ಅವಳಿ ಮಕ್ಕಳ ಹೆಸರನ್ನು ರಿವೀಲ್ ಮಾಡಿದ ನಟಿ ನಯನತಾರಾ

Public TV
1 Min Read

ಕಾಲಿವುಡ್‌ನ (Kollywood) ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanatara) ಅವರು ಮದುವೆ, ಸಂಸಾರ, ಅವಳಿ ಮಕ್ಕಳ ಆರೈಕೆ ಅಂತಾ ಬ್ಯುಸಿಯಾಗಿದ್ದಾರೆ. 2022ರಲ್ಲಿ ಬಾಡಿಗೆ ತಾಯಿ ಮೂಲಕ ನಯನತಾರಾ ದಂಪತಿ ಅವಳಿ ಗಂಡು ಮಕ್ಕಳನ್ನು ಪಡೆದರು. ಮಕ್ಕಳ ಮಖವನ್ನು ಕೂಡ ರಿವೀಲ್ ಮಾಡದೇ ಕ್ಯಾಮೆರಾ ಕಣ್ಣಿಂದ ದೂರವಿಟ್ಟಿದ್ದಾರೆ. ಈ ಡುವೆ ಕಾರ್ಯಕ್ರಮವೊಂದರಲ್ಲಿ ನಟಿ ಮಕ್ಕಳ ಪೂರ್ಣ ಹೆಸರೇನು ಎಂಬುದನ್ನ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: ನಟಿ ನಗ್ಮಾ ಜೊತೆಗೆ ಯಾವುದೇ ಸಂಬಂಧ ಹೊಂದಿಲ್ಲ : ನಟ ರವಿಕಿಶನ್

ಮದುವೆ, ಸಂಸಾರ ಜವಬ್ದಾರಿಯ ಜೊತೆ ಬಾಲಿವುಡ್‌ನ `ಜವಾನ್’ (Jawan) ಚಿತ್ರದಲ್ಲಿ ನಯನತಾರಾ ಆಕ್ಟ್ ಮಾಡ್ತಿದ್ದಾರೆ. ಶಾರುಖ್ ಖಾನ್ ನಾಯಕಿಯಾಗುವ ಮೂಲಕ ಬಿಟೌನ್‌ಗೆ ನಟಿ ಲಗ್ಗೆ ಇಡ್ತಿದ್ದಾರೆ. ಸಿನಿಮಾ- ವೈಯಕ್ತಿಕ ಜೀವನ ಎರಡು ಬ್ಯಾಲೆನ್ಸ್ ಮಾಡುತ್ತಿದ್ದಾರೆ.

ನಟಿ ನಯನತಾರಾ ಅವರು ಇತ್ತೀಚೆಗೆ ಚೆನ್ನೈನಲ್ಲಿ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಆ ವೇಳೆ ಅವರಿಗೆ ಮಕ್ಕಳ ಬಗ್ಗೆ ಪ್ರಶ್ನೆ ಎದುರಾಯಿತು. ಮಕ್ಕಳ ಪೂರ್ಣ ಹೆಸರು ಏನು ಎಂದು ಕೇಳಲಾಯಿತು. ಆಗ ನಟಿ, ನನ್ನ ಮೊದಲ ಮಗನ ಹೆಸರು ಉಯಿರ್ ರುದ್ರೋನೀಲ್ ಎನ್. ಶಿವನ್ ಮತ್ತು ನನ್ನ ಎರಡನೇ ಮಗನ ಹೆಸರು ಉಳಗ್ ದೈವಗನ್ ಎನ್. ಶಿವನ್ ಎಂದು ತಿಳಿಸಿದರು.

ನಯನತಾರಾ ಅವರು ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಹಲವು ವರ್ಷಗಳ ಕಾಲ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿ ಇದ್ದರು. ಬಳಿಕ ಅವರು ಮದುವೆ ಆಗುವ ನಿರ್ಧಾರಕ್ಕೆ ಬಂದರು. 2022ರ ಜೂನ್ 9ರಂದು ಅವರಿಬ್ಬರ ಕಲ್ಯಾಣ ನೆರವೇರಿತು. ಈ ಸ್ಟಾರ್ ಸೆಲೆಬ್ರಿಟಿಗಳ ವಿವಾಹ ಸಮಾರಂಭಕ್ಕೆ ಅನೇಕ ಗಣ್ಯರು ಹಾಜರಿ ಹಾಕಿದ್ದರು.

Share This Article