ಮಿಸ್ಟರ್ ರೈಟ್, ನೀನು ನನ್ನ ಬೆಳಕು- ಚಿರುಗೆ ಮೇಘನಾ ರಾಜ್ ವಿಶ್

Public TV
1 Min Read

ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ (Meghana Raj) ಅವರು ಮದುವೆಯ ವಾರ್ಷಿಕೋತ್ಸವಕ್ಕೆ ಪತಿ ಚಿರುಗೆ ಪ್ರೀತಿಯ ಸಂದೇಶ ಬರೆದಿದ್ದಾರೆ. 7 ವರ್ಷಗಳ ದಾಂಪತ್ಯ ಬದುಕಿಗೆ ಚಿರಂಜೀವಿ ಜೊತೆಗಿನ ಹಳೆಯ ಫೋಟೋ ಶೇರ್ ಮಾಡಿ ವಿಶ್ ಮಾಡಿದ್ದಾರೆ.

ನನ್ನ ಮಿಸ್ಟರ್ ರೈಟ್, ನೀನು ನನ್ನ ಬೆಳಕು ಎಂದು ನಟಿ ಬರೆದುಕೊಂಡಿದ್ದಾರೆ. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಮೇಘನಾ ರಾಜ್ ಶುಭಕೋರಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್‌ರನ್ನು ಹೊಗಳಿದ ಬಾಲಿವುಡ್‌ ನಟ ಅನುಪಮ್ ಖೇರ್

 

View this post on Instagram

 

A post shared by Meghana Raj Sarja (@megsraj)

ಅಂದಹಾಗೆ, 2018ರಲ್ಲಿ ಮೇ 2ರಂದು ಚಿರಂಜೀವಿ ಸರ್ಜಾ (Chiranjeevi Sarja) ಜೊತೆ ಮೇಘನಾ ರಾಜ್ ಮದುವೆಯಾಗಿದ್ದಾರೆ. 2020ರಲ್ಲಿ ಚಿರಂಜೀವಿ ವಿಧಿವಶರಾದರು. ಪುತ್ರ ರಾಯನ್ ಆಗಮನ ಮೇಘನಾ ಬದುಕಿನಲ್ಲಿ ಖುಷಿ ಕೊಟ್ಟಿದೆ.

ಇನ್ನೂ ಸಿನಿಮಾ ವಿಚಾರಕ್ಕೆ ಬರೋದಾದ್ರೆ, ‘ತತ್ಸಮ ತದ್ಭವ’ ಸಿನಿಮಾ ಮೂಲಕ ನಟಿ ಕಮ್‌ಬ್ಯಾಕ್ ಮಾಡಿ ಗಮನ ಸೆಳೆದರು. ಸದ್ಯದಲ್ಲೇ ಹೊಸ ಸಿನಿಮಾದ ಘೋಷಣೆ ಕೂಡ ಮಾಡಲಿದ್ದಾರೆ.

Share This Article