‘ಕಾಟೇರ’ ವೀಕ್ಷಿಸಿ ಮಗಳಿಗೆ ಮುತ್ತಿಟ್ಟು ಮಾಲಾಶ್ರೀ ಕಣ್ಣೀರು

Public TV
1 Min Read

ನ್ನಡ ಚಿತ್ರರಂಗದ ಹಿರಿಯ ನಟಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ (Aradhanaa Ram) ನಟಿಸಿರೋ ‘ಕಾಟೇರ’ (Katera) ಸಿನಿಮಾ ಇಂದು (ಡಿ.29) ಬಿಡುಗಡೆಯಾಗಿದೆ. ದರ್ಶನ್‌ಗೆ (Darshan) ಜೋಡಿಯಾಗಿ ಪ್ರಭಾ ಪಾತ್ರಕ್ಕೆ ಜೀವ ತುಂಬಿರೋ ಮಗಳ ನಟನೆ ನೋಡಿ ಮಾಲಾಶ್ರೀ ಕಣ್ಣೀರಿಟ್ಟಿದ್ದಾರೆ.

‘ಕಾಟೇರ’ ಸಿನಿಮಾವನ್ನು ಮಗಳ ಜೊತೆಯೇ ಮಾಲಾಶ್ರೀ (Malashree) ವೀಕ್ಷಿಸಿ ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ತುಂಬಾ ಖುಷಿ ಆಗಿದೆ ಮಗಳ ಆ್ಯಕ್ಟಿಂಗ್ ನೋಡಿ, ಏನು ಹೇಳಬೇಕು ಗೊತ್ತಾಗುತ್ತಿಲ್ಲ. ಒಂದೇ ಸಿನಿಮಾದಲ್ಲಿ ಎಲ್ಲಾ ತರಹ ನಟಿಸಿ ತೋರಿದ್ದಾಳೆ. ತುಂಬಾ ಖುಷಿ ಆಗ್ತಿದೆ. ಅವಳಿಗೆ ಸಿನಿಮಾರಂಗದಲ್ಲಿ ಫ್ಯೂಚರ್ ಇದೆ ಎಂದು ಮಾಲಾಶ್ರೀ ಭಾವುಕರಾಗಿದ್ದಾರೆ.

ಅಮ್ಮನ ಹೊರತಾಗಿ ಪ್ರೇಕ್ಷಕಿಯಾಗಿ ಹೇಳಬೇಕು ಅಂದರೆ ಮಗಳ ನಟನೆಗೆ ನೂರಕ್ಕೆ ನೂರು ಮಾರ್ಕ್ಸ್ ಕೊಡುತ್ತೀನಿ. ಎಲ್ಲಾ ದೃಶ್ಯಕ್ಕೂ ಜೀವ ತುಂಬಿದ್ದಾಳೆ ಆರಾಧನಾ. ಹೆಮ್ಮೆ ಆಗುತ್ತಿದೆ ಎಂದು ಮಗಳಿಗೆ ಮಾಲಾಶ್ರೀ ಮುತ್ತಿಟ್ಟಿದ್ದಾರೆ.

ಅಮ್ಮಾ ಅಳೋದು ನೋಡಿ ನನಗೂ ಅಳು ಬರುತ್ತಿದೆ. ಕಾಟೇರ ಬಿಗ್ ಪ್ರಾಜೆಕ್ಟ್‌ನಲ್ಲಿ ನನಗೆ ಅವಕಾಶ ಕೊಟ್ಟಿದ್ದಕ್ಕೆ ಇಡೀ ತಂಡಕ್ಕೆ ಧನ್ಯವಾದಗಳು. ಮೊದಲ ಸಿನಿಮಾದಲ್ಲಿಯೇ ಇಷ್ಟು ಒಳ್ಳೆಯ ಪಾತ್ರ ಸಿಕ್ಕಿದೆ ಇದರ ಬಗ್ಗೆ ಖುಷಿಯಿದೆ ಎಂದು ಕಾಟೇರ ನಟಿ ಆರಾಧನಾ ಭಾವುಕರಾಗಿದ್ದಾರೆ. ಇದನ್ನೂ ಓದಿ:ನಟ ವಿಜಯಕಾಂತ್ ದರ್ಶನಕ್ಕೆ ಬಂದಿದ್ದ ವಿಜಯ್ ಮೇಲೆ ಚಪ್ಪಲಿ ಎಸೆತ

ದರ್ಶನ್ ನಟನೆಯ ‘ಕಾಟೇರ’ ಸಿನಿಮಾಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದರ್ಶನ್-ಆರಾಧನಾ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡುತ್ತಿದೆ. ಸಿನಿಮಾ ಈ ವರ್ಷದ ಹಿಟ್ ಲಿಸ್ಟ್‌ಗೆ ಸೇರೋದು ಗ್ಯಾರಂಟಿ ಅಂತಿದ್ದಾರೆ ಅಭಿಮಾನಿಗಳು.

Share This Article