ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ ಮಿಲನಾ ನಾಗರಾಜ್

Public TV
1 Min Read

ಸ್ಯಾಂಡಲ್‌ವುಡ್ ನಟಿ ಮಿಲನಾ ನಾಗರಾಜ್ (Milana Nagaraj) ಮತ್ತು ಡಾರ್ಲಿಂಗ್‌ ಕೃಷ್ಣ (Darling Krishna) ದಂಪತಿ ಅವರು ಮೊದಲ ಮಗುವಿನ ಬರುವಿಕೆಯ ನಿರೀಕ್ಷೆಯಲ್ಲಿದ್ದಾರೆ. ಸೀಮಂತ ಶಾಸ್ತ್ರ ಅದ್ಧೂರಿಯಾಗಿ ನೆರವೇರಿದ ಬೆನ್ನಲ್ಲೇ ಮಸ್ತ್ ಆಗಿ ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಅತ್ತಿಗೆ ಸೀಮಂತದಲ್ಲಿ ಮಿಂಚಿದ ‘ಸೀತಾರಾಮ’ ನಟಿ ವೈಷ್ಣವಿ

ನೀನು ಹುಟ್ಟೋದಕ್ಕೂ ಮುಂಚೆ ನಾನು ರಾಣಿಯಂತೆ ಫೀಲ್ ಮಾಡುತ್ತಿದ್ದೇನೆ ಎನ್ನುತ್ತಾ ಮಗುವಿನ ಬರುವಿಕೆಯ ಕಾತುರತೆಯನ್ನು ಸೋಷಿಯಲ್ ಮೀಡಿಯಾದಲ್ಲಿ ನಟಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಕಡಲ ತಡಿಯ ಕಲಾವಿದರ `ಕಲ್ಜಿಗ’ ಟ್ರೈಲರ್ ಅನಾವರಣ

ರೋಸ್ ಕಲರ್ ಗೌನ್ ಧರಿಸಿ, ಕುತ್ತಿಗೆಗೆ ಮುತ್ತಿನ ಸರ ಹಾಕಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದು, ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಏಂಜಲ್‌ನಂತೆ ಮಿಂಚುತ್ತಿರುವ ನಟಿಗೆ ಕ್ಯೂಟ್, ಬ್ಯೂಟಿಫುಲ್ ಅಂತ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ. ಜ್ಯೂನಿಯರ್ ನಿಧಿಮಾಗಾಗಿ ಕಾಯುತ್ತಿರೋದಾಗಿ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.

ತಾಯಿಯಾಗುತ್ತಿರುವ ಮಿಲನಾ ಸದ್ಯ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ‘ಲವ್ ಮಾಕ್ಟೈಲ್‌ 3’ ಸಿನಿಮಾ ಕೆಲಸ ನಡೆಯುತ್ತಿದೆ. ಆದರೆ ಈ ಪ್ರಾಜೆಕ್ಟ್ ಇನ್ನೂ ಶುರು ಆಗೋದು ಮುಂದಿನ ವರ್ಷ ಎನ್ನಲಾಗಿದೆ. ಡಾರ್ಲಿಂಗ್ ಕೃಷ್ಣ ‘ಫಾದರ್’ (Father) ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನೂ ‘ಲವ್ ಮಾಕ್ಟೈಲ್‌ 1’ ಮತ್ತು ‘ಲವ್ ಮಾಕ್ಟೈಲ್‌ 2’ ಈ ಎರಡು ಸಿನಿಮಾಗಳು ಕೃಷ್ಣ ಮತ್ತು ಮಿಲನಾ ದಂಪತಿಗೆ ಸಕ್ಸಸ್ ಕೊಟ್ಟಿದೆ. ಇದರ ಮುಂದಿನ ಸೀಕ್ವೆಲ್ ಬಗ್ಗೆ ಫ್ಯಾನ್ಸ್‌ಗೆ ನಿರೀಕ್ಷೆಯಿದೆ.

Share This Article