Exclusive: ರಾಜಕೀಯ ಪ್ರವೇಶದ ಬಗ್ಗೆ ಮೇಘನಾ ರಾಜ್‌ ಫಸ್ಟ್‌ ರಿಯಾಕ್ಷನ್‌

Public TV
1 Min Read

ಸ್ಯಾಂಡಲ್‌ವುಡ್ (Sandalwood) ನಟಿ ಮೇಘನಾ ರಾಜ್ (Meghana Raj) ಅವರು ಸದ್ಯ ‘ತತ್ಸಮ ತದ್ಭವ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಇದೀಗ ರಾಜಕೀಯಕ್ಕೆ (Politics) ಬರುವ ಬಗ್ಗೆ ಮೇಘನಾ ರಾಜ್ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಫಸ್ಟ್ ರಿಯಾಕ್ಷನ್ ನೀಡಿದ್ದಾರೆ.

ಪ್ರಸ್ತುತ ರಾಜಕೀಯ ಅಂಗಳದಲ್ಲಿ ಚುನಾವಣೆ ಕಾವು ಜೋರಾಗಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷದಿಂದ ಪಕ್ಷಕ್ಕೆ ಹಾರುವುದು ಸರ್ವೇ ಸಾಮಾನ್ಯವಾಗಿದೆ. ಇತ್ತೀಚಿಗೆ ಕಿಚ್ಚ ಸುದೀಪ್ ಬಿಜೆಪಿಗೆ ತಮ್ಮ ಬೆಂಬಲ ಘೋಷಿಸಿದ್ದರು. ಸಾಧು ಕೋಕಿಲ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಚಿತ್ರರಂಗದಿಂದ ರಾಜಕೀಯಕ್ಕೆ ಹಲವು ಕಲಾವಿದರು ಎಂಟ್ರಿ ಕೊಡ್ತಿದ್ದಾರೆ. ಈಗ ರಾಜಕೀಯ (Politics) ಪ್ರವೇಶದ (Entry) ಬಗ್ಗೆ ಮೇಘನಾ ರಾಜ್ ನಿಲುವೇನು ಎಂದು ತಿಳಿಸಿದ್ದಾರೆ.

ರಾಜಕೀಯದ ಬಗ್ಗೆ ನಾನು ಹೆಚ್ಚಾಗಿ ಏನು ಯೋಚನೆ ಮಾಡಿಲ್ಲ. ಜನಸೇವೆ ಮಾಡುವುದಕ್ಕೆ ಖಂಡಿತಾ ಒಳ್ಳೆಯ ವೇದಿಕೆ. ಈ ಕ್ಷೇತ್ರ ದೊಡ್ಡ ವೇದಿಕೆ ಆದರೆ ರಾಜಕೀಯ ಬರುವ ಬಗ್ಗೆ ನಾನು ಯೋಚನೆ ಮಾಡಿಲ್ಲ ಎಂದು ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ರಾಜಕೀಯ ಎಂಟ್ರಿ ಬಗ್ಗೆ ಸದ್ಯಕ್ಕೆ ಆಲೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೇಘನಾ ರಾಜ್ ಸದ್ಯ ಮಗ ರಾಯನ್ ಆರೈಕೆ ಮತ್ತು ಸಿನಿಮಾ ಅಂತಾ ಬ್ಯುಸಿಯಾಗಿದ್ದಾರೆ. ಹೊಸ ಬಗೆಯ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ.

ಶೃತಿ ರಿಪ್ಪನ್‌ಪೇಟೆ, ಪಬ್ಲಿಕ್‌ ಟಿವಿ ಡಿಜಿಟಲ್‌ 

Share This Article