ಫ್ಯಾಟ್ ಸರ್ಜರಿಗೆ ಒಳಗಾಗಿ ಕಿರುತೆರೆ ನಟಿ ಚೇತನಾ ರಾಜ್ ಸಾವಿನ ನಂತರ ಬಾಡಿ ಶೇಮಿಂಗ್ ಕುರಿತು ಸ್ಯಾಂಡಲ್‌ವುಡ್ ನಟಿಯರು ದನಿಯೆತ್ತಿದ್ದಾರೆ. ರಮ್ಯಾ, ಪ್ರಿಯಾಂಕಾ ಉಪೇಂದ್ರ, ನಂತರ ಇದೀಗ `ಕೃಷ್ಣಲೀಲಾ’ ನಟಿ ಮಯೂರಿ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ.
ಕಿರುತೆರೆಯ `ಅಶ್ವಿನಿ ನಕ್ಷತ್ರ’ ಸೀರಿಯಲ್‌ನಿಂದ ಶುರುವಾದ ಬಣ್ಣದ ಬದುಕು, `ಕೃಷ್ಣಲೀಲಾ’, ಪೊಗರು ಚಿತ್ರದವರೆಗೂ ನಟಿ ಮಯೂರಿ ತಮ್ಮ ನಟನೆಯ ಮೂಲಕ ಮೋಡಿ ಮಾಡುತ್ತಲೇ ಬಂದಿದ್ದಾರೆ. ಈಗ ಯುವ ಚೇತನಾ ಸಾವಿಗೆ ನಟಿ ಮಯೂರಿ ಕೂಡ ಧ್ವನಿಗೂಡಿಸಿದ್ದಾರೆ. ಬಾಡಿ ಶೇಮಿಂಗ್ ವಿರುದ್ಧ ಮಯೂರಿ ಮಾತನಾಡಿದ್ದಾರೆ.

ನಟಿ ಮಯೂರಿ ಕೂಡ ಮದುವೆ, ಮಗು ಅಂತಾ ಬ್ಯುಸಿಯಿದ್ದರು. ಈಗ ಮತ್ತೆ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಆಗೋಕೆ ಮಯೂರಿ ರೆಡಿಯಾಗ್ತಿದ್ದಾರೆ. ಸದ್ಯದಲ್ಲೇ ಒಂದೊಳ್ಳೆ ಕಥೆಯ ಮೂಲಕ ಬೆಳ್ಳಿಪರದೆಯಲ್ಲಿ ಮಿಂಚಲಿದ್ದಾರೆ.


