ಬಳುಕುವ ಬಳ್ಳಿಯಂತೆ ಕ್ಯಾಮೆರಾಗೆ ಪೋಸ್ ಕೊಟ್ಟ ಮೇಘಾ ಶೆಟ್ಟಿ

By
1 Min Read

ನ್ನಡದ ನಟಿ ಮೇಘಾ ಶೆಟ್ಟಿ (Megha Shetty) ಇದೀಗ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಕ್ಯಾಮೆರಾ ಕಣ್ಣಿಗೆ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ‘ಕೈವ’ (Kaiva) ನಟಿಯ ಹೊಸ ಲುಕ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನೀಲಿ ಬಣ್ಣದ ಡ್ರೆಸ್‌ನಲ್ಲಿ ಬಳುಕುವ ಬಳ್ಳಿಯಂತೆ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ನಟಿಯ ಮಾಡ್ರನ್ ಲುಕ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಮೇಘಾ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಮೇಘಾ ಹೊಸ ಅವತಾರ ನೋಡಿ ನೆಟ್ಟಿಗರು ಬಗೆ ಬಗೆಯ ಕಾಮೆಂಟ್ ಹಾಕ್ತಿದ್ದಾರೆ. ಇದನ್ನೂ ಓದಿ:ಸತತ ಸಿನಿಮಾಗಳ ಸೋಲು- ಸೌತ್ ನಿರ್ದೇಶಕನ ಸಿನಿಮಾದಲ್ಲಿ ಸಲ್ಮಾನ್ ಖಾನ್

‘ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ ಮೂಲಕ ಟಿವಿ ಜಗತ್ತಿಗೆ ಪರಿಚಿತರಾದ ಮೇಘಾ ಶೆಟ್ಟಿ ಅವರು ಈಗ ಬೆಳ್ಳಿತೆರೆಯಲ್ಲಿ ಸಾಲು ಸಾಲು ಸಿನಿಮಾಗಳನ್ನು ಮಾಡ್ತಿದ್ದಾರೆ. ಅನು ಸಿರಿಮನೆ ಎಂಬ ಪಾತ್ರದ ಮೂಲಕ ಕಿರುತೆರೆ ಮನೆ ಮಾತಾಗಿದ್ದ ನಟಿ ಈಗ ಸ್ಯಾಂಡಲ್‌ವುಡ್‌ನಲ್ಲಿ ಮಿಂಚ್ತಿದ್ದಾರೆ.

ಇಂದಿಗೂ ಮೇಘಾ ನಟಿಸಿದ ಅನು ಸಿರಿಮನೆ ಪಾತ್ರವನ್ನು ಸ್ಮರಿಸುತ್ತಾರೆ. ಅನಿರುದ್ಧ ಮತ್ತು ಮೇಘಾ ಜೋಡಿ ಸೀರಿಯಲ್‌ನಲ್ಲಿ ಮೋಡಿ ಮಾಡಿತ್ತು. ಮೇಘಾ ಸಿನಿಮಾಗಳಲ್ಲಿ ಆ್ಯಕ್ಟೀವ್ ಆಗಿದ್ರು ಕೂಡ ಅನು ಪಾತ್ರವನ್ನು ಅಭಿಮಾನಿಗಳು ಮರೆತಿಲ್ಲ.

ದಿಲ್‌ಪಸಂದ್, ತ್ರಿಬಲ್ ರೈಡಿಂಗ್, ‘ಕೈವ’ ಸಿನಿಮಾಗಳಲ್ಲಿ ನಟಿಸುವ ಮೂಲಕ ನಾಯಕಿಯಾಗಿ ಮೇಘಾ ಸದ್ದು ಮಾಡಿದ್ದಾರೆ. ಸದ್ಯ ವಿನಯ್ ರಾಜ್‌ಕುಮಾರ್‌ಗೆ ನಾಯಕಿಯಾಗಿ ‘ಗ್ರಾಮಾಯಣ’ ಚಿತ್ರದಲ್ಲಿ ಮೇಘಾ ಶೆಟ್ಟಿ ನಟಿಸುತ್ತಿದ್ದಾರೆ.

Share This Article