ತೆಲುಗಿನಲ್ಲಿ ಬಿಗ್ ಚಾನ್ಸ್- ಪ್ರಭಾಸ್‌ಗೆ ಮೃಣಾಲ್ ಠಾಕೂರ್ ಜೋಡಿ

Public TV
1 Min Read

ಸೀತಾರಾಮಂ, ಹಾಯ್ ನಾನ್ನಾ ಸಿನಿಮಾಗಳ ಮೂಲಕ ಸಕ್ಸಸ್ ಕಂಡ ಮೃಣಾಲ್ ಠಾಕೂರ್ (Mrunal Thakur) ಇದೀಗ ತೆಲುಗಿನಲ್ಲಿ ಗೋಲ್ಡನ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಡಾರ್ಲಿಂಗ್ ಪ್ರಭಾಸ್ (Prabhas) ಜೊತೆ ರೊಮ್ಯಾನ್ಸ್ ಮಾಡೋಕೆ ನಟಿ ರೆಡಿಯಾಗಿದ್ದಾರೆ.

ತೆಲುಗು ಮತ್ತು ಬಾಲಿವುಡ್‌ನಲ್ಲಿ ಗುರುತಿಸಿಕೊಳ್ತಿರುವ ಮೃಣಾಲ್‌ಗೆ ಪ್ರಭಾಸ್ ಚಿತ್ರತಂಡ ಮಣೆ ಹಾಕಿದೆ. ಸುಂದರ ಪ್ರೇಮಕಥೆಯಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ಮೃಣಾಲ್ ಕಾಣಿಸಿಕೊಳ್ತಿದ್ದಾರೆ. ವಿಶೇಷ ಅಂದ್ರೆ, ‘ಸೀತಾರಾಮಂ’ ನಿರ್ದೇಶಕ ಈ ಚಿತ್ರಕ್ಕೂ ಡೈರೆಕ್ಷನ್‌ ಮಾಡುತ್ತಿದ್ದಾರೆ. ಹನು ರಾಘವಪುಡಿ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇದನ್ನೂ ಓದಿ:ನಾನು ಸುದೀಪ್ ಅವರ ದೊಡ್ಡ ಅಭಿಮಾನಿ: ‘ಮ್ಯಾಕ್ಸ್’ ನಟಿ ಸಂಯುಕ್ತಾ ಹೊರನಾಡ್

ಪ್ರಭಾಸ್ ಮತ್ತು ಮೃಣಾಲ್ ಕಾಂಬಿನೇಷನ್‌ ಚಿತ್ರ ಇದೇ ಸೆಪ್ಟೆಂಬರ್‌ನಿಂದ ಶುರುವಾಗಲಿದೆ. ಈ ಸಿನಿಮಾ‌ ತಂಡದಿಂದ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಇನ್ನೂ ಕಲ್ಕಿ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ಅತಿಥಿ ಪಾತ್ರ ಮಾಡಿದ್ದರು. ಅವರ ನಟನೆಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹಾಗಾಗಿ ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ.

Share This Article