ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಮಿಳು ನಟಿ ಮೀತಾ ರಘುನಾಥ್

Public TV
1 Min Read

‘ಗುಡ್ ನೈಟ್’ (Good Night) ಸಿನಿಮಾದಲ್ಲಿ ಮೋಡಿ ಮಾಡಿರುವ ತಮಿಳು ನಟಿ ಮೀತಾ ರಘುನಾಥ್ (Meetha Raghunath) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬಹುಕಾಲದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ನಟಿ ಕಾಲಿಟ್ಟಿದ್ದಾರೆ. ಮದುವೆಯ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ರಣವೀರ್ ಸಿಂಗ್ ಅವರ ಯೋಗ್ಯತೆ ಪ್ರಶ್ನೆ ಮಾಡಿದ ಶಕ್ತಿಮಾನ್

ಮದುವೆಯ ಬಗ್ಗೆ ನಟಿ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ಪತಿಯ ಬಗ್ಗೆ ಮಾಹಿತಿಯನ್ನು ಮೀತಾ ರಿವೀಲ್ ಮಾಡಿಲ್ಲ. ‘ನನ್ನ ತುಂಬು ಹೃದಯ’ ಎಂದು ಕ್ಯಾಪ್ಷನ್ ನೀಡಿ ಪತಿಯ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Meetha Raghunath (@the.meethling)

2022ರಲ್ಲಿ ‘ಮುದಲ್ ನೀ ಮುದಿವುಂ ನೀ’ ಚಿತ್ರದ ಮೂಲಕ ನಟಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ‘ಗುಡ್ ನೈಟ್’ ಸಿನಿಮಾ ಮೂಲಕ ಮೀತಾ ಜನಪ್ರಿಯತೆ ಗಳಿಸಿದ್ದಾರೆ.

‘ಗುಡ್ ನೈಟ್’ ಸಿನಿಮಾದಲ್ಲಿ ಮಣಿಕಂದನ್‌ಗೆ ಪತ್ನಿಯಾಗಿ ಮೀತಾ ರಘುನಾಥ್ ನಟಿಸಿದ್ದಾರೆ. ಗೊರಕೆ ಸಮಸ್ಯೆಯಿರುವ ಐಟಿ ಉದ್ಯೋಗಿಯಾಗಿ ಮೀತಾ ನಟಿಸಿದ್ದರು.

Share This Article