ಮೂಗುತಿ ಚುಚ್ಚಿಸಿದ ಮೇಘಾ ಶೆಟ್ಟಿಗೆ ಮದುವೆ ಫಿಕ್ಸಾ ಎಂದ ಫ್ಯಾನ್ಸ್

By
1 Min Read

‘ಜೊತೆ ಜೊತೆಯಲಿ’ (Jothe Jotheyali) ಮೇಘಾ ಶೆಟ್ಟಿ ವಿಡಿಯೋ ನೋಡಿ ಫ್ಯಾನ್ಸ್ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳ್ತಿದ್ದಾರೆ. ಮದುವೆ ಯಾವಾಗ ಬಂಗಾರ ಅಂತಿದ್ದಾರೆ. ಮೇಘಾ ಮೂಗುತಿ ವಿಡಿಯೋ ಸಾವಿರಾರು ಕಣ್ಣುಗಳನ್ನು ತಲುಪಿದೆ. ಸದ್ಯ ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ಮೇಘಾ ಶೆಟ್ಟಿಯ ಒಂದು ಮೂಗುತಿ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

‘ಜೊತೆ ಜೊತೆಯಲಿ’ ಮೇಘಾ ಶೆಟ್ಟಿ (Megha Shetty) ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರ್ತಾರೆ. ಪ್ರತಿನಿತ್ಯ ತಮ್ಮ ಸ್ಪೆಷಲ್ ಸಂಗತಿಗಳನ್ನ ಅಭಿಮಾನಿಗಳ ಜೊತೆ ಶೇರ್ ಮಾಡ್ತಿರ್ತಾರೆ. ಈಗ ಮೇಘಾ ಶೆಟ್ಟಿ ಮೂಗು ಚುಚ್ಚಿಸಿಕೊಂಡಿರುವ ವಿಡಿಯೋ ಶೇರ್ ಮಾಡಿದ್ದಾರೆ. ಮೂವತ್ತು ಸೆಕೆಂಡ್‌ಗಳ ವಿಡಿಯೋ ಸಾವಿರಾರು ಜನರನ್ನ ತಲುಪುತಿದೆ. ವಿಡಿಯೋ ನೋಡಿದ ಮೇಘಾ ಫ್ಯಾನ್ಸ್ ಪ್ರಶ್ನೆಗಳನ್ನ ಕೇಳೋಕೆ ಶುರು ಮಾಡಿದ್ದಾರೆ. ನಿಮ್ಮ ಮದುವೆ ಯಾವಾಗ? ಮದುವೆ (Wedding) ಫಿಕ್ಸಾ ಅಂತೆಲ್ಲಾ ನಟಿಯ ಮುಂದೆ ಬಗೆ ಬಗೆಯ ಪ್ರಶ್ನೆಗಳನ್ನ ಕೇಳ್ತಿದ್ದಾರೆ.‌ ಇದನ್ನೂ ಓದಿ:ಮಲೇಷ್ಯಾದಲ್ಲೂ ದಾಖಲೆ ಬರೆದ ರಜನಿ ನಟನೆಯ ‘ಜೈಲರ್’ ಸಿನಿಮಾ

ಬಂಗಾರದಂಥ ಹುಡುಗಿಗೆ ಬಂಗಾರದ ಮೂಗುತಿ ಅಂತ ಕಾಮೆಂಟ್ ಮಾಡ್ತಿದ್ದಾರೆ. ಸೀರಿಯಲ್ ಮೂಲಕ ಮನೆ ಮಾತಾದ ಮೇಘಾ ಸದ್ಯ ಸಿನಿಮಾಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡ್ತಿದ್ದಾರೆ. ಕನ್ನಡದ ಜೊತೆಗೆ ಲಂಡನ್ ಕೆಫೆ (Landon Cafe) ಸಿನಿಮಾ ಮೂಲಕ ಮರಾಠಿ ಆಡಿಯನ್ಸ್ ಕೂಡ ತಲುಪುವ ಕೆಲಸ ಮಾಡ್ತಿದ್ದಾರೆ. ಹೊಸ ಮೂಗುತಿ ಜೊತೆ ಮೇಘಾ ಮಿಂಚ್ತಿದ್ದಾರೆ ಈಕೆ ಫ್ಯಾನ್ಸ್ ಸ್ಮೈಲಿಂಗ್.

ಇದೆಲ್ಲದರ ಜೊತೆಗೆ ಮೇಘಾ ಶೆಟ್ಟಿ ಹೆಸರು ಬಿಗ್ ಬಾಸ್ ಮನೆ ಅಂಗಳದಲ್ಲೂ ಕೇಳಿ ಬರುತ್ತಿದೆ. ಬಹುನಿರೀಕ್ಷಿತ ಬಿಗ್ ಬಾಸ್ ಸೀಸನ್ 10ಕ್ಕೆ ಮೇಘಾ ಕೂಡ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್