ನನ್ನನ್ನು ‘ಲೇಡಿ ಸೂಪರ್‌ಸ್ಟಾರ್’ ಎಂದು ಕರೆಯಬೇಡಿ- ಫ್ಯಾನ್ಸ್‌ಗೆ ನಯನತಾರಾ ಮನವಿ

Public TV
2 Min Read

ಟಿ ನಯನತಾರಾ (Nayanthara) ಮನೋಜ್ಞ ನಟನೆಯಿಂದ ತಮಿಳಿನ ‘ಲೇಡಿ ಸೂಪರ್‌ಸ್ಟಾರ್’ ಎಂದೇ ಖ್ಯಾತರಾದವರು. ಅಭಿಮಾನಿಗಳು ಕೊಟ್ಟಿರೋ ಈ ಬಿರುದಿನ ಬಗ್ಗೆ ನಟಿ ಇದೀಗ ಮನವಿ ಮಾಡಿದ್ದಾರೆ. ನನ್ನನ್ನು ‘ಲೇಡಿ ಸೂಪರ್‌ಸ್ಟಾರ್’ (Lady Superstar) ಎಂದು ಕರೆಯಬೇಡಿ ಎಂದು ಫ್ಯಾನ್ಸ್‌ಗೆ ನಯನತಾರಾ ಬಹಿರಂಗ ಪತ್ರ ಬರೆದಿದ್ದಾರೆ. ಇದನ್ನೂ ಓದಿ:ನಟಿ ಪ್ರಮೀಳಾ ಜೋಷಾಯ್ ಹುಟ್ಟುಹಬ್ಬದಲ್ಲಿ ಸ್ಯಾಂಡಲ್‌ವುಡ್ ನಟಿಯರು

ಈ ಹಿಂದೆ ಕಮಲ್ ಹಾಸನ್‌ಗೆ ಉಳಗನಾಯಗನ್ ಹಾಗೂ ತಮಿಳು ನಟ ಅಜಿತ್‌ಗೆ ಥಲಾ ಎಂದು ಫ್ಯಾನ್ಸ್ ಬಿರುದು ನೀಡಿ ಕರೆಯುತ್ತಿದ್ದರು. ಅದಕ್ಕೆ ಈ ಇಬ್ಬರೂ ನಟರು, ತಮಗೆ ಈ ಬಿರುದು ಬೇಡ. ನಮ್ಮ ಹೆಸರಿನಿಂದಲೇ ಕರೆಯಿರಿ ಎಂದು ಮನವಿ ಮಾಡಿದ್ದರು. ಈಗ ಅದೇ ರೀತಿ ನಯನತಾರಾ ಕೂಡ ಸಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ, ನಯನತಾರಾ ಯಾವಾಗಲೂ ನಯನತಾರಾ ಆಗಿಯೇ ಇರುತ್ತಾರೆ ಎಂದಿದ್ದಾರೆ. ನನ್ನ ಜೀವನವು ನಿಮ್ಮ ಪ್ರೀತಿ ಮತ್ತು ವಾತ್ಸಲ್ಯದಿಂದ ಯಾವಾಗಲೂ ಅಲಂಕರಿಸಲ್ಪಟ್ಟ ತೆರೆದ ಪುಸ್ತಕವಾಗಿದೆ. ನನ್ನ ಯಶಸ್ಸಿನ ಸಮಯದಲ್ಲಿ ನನ್ನ ಭುಜ ತಟ್ಟಿದ್ದು ಅಥವಾ ಕಷ್ಟದ ಸಮಯದಲ್ಲಿ ನನ್ನ ಜೊತೆ ನಿಂತಿದ್ದೀರಾ. ನಿಮ್ಮಲ್ಲಿ ಹಲವರು ನನ್ನನ್ನು ‘ಲೇಡಿ ಸೂಪರ್‌ಸ್ಟಾರ್’ ಎಂದು ಪ್ರೀತಿಯಿಂದ ಕರೆಯುತ್ತೀರಿ, ಅದು ನಿಮ್ಮ ಅಪಾರ ಪ್ರೀತಿಯಿಂದ ಹುಟ್ಟಿದ ಬಿರುದು. ನನಗೆ ಅಂತಹ ಅಮೂಲ್ಯವಾದ ಬಿರುದನ್ನು ನೀಡಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ತುಂಬಾ ಋಣಿಯಾಗಿದ್ದೇನೆ. ಆದರೆ ನೀವೆಲ್ಲರೂ ನನ್ನನ್ನು ‘ನಯನತಾರಾ’ ಎಂದು ಕರೆಯಬೇಕೆಂದು ನಾನು ವಿನಮ್ರವಾಗಿ ವಿನಂತಿಸುತ್ತೇನೆ ಎಂದು ನಯನತಾರ ಬರೆದುಕೊಂಡಿದ್ದಾರೆ.

‘ನಯನತಾರಾ’ ಎಂಬ ಹೆಸರು ನನ್ನ ಹೃದಯಕ್ಕೆ ಹತ್ತಿರವಾಗಿದೆ ಎಂದು ನಾನು ಭಾವಿಸುತ್ತೇನೆ. ಇದು ಒಬ್ಬ ನಟನಾಗಿ ಮಾತ್ರವಲ್ಲದೆ ಒಬ್ಬ ವ್ಯಕ್ತಿಯಾಗಿಯೂ ನಾನು ಯಾರೆಂದು ಪ್ರತಿನಿಧಿಸುತ್ತದೆ. ಬಿರುದುಗಳು ಮತ್ತು ಪುರಸ್ಕಾರಗಳು ಅಮೂಲ್ಯವಾದವು, ಆದರೆ ಅವು ಕೆಲವೊಮ್ಮೆ ನಮ್ಮ ಕೆಲಸ ಹಾಗೂ ಪ್ರೇಕ್ಷಕರೊಂದಿಗೆ ನಾವು ಹಂಚಿಕೊಳ್ಳುವ ಬಂಧವನ್ನು ಬೇರ್ಪಡಿಸುತ್ತದೆ ಎಂದು ನಟಿ ಹೇಳಿಕೊಂಡಿದ್ದಾರೆ. ಈ ಮೂಲಕ ‘ಲೇಡಿ ಸೂಪರ್‌ಸ್ಟಾರ್’ ಬಿರುದನ್ನು ನಯವಾಗಿಯೇ ನಟಿ ತಿರಸ್ಕಾರಿಸಿದ್ದಾರೆ.

ಇನ್ನೂ ನಟಿಯ ನಿಜವಾದ ಹೆಸರು ‘ಡಯಾನಾ ಮರಿಯಮ್ ಕುರಿಯನ್’ ಎಂದಾಗಿತ್ತು. ಅವರ ಮೊದಲ ಸಿನಿಮಾ ‘ಮನಸ್ಸಿನಕ್ಕರೆ’ ಎಂದು ಚಿತ್ರ ಮಾಡಿದ್ದಾಗ, ಆ ಚಿತ್ರದ ನಿರ್ದೇಶಕ ಸತ್ಯನ್ ಅವರು ನಟಿಯ ಹೆಸರನ್ನು ಬದಲಿಸಿದ್ದರು. ನಯನತಾರಾ ಎಂದು ನಾಮಕರಣ ಮಾಡಿದ್ದರು.

Share This Article