ಪೋರ್ನ್ ವಿಡಿಯೋ ಲೀಕ್ ಮಾಡೋದಾಗಿ ಬೆದರಿಕೆ – ಯುವಕನ ಚಳಿ ಬಿಡಿಸಿದ ನಮಿತಾ

Public TV
1 Min Read

ಹೈದರಾಬಾದ್: ಬಹುಭಾಷಾ ನಟಿ ನಮಿತಾಗೆ ಯುವಕನೊಬ್ಬ ಅವರ ಪೋರ್ನ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದ. ಇದೀಗ ಆ ಪೋಲಿ ಯುವಕನನ್ನು ನಮಿತಾ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಯುವಕ ನಾನು ನಿಮ್ಮ ಪೋರ್ನ್ ವಿಡಿಯೋಗಳನ್ನು ನೋಡಿದ್ದೇನೆ. ಹೀಗಾಗಿ ಅವುಗಳನ್ನು ಸಾಮಾಜಿಕ ಜಾಣತಾಣಗಳಲ್ಲಿ ಬಹಿರಂಗಪಡಿಸುತ್ತೇನೆ ಎಂದು ಬ್ಲಾಕ್‍ಮೇಲ್ ಮಾಡಿದ್ದನಂತೆ. ಈ ಬಗ್ಗೆ ನಮಿತಾ ಇನ್‍ಸ್ಟಾಗ್ರಾಂನಲ್ಲಿ ಆತನ ಫೋಟೋ ಹಾಕಿ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ.

ಇನ್‍ಸ್ಟಾಗ್ರಾಂ ಪೋಸ್ಟ್‌ನಲ್ಲಿ ಏನಿದೆ?
“ಎಲ್ಲರಿಗೂ ನಮಸ್ಕಾರ, ಯುವಕನೊಬ್ಬ ನನಗೆ ‘ಹಾಯ್ ಐಟಂ’ ಎಂಬ ಹೆಸರಿನಿಂದ ಮೆಸೇಜ್ ಮಾಡಲು ಶುರು ಮಾಡಿದ್ದನು. ನಂತರ ನನ್ನ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ ಎಂದು ಹೇಳಿದ. ಕೊನೆಗೆ ನಿನ್ನ ಪೋರ್ನ್ ವಿಡಿಯೋವನ್ನು ನೋಡಿದ್ದೇನೆ. ನಾನು ಅದನ್ನು ಆನ್‍ಲೈನ್‍ನಲ್ಲಿ ಅಪ್ಲೋಡ್ ಮಾಡುವುದಾಗಿ ಹೇಳಿದನು. ಎಲ್ಲಾ ಸತ್ಯಗಳನ್ನು ತಿಳಿದುಕೊಂಡ ನಾನು ಮಾಡಿ ಅಂತ ಹೇಳಿದೆ” ಎಂದು ಬರೆದುಕೊಂಡಿದ್ದಾರೆ.

ಈ ರೀತಿಯ ಹೊಲಸು ವ್ಯಕ್ತಿತ್ವ ಹೊಂದಿರುವನು, ಕೆಟ್ಟ ವ್ಯಕ್ತಿ ಮಹಿಳೆಯನ್ನು ತನಗೆ ಹೇಗೆ ಬೇಕಾದರೂ ಕರೆಯುವ ಹಕ್ಕಿದೆ ಎಂದು ಭಾವಿಸಿದ್ದಾನೆ. ನಾನು ಮಾಧ್ಯಮದಲ್ಲಿರುವ ಕಾರಣ, ಗ್ಲಾಮರ್ ಇಂಡಸ್ಟ್ರೀಯಲ್ಲಿದ್ದೇನೆ, ನಿಮಗೆಲ್ಲರಿಗೂ ನಾನು ಪರಿಚಯ ಇದ್ದೇನೆ ಎಂಬ ಕಾರಣಕ್ಕೆ ನಾನು ಇದೆಲ್ಲವನ್ನು ಕೇಳಿಸಿಕೊಳ್ಳಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.

ನನ್ನ ಮೌನವನ್ನು ನನ್ನ ವೀಕ್‍ನೆಸ್ ಎಂದುಕೊಳ್ಳಬೇಡಿ. ಒಬ್ಬ ನಿಜವಾದ ಮನುಷ್ಯನಿಗೆ ಯಾವುದೇ ಕ್ಷೇತ್ರದ ಮಹಿಳೆಯಾಗಿದ್ದರೂ ಹೇಗೆ ಗೌರವಿಸಬೇಕು ಎಂಬುದು ಗೊತ್ತಿರುತ್ತದೆ. 9 ದಿನಗಳ ಕಾಲ ನವರಾತ್ರಿಯನ್ನು ಆಚರಿಸುವ ಬದಲು, ಒಂದು ದಿನ ಮಹಿಳಾ ದಿನವನ್ನು ಆಚರಿಸುವ ಬದಲು, ನಿಮ್ಮ ಜೀವನದಲ್ಲಿ ಮಹಿಳೆಯರನ್ನು ಗೌರವಿಸುವುದನ್ನು ಕಲಿ. ಏಕೆಂದರೆ ಅದೇ ಕೊನೆಯಲ್ಲಿ ಮುಖ್ಯವಾಗುವುದು” ಎಂದು ತಮ್ಮ ನೋವನ್ನು ಇನ್‍ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.

ನಟಿ ನಮಿತಾ ಕನ್ನಡ, ತೆಲುಗು, ತಮಿಳು, ಮಲಯಾಳಂ, ಇಂಗ್ಲಿಷ್ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ನಟಿ ರವಿಚಂದ್ರನ್ ಮತ್ತು ದರ್ಶನ್ ಜೊತೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 2017ರಲ್ಲಿ ನಮಿತಾ, ವೀರೇಂದ್ರ ಚೌಧರಿ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

https://www.instagram.com/p/B90hrWJA7kq/

Share This Article
Leave a Comment

Leave a Reply

Your email address will not be published. Required fields are marked *