ಬ್ಲ್ಯಾಕ್‌ & ವೈಟ್‌ ಫೋಟೋದಲ್ಲಿ ‘ಜವಾನ್’ ಬೆಡಗಿ ಹಾಟ್‌ ಅವತಾರ

Public TV
1 Min Read

ಕಾಲಿವುಡ್ ಬೆಡಗಿ ನಯನತಾರಾ ಬ್ಲ್ಯಾಕ್ & ವೈಟ್ ಲುಕ್‌ನಲ್ಲಿ ಮಿಂಚಿದ್ದಾರೆ. ಹಾಟ್ ಆಗಿ ಕಾಣಿಸಿಕೊಂಡಿರುವ ನಯನತಾರಾರನ್ನು ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ. ಸದ್ಯ ಸುಂದರ ಫೋಟೋಗಳನ್ನು ನಟಿ ಹಂಚಿಕೊಳ್ಳುವ ಮೂಲಕ ನಟಿ ಸದ್ದು ಮಾಡುತ್ತಿದ್ದಾರೆ.

40ನೇ ವಯಸ್ಸಿನಲ್ಲಿ ಟೀನೇಜ್ ಹುಡುಗಿಯರಿಗೆ ಠಕ್ಕರ್ ಕೊಡುವಷ್ಟು ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಗೌನ್‌ನಲ್ಲಿ ಸಖತ್ ಆಗಿಯೇ ನಟಿ ಕಾಣಿಸಿಕೊಂಡಿದ್ದಾರೆ. ಇದು ಹೊಸ ಸಿನಿಮಾದ ಲುಕಾ ಎಂದು ಫ್ಯಾನ್ಸ್ ಪ್ರಶ್ನಿಸಿದ್ದಾರೆ.

ಅಂದಹಾಗೆ, ಸೌತ್ ಸಿನಿಮಾಗಳಲ್ಲಿಯೇ ಮೋಡಿ ಮಾಡಿದ್ದ ಈ ಚೆಲುವೆಗೆ ಬಾಲಿವುಡ್‌ನಲ್ಲಿ ಡಿಮ್ಯಾಂಡ್ ಜಾಸ್ತಿ ಆಗಿದೆ. ಶಾರುಖ್ ಖಾನ್ ಜೊತೆ ರೊಮ್ಯಾನ್ಸ್ ಮಾಡಿದ್ದ ನಟಿ ಹಲವು ಹಿಂದಿ ಸಿನಿಮಾಗಳ ಆಫರ್ ಸಿಗುತ್ತಿದೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ನನ್ನರಸಿ ರಾಧೆ’ ನಟಿ ಕೌಸ್ತುಭ ಮಣಿ

ಜವಾನ್ ಸಕ್ಸಸ್ ನಂತರ ಕಥೆಯಲ್ಲಿ ನಟಿ ಸೆಲೆಕ್ಟೀವ್ ಆಗಿದ್ದಾರೆ. ತೆಲುಗು, ತಮಿಳು ಸಿನಿಮಾಗಳ ಜೊತೆಗೆ ಹಿಂದಿ ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ವೋಟ್ ಮಾಡದ ನಟಿ ರಮ್ಯಾ

ಪತಿ ವಿಘ್ನೇಶ್ ಶಿವನ್ ಜೊತೆ ಈಗಾಗಲೇ ನಯನತಾರಾ ಸಿನಿಮಾ ಮಾಡಿದ್ದಾರೆ. ಹಾಗಾಗಿ ಇಬ್ಬರ ಕಾಂಬಿನೇಷನ್‌ನಲ್ಲಿ ಮತ್ತೆ ಸಿನಿಮಾ ಬರಲಿ ಫ್ಯಾನ್ಸ್ ಆಶಿಸುತ್ತಿದ್ದಾರೆ.

Share This Article