ಮೇಕಪ್ ಹಾಕಿಕೊಳ್ಳಿ ಎಂದವನಿಗೆ ಮಹೇಶ್ ಬಾಬು ಪತ್ನಿ ಖಡಕ್ ಉತ್ತರ

Public TV
1 Min Read

ಹೈದರಾಬಾದ್: ಪ್ರಿನ್ಸ್ ಮಹೇಶ್ ಬಾಬು ಅವರ ಪತ್ನಿ ನಮ್ರತಾ ಶಿರೋಡ್ಕರ್ ಅವರಿಗೆ ನೆಟ್ಟಿಗರೊಬ್ಬರು ಅವರ ಮೇಕಪ್ ಬಗ್ಗೆ ಕಮೆಂಟ್ ಮಾಡಿದ್ದರು. ಇದೀಗ ಕಮೆಂಟ್ ಮಾಡಿದವನನ್ನು ನಮ್ರತಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಗುರುವಾರವಷ್ಟೇ ನಮ್ರತಾ ಪತಿ ಮಹೇಶ್ ಬಾಬು ಅಭಿನಯದ ‘ಮಹರ್ಷಿ’ ಸಿನಿಮಾ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಂದರ್ಭದಲ್ಲಿ ನಟ ಮಹೇಶ್, ಸಿನಿಮಾ ನಿರ್ದೇಶಕ ವಂಶಿ ಪೈಡಿಪಲ್ಲಿ ಸೇರಿದಂತೆ ಕುಟುಂಬದವರು ಪಾರ್ಟಿ ಮಾಡಿದ್ದಾರೆ. ಈ ವೇಳೆ ನಮ್ರತಾ ಅವರು ಸಂತೋಷದ ಕ್ಷಣಗಳನ್ನು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದಿದ್ದು, ಆ ಫೋಟೋವನ್ನು ಇನ್ಸ್ ಸ್ಟಾಗ್ರಾಂಗೆ ಅಪ್ಲೋಡ್ ಮಾಡಿದ್ದರು.

ನಮ್ರತಾ ಆ ಫೋಟೋಗೆ “ಸೂಪರ್ ಡೂಪರ್ ಸಕ್ಸಸ್ ಮಹರ್ಷಿ ಸಿನಿಮಾ ಕೊಟ್ಟಿದ್ದಕ್ಕೆ ನಿರ್ದೇಶಕ ವಂಶಿಪೈಡಿಪಲ್ಲಿ ಅವರಿಗೆ ಧನ್ಯವಾದಗಳು” ಎಂದು ಬರೆದಿದ್ದರು. ಈ ಫೋಟೋಗೆ ಗೌರವ್ ಎಂಬಾತ ‘ನಮ್ರತಾ ನೀವ್ಯಾಕೆ ಸ್ವಲ್ಪವೂ ಮೇಕಪ್ ಮಾಡಿಕೊಳ್ಳವುದಿಲ್ಲ. ನೀವು ಯಾವುದಾದರೂ ಫೋಬಿಯಾದಿಂದ ಬಳಲುತ್ತಿದ್ದೀರಾ? ಅಥವಾ ಖಿನ್ನತೆಯಲ್ಲಿದ್ದೀರಾ? ಎಂದು ಕಮೆಂಟ್ ಮಾಡಿದ್ದನು.

ಗೌತಮ್ ಕಮೆಂಟ್ ನೋಡಿದ ನಮ್ರತಾ ಅವರು, “ಗೌರವ್ ನೀನು ಮೇಕಪ್ ಮಾಡಿಕೊಂಡ ಮಹಿಳೆಯರನ್ನೇ ಇಷ್ಟಪಡುತ್ತೀಯಾ? ಹಾಗಿದ್ದರೆ ಇನ್ನು ಮುಂದೆ ನೀನು ನನ್ನಂತೆ ಆಲೋಚನೆ ಮಾಡುವವರನ್ನು ಫಾಲೋ ಮಾಡು. ಇಲ್ಲಿಂದ ನೀನು ನಿರ್ಗಮಿಸಬಹುದು. ಇದು ನನ್ನ ಮನವಿ” ಎಂದು ಖಡಕ್ ಉತ್ತರ ಕೊಟ್ಟಿದ್ದಾರೆ.

ನಮ್ರತಾ ಅವರು 1993ರಲ್ಲಿ ಮಿಸ್ ಇಂಡಿಯಾ ಅವಾರ್ಡ್ ಗೆದ್ದಿದ್ದರು. ಅಷ್ಟೇ ಅಲ್ಲದೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ಅದರಲ್ಲಿ ಆರನೇ ಸ್ಥಾನವನ್ನು ಪಡೆದುಕೊಂಡಿದ್ದರು. 2005ರಲ್ಲಿ ನಮ್ರತಾ ಮಹೇಶ್ ಬಾಬು ಅವರನ್ನು ಮದುವೆಯಾಗಿದ್ದು, ವಿವಾಹವಾದ ನಂತರ ಅವರು ಸಿನಿಮಾರಂಗದಿಂದ ದೂರ ಉಳಿದಿದ್ದಾರೆ.

https://www.instagram.com/p/BxS5TuFBeYz/

Share This Article
Leave a Comment

Leave a Reply

Your email address will not be published. Required fields are marked *