ನನಗೂ ಇಬ್ಬರೂ ಮಕ್ಕಳು ಬೇಕು ಎಂದ ‘ಸೀತಾರಾಮಂ’ ನಟಿ

Public TV
1 Min Read

‘ಸೀತಾರಾಮಂ’ (Seetharamam) ಬೆಡಗಿ ಮೃಣಾಲ್ ಠಾಕೂರ್ (Mrunal Thakur) ಸದ್ಯ ವಿಜಯ್ ದೇವರಕೊಂಡ (Vijay Devarakonda) ಜೊತೆಗಿನ ‘ಫ್ಯಾಮಿಲಿ ಸ್ಟಾರ್’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ, ನನಗೂ ಇಬ್ಬರೂ ಮಕ್ಕಳು ಬೇಕು ಎಂದು ಮದುವೆ ಬಗೆಗಿನ ಕನಸನ್ನು ನಟಿ ಬಿಚ್ಚಿದ್ದಾರೆ.

ಸಂದರ್ಶನವೊಂದರಲ್ಲಿ ವೈಯಕ್ತಿಕ ಬದುಕಿನ ಬಗ್ಗೆ ನಟಿ ಮಾತನಾಡಿದ್ದಾರೆ. ನಾನಿನ್ನೂ ಎಂಗೇಜ್‌ ಆಗಿಲ್ಲ. ಆದರೆ ಸಂಬಂಧದಲ್ಲಿರುವವರು ಆ ಪ್ರೀತಿಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕು. ಇಬ್ಬರೂ ನಿಷ್ಠಾವಂತರಾಗಿರಬೇಕು. ಆಗ ಆ ಸಂಬಂಧ ಗಟ್ಟಿಯಾಗುತ್ತದೆ ಎಂದು ಮೃಣಾಲ್ ಮಾತನಾಡಿದ್ದಾರೆ. ಇದನ್ನೂ ಓದಿ:ವೈಟ್ ಸೂಟ್‌ನಲ್ಲಿ ಮಿಂಚಿದ ಕಿಶನ್- ಬಾಲಿವುಡ್‌ ಹೀರೋಗೆ ಹೋಲಿಸಿದ ನೆಟ್ಟಿಗರು

ಸೆಲೆಬ್ರಿಟಿ ಆಗೋದು ತುಂಬಾ  ಕಷ್ಟ. ಶೂಟಿಂಗ್ ಸಮಯದಲ್ಲಿ ಸದಾ ಫ್ಯಾಮಿಲಿಯಿಂದ ದೂರ ಇರಬೇಕಾಗುತ್ತದೆ. ನನಗೆ ಸಹಜ ಜೀವನ ನಡೆಸಲು ಇಷ್ಟ. ನನಗೆ ಇಬ್ಬರು ಮಕ್ಕಳು ಇರಬೇಕು. ಅವರೊಂದಿಗೆ ಊಟಕ್ಕೆ ಹೋದರೆ ಎಷ್ಟು ಚೆನ್ನಾಗಿರುತ್ತದೆ ಎಂದು ತಮ್ಮ ಅಭಿಲಾಷೆಯನ್ನು ನಟಿ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ, ಮೃಣಾಲ್- ವಿಜಯ್ ನಟನೆಯ ‘ಫ್ಯಾಮಿಲಿ ಸ್ಟಾರ್’ (Family Star) ಸಿನಿಮಾ ಇದೇ ಏ.5ರಂದು ತೆರೆಗೆ ಬರುತ್ತಿದೆ. ಈ ಚಿತ್ರವನ್ನು ದಿಲ್ ರಾಜು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಿಂದ ಮೃಣಾಲ್ ಮತ್ತು ವಿಜಯ್ ಕೆರಿಯರ್‌ಗೆ ಬ್ರೇಕ್ ಸಿಗುತ್ತಾ ಕಾಯಬೇಕಿದೆ.

Share This Article