ದರ್ಶನ್- ನಿರ್ದೇಶಕ ತರುಣ್ ನನ್ನ ಮಗಳಿಗೆ ನಟನೆ ಹೇಳಿ ಕೊಟ್ಟರು- ಮಾಲಾಶ್ರೀ

By
1 Min Read

ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ನಟನೆಯ ‘ಕಾಟೇರ’ (Katera) ಸಿನಿಮಾ ಇಂದು ಕೊನೆಯ ಹಂತದ ಶೂಟಿಂಗ್ ಮುಕ್ತಾಯವಾಗಿದೆ. ಚಿತ್ರತಂಡದ ಕಡೆಯಿಂದ ಇಂದು (ಸೆ.11) ಸುದ್ದಿಗೋಷ್ಠಿ ಆಯೋಜಿಸಿದೆ. ಈ ಚಿತ್ರದ ಮೂಲಕ ನಾಯಕಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ವೇಳೆ ದರ್ಶನ್ ಜೊತೆ ಪುತ್ರಿ ಆರಾಧನಾ (Aradhana Ram) ನಟಿಸಿದ್ದರ ಬಗ್ಗೆ ಕನಸಿನ ರಾಣಿ ಮಾಲಾಶ್ರೀ ಸಂತಸ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಲಾಶ್ರೀ ಮಾತನಾಡಿ, ನನ್ನ ಮಗಳು ಫಸ್ಟ್ ಟೈಮ್ ಕಾಟೇರ ಸಿನಿಮಾದಲ್ಲಿ ಆಕ್ಟ್ ಮಾಡಿ ಪ್ರೆಸ್‌ಮೀಟ್‌ನಲ್ಲಿ ಕುಳಿತಿದ್ದಾರೆ. ಈ ಸಂದರ್ಭದಲ್ಲಿ ನಾನು ಇದ್ದೀನಿ ಅನ್ನೋದಕ್ಕೆ ಖುಷಿಯಾಗುತ್ತಿದೆ. ಈ ಚಿತ್ರದ ಓಪನಿಂಗ್ ಸಮಯದಲ್ಲಿ ರಾಧನಾ ರಾಮ್ ಆಗಿ ಪರಿಚಯ ಆಗಿದ್ದರು. ಆದರೆ ಈಗ ಆರಾಧನಾ ರಾಮ್ ಪರಿಚಯ ಆಗುತ್ತಿದ್ದಾರೆ, ಇನ್ಮುಂದೆ ಕೂಡ. ಅವಳ ಮೇಲೆ ನಿಮ್ಮೆಲ್ಲರ ಹಾರೈಕೆ ಹೀಗೆ ಇರಲಿ ಅಂತಾ ಕೇಳಿಕೊಳ್ಳುತ್ತಿದ್ದೀನಿ.

ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾದಲ್ಲಿ ನನ್ನ ಮಗಳು ಲಾಂಚ್ ಆಗುತ್ತಿರೋದು ಖುಷಿ ಕೊಟ್ಟಿದೆ. ಮೊದಲ ಸಿನಿಮಾನೇ ನನ್ನ ಮಗಳು ಈಸಿ ಆಗಿ ಆಕ್ಟ್ ಮಾಡಿದ್ದಳು. ಅದಕ್ಕೆ ಕಾರಣ ದರ್ಶನ್ ಅವರು, ನಟಿಸಲು ಆರಾಧನಾಗೆ ಕಂಫರ್ಟ್ ಜೋನ್ ಕೊಟ್ಟರು. ದರ್ಶನ್- ಡೃರೆಕ್ಟರ್ ತರುಣ್ ಸುಧೀರ್ ನನ್ನ ಮಗಳಿಗೆ ನಟನೆ ಹೇಳಿ ಕೊಟ್ಟರು. ಇಂತಹ ಒಳ್ಳೆಯ ಕಲಾವಿದರು ಇರುವ ಸಿನಿಮಾದಲ್ಲಿ ನನ್ನ ಮಗಳಿಗೆ ನಟಿಸಲು ಚಾನ್ಸ್ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ನಟಿ ಮಾತನಾಡಿದ್ದಾರೆ. ಸ್ಕ್ರೀನ್‌ ಮೇಲೆ ನನ್ನ ಮಗಳನ್ನು ಇನ್ನೂ ಮುದ್ದಾಗಿ ತೋರಿಸಿದ್ದಾರೆ ಎಂದು ಮಾಲಾಶ್ರೀ (Malashree) ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ:ರಕ್ಷಿತಾರಂತೆಯೇ ಆರಾಧನಾ ಒನ್ ಟೇಕ್ ಆರ್ಟಿಸ್ಟ್ ಎಂದು ಹೊಗಳಿದ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್-ಆರಾಧನಾ ರಾಮ್ ನಟನೆಯ ‘ಕಾಟೇರ’ ಸಿನಿಮಾಗೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದು, ರಾಕ್‌ಲೈನ್ ವೆಂಕಟೇಶ್ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್