ಹಾಟ್ ಆದ ಮೃಣಾಲ್- ನಟಿಯ ಮೈಮಾಟಕ್ಕೆ ಪಡ್ಡೆಹುಡುಗರು ಫಿದಾ

Public TV
1 Min Read

ಬಾಲಿವುಡ್ ಬೆಡಗಿ ಮೃಣಾಲ್ ಠಾಕೂರ್ (Mrunal Thakur) ಇದೀಗ ಶರ್ಟ್ ಜಾರಿಸಿ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ‘ಸೀತಾರಾಮಂ’ (Seetharamam) ನಟಿ ಬೋಲ್ಡ್ ಆಗಿ ಕಾಣಿಸಿಕೊಂಡಿರೋದನ್ನು ನೋಡಿ ಫ್ಯಾನ್ಸ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸದಾ ಸಿನಿಮಾಗಳ ಮೂಲಕ ಸದ್ದು ಮಾಡುತ್ತಿದ್ದ ನಟಿ ಈಗ ಗ್ಲ್ಯಾಮರಸ್‌ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ವಿವಿಧ ಭಂಗಿಯ ಹಾಟ್ ಫೋಟೋಸ್ ಶೇರ್ ಮಾಡಿದ್ದಾರೆ. ಸಖತ್ ಸೆಕ್ಸಿಯಾಗಿ ನಟಿ ಪೋಸ್ ನೀಡಿದ್ದಾರೆ. ಮೃಣಾಲ್ ಮೈಮಾಟಕ್ಕೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

ಮೃಣಾಲ್ ಲುಕ್‌ಗೆ ಕೆಲವರು ಮೆಚ್ಚುಗೆ ಸೂಚಿಸಿದ್ರೆ, ಇನ್ನೂ ಕೆಲವರು ಹೀಗೆಲ್ಲಾ ಫೋಟೋಶೂಟ್ ಮಾಡಿಸಬೇಡಿ ಎಂದು ಫ್ಯಾನ್ಸ್‌ ಮನವಿ ಮಾಡಿದ್ದಾರೆ. ಇದನ್ನೂ ಓದಿ:ರಶ್ಮಿಕಾ, ಶ್ರೀಲೀಲಾ ಅಬ್ಬರದ ನಡುವೆ ಕಾಣೆಯಾದ ಕೃತಿ ಶೆಟ್ಟಿ

ಮೃಣಾಲ್ ಠಾಕೂರ್‌ಗೆ ಇದೀಗ ಟಾಲಿವುಡ್, ಕಾಲಿವುಡ್, ಬಾಲಿವುಡ್‌ನಲ್ಲಿ ಭಾರೀ ಬೇಡಿಕೆಯಿದೆ. ‘ಸೀತಾರಾಮಂ’ ಸಕ್ಸಸ್ ನಂತರ ಸಾಲು ಸಾಲು ಸಿನಿಮಾಗಳು ನಟಿಯ ಕೈಯಲ್ಲಿವೆ. ಸ್ಟಾರ್ ನಟರ ಸಿನಿಮಾಗೆ ಮೃಣಾಲ್‌ನೇ ಬೇಕು ಎನ್ನುವಷ್ಟರ ಮಟ್ಟಿಗೆ ಡಿಮ್ಯಾಂಡ್ ಇದೆ.

Share This Article