರೆ ಈಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದನ್ನೂ ಓದಿ:ಈ ಮನೆ ಅದಕ್ಕಲ್ಲ; ಮಿತಿ ಮೀರಿದ ರೂಪೇಶ್, ಸಾನ್ಯ ರೊಮ್ಯಾನ್ಸ್‌ಗೆ ಕಿಚ್ಚ ವಾರ್ನಿಂಗ್

ಮೂಲಗಳ ಪ್ರಕಾರ ಕಾನೂನು ಬದ್ಧವಾಗಿ ದಾಖಲೆಗಳನ್ನು ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ. ನಯನತಾರಾ ದಂಪತಿಗಳು ಆರು ವರ್ಷಗಳ ಹಿಂದೆಯೇ ರಿಜಿಸ್ಟ್ರಾರ್‌ ಮದುವೆಯಾಗಿದ್ದು, ಇದಕ್ಕೆ ಸಂಬಂಧಿಸಿದ ಕಾನೂನಾತ್ಮಕ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಷ್ಟೇ ಅಲ್ಲದೇ, 2021ರಲ್ಲೇ ಬಾಡಿಗೆ ತಾಯ್ತನದ(Surrogate Mother) ಒಪ್ಪಂದಕ್ಕೆ ದಂಪತಿ ಸಹಿ ಹಾಕಿರುವುದಕ್ಕೆ ಸಂಬಂಧಿಸಿದ ದಾಖಲೆ ಕೂಡ ಸಲ್ಲಿಸಿದ್ದಾರೆ.

ಕಳೆದ ಜೂನ್ ಸಂಪ್ರದಾಯಿಕವಾಗಿ ಮದುವೆ ಆಗಿದ್ದು, ಆರು ವರ್ಷಗಳ ಹಿಂದೆಯೇ ರಿಜಿಸ್ಟ್ರಾರ್ ಮದುವೆ(Register Wedding) ಆಗಿದ್ದಾರೆ. ಹೀಗಾಗಿ ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎನ್ನಲಾಗುತ್ತಿದೆ. ಈ ಮೂಲಕ ಈ ಬಾಡಿಗೆ ತಾಯ್ತನದ ಪ್ರಕರಣಕ್ಕೆ ಅಂತ್ಯ ಕಾಣುವ ಎಲ್ಲಾ ಲಕ್ಷಣಗಳು ಇದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *