ಕನ್ನಡತಿ ಶ್ರೀಲೀಲಾ ಹಿಂದಿಕ್ಕಿದ ‘ಸೀತಾರಾಮಂ’ ಬೆಡಗಿ ಮೃಣಾಲ್

Public TV
2 Min Read

ನ್ನಡದ ‘ಭರಾಟೆ’ (Bharate) ಬ್ಯೂಟಿ ಶ್ರೀಲೀಲಾ ಅವರು ಟಾಲಿವುಡ್ ರಂಗದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ರಶ್ಮಿಕಾ ಮಂದಣ್ಣ (Rashmika Mandanna), ಕೃತಿ ಶೆಟ್ಟಿ (Kriti Shetty), ಪೂಜಾ ಹೆಗ್ಡೆಗೆ (Pooja Hegde) ಟಕ್ಕರ್ ಕೊಟ್ಟಿದ್ದ ನಟಿಗೆ ಈಗ ಸೀತಾರಾಮಂ ನಟಿ ಮೃಣಾಲ್ ಪೈಪೋಟಿ ನೀಡ್ತಿದ್ದಾರೆ. ಯಾವ ವಿಚಾರ? ಏನ್ ಕಥೆ ಇಲ್ಲಿದೆ ಡಿಟೈಲ್ಸ್

ಕಿಸ್, ಭರಾಟೆ, ಬೈಟು ಲವ್ ಸಿನಿಮಾದ ನಂತರ ‘ಪೆಳ್ಳಿ ಸಂದಡಿ’ ಸಿನಿಮಾದ ಮೂಲಕ ತೆಲುಗಿಗೆ ಕಾಲಿಟ್ಟ ನಟಿ ಶ್ರೀಲೀಲಾ ಈಗ ಅಲ್ಲೇ ಗಟ್ಟಿ ನೆಲೆ ಗಿಟ್ಟಿಸಿಕೊಂಡಿದ್ದಾರೆ. 10ಕ್ಕೂ ಹೆಚ್ಚು ಸಿನಿಮಾಗಳಿಗೆ ಶ್ರೀಲೀಲಾ ನಾಯಕಿಯಾಗಿದ್ದಾರೆ. ಸ್ಟಾರ್ ಸಿನಿಮಾಗೆ ಈಗ ಕಿಸ್ ನಾಯಕಿನೇ ಬೇಕು ಎಂಬಷ್ಟರ ಮಟ್ಟಿಗೆ ಬೆಂಗಳೂರಿನ ಬ್ಯೂಟಿ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಜುಲೈ 21ರಂದು ಬೆಚ್ಚಿ ಬೀಳಿಸಲು ರೆಡಿಯಾಯ್ತು ‘ಅಂಬುಜ’ ಟೀಂ

ರಶ್ಮಿಕಾ ಮಂದಣ್ಣ, ಕೃತಿ, ಪೂಜಾ ಹೆಗ್ಡೆಗೆ ಟಕ್ಕರ್ ಕೊಟ್ಟು ಹತ್ತಕೂ ಹೆಚ್ಚು ಚಿತ್ರಗಳಿಗೆ ಶ್ರೀಲೀಲಾ ನಾಯಕಿಯಾಗಿದ್ರೆ ಈಗ ಕನ್ನಡತಿಗೆ ಮರಾಠಿ ಸುಂದರಿ ಸೆಡ್ಡು ಹೊಡೆದಿದ್ದಾರೆ. ಹೌದು.. ‘ಸೀತಾರಾಮಂ’ ಸಿನಿಮಾ ರಿಲೀಸ್ ಆದ್ಮೇಲೆ ಮೃಣಾಲ್ ಠಾಕೂರ್‌ಗೆ (Mrunal Thakur) ಬಂಪರ್ ಅವಕಾಶಗಳು ಅರಸಿ ಬರುತ್ತಿದೆ. ಬಾಲಿವುಡ್- ಟಾಲಿವುಡ್ (Tollywood) ಎರಡಲ್ಲೂ ಅವಕಾಶ ಗಿಟ್ಟಿಸಿಕೊಳ್ತಿದ್ದಾರೆ. ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾಗೆ ಸಂಭಾವನೆ ಕೂಡ ಏರಿಸಿಕೊಳ್ತಿದ್ದಾರೆ.

ಇದೀಗ ಶ್ರೀಲೀಲಾ- ಮೃಣಾಲ್ ಸಂಭಾವನೆ ವಿಚಾರ ಅನೇಕರ ಚರ್ಚೆಗೆ ಗ್ರಾಸವಾಗಿದೆ. ಶಿವ ಕಾರ್ತಿಕೇಯನ್ ಅವರ ಪ್ಯಾನ್ ಇಂಡಿಯಾ ಚಿತ್ರಕ್ಕೆ ಮೃಣಾಲ್ ನಾಯಕಿಯಾಗಿದ್ದಾರೆ. ನಾನಿ 30ನೇ ಚಿತ್ರ, ವಿಜಯ್ ದೇವರಕೊಂಡ ಹೊಸ ಸಿನಿಮಾಗೆ ಮೃಣಾಲ್ ಅವರೇ ಜೋಡಿ. ಹೀಗಿರುವಾಗ ಒಂದು ಚಿತ್ರಕ್ಕೆ 4ರಿಂದ 4.5 ಕೋಟಿ ಚಾರ್ಜ್ ಮಾಡ್ತಿದ್ದಾರೆ.

ಸದ್ಯದ ತೆಲುಗಿನ ಕ್ರೇಜಿ ಗರ್ಲ್‌ ಶ್ರೀಲೀಲಾ ಅವರು ಒಂದು ಚಿತ್ರಕ್ಕೆ 2 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಭರಾಟೆ ನಟಿಗಿಂತ ಮೃಣಾಲ್‌ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಈ ಮೂಲಕ ಕನ್ನಡತಿಗೆ ಮರಾಠಿ ಸುಂದರಿ ಮೃಣಾಲ್ ಸೆಡ್ಡು ಹೊಡೆದಿದ್ದಾರೆ. ಸದ್ಯದ ಮಟ್ಟಿಗೆ ಶ್ರೀಲೀಲಾಗೆ ಟಕ್ಕರ್ ಕೊಡೋರು ಮೃಣಾಲ್ ಮಾತ್ರ ಅಂತಾ ಸಿನಿ ಪಂಡಿತರು ಚರ್ಚೆ ಮಾಡ್ತಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್