ಬಾಲಿವುಡ್ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಕ್ಯಾಮೆರಾ ಕಣ್ಣಲ್ಲಿ ‘ಕಾಟೇರ’ ನಟಿ ಆರಾಧನಾ

Public TV
1 Min Read

‘ಕಾಟೇರಾ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಖ್ಯಾತ ನಟಿ ಮಾಲಾಶ್ರೀ ಪುತ್ರಿ ಆರಾಧನಾ (Aradhanaa) ಇದೀಗ ಕಲರ್‌ಫುಲ್ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ. ಬಾಲಿವುಡ್‌ನ ಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಡಬೂ ರತ್ನಾನಿ (Dabboo Ratnani) ಅವರ ಕ್ಯಾಮೆರಾದಲ್ಲಿ ಆರಾಧನಾ ಸುಂದರವಾಗಿ ಸೆರೆಯಾಗಿದ್ದಾರೆ.

ಸೂಪರ್ ಸಕ್ಸಸ್ ಸಿನಿಮಾ ಮೂಲಕವೇ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ‘ಕಾಟೇರ’ (Kaatera) ಆರಾಧನಾ ಮೊದಲ ಸಿನಿಮಾದಲ್ಲೇ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇದೀಗ ಎರಡನೇ ಸಿನಿಮಾದ ಹುಡುಕಾಟದಲ್ಲಿರುವ ಮಾಲಾಶ್ರೀ ಪುತ್ರಿ ಸದ್ಯ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಶಾರುಖ್ ಖಾನ್, ಸಲ್ಮಾನ್, ಹೃತಿಕ್ ರೋಷನ್ ಹೀಗೆ ಅನೇಕ ಪ್ರಖ್ಯಾತ ಬಾಲಿವುಡ್ ಕಲಾವಿದರ ಸುಂದರ ಫೋಟೋಗಳನ್ನು ಕ್ಯಾಪ್ಚರ್ ಮಾಡಿರುವ ಡಬೂ ರತ್ನಾನಿ ಇದೀಗ ಕನ್ನಡದ ಕಲಾವಿದೆಯನ್ನು ತಮ್ಮ ಕ್ಯಾಮೆರಾ ಮೂಲಕ ಅದ್ಭುತವಾಗಿ ಸೆರೆ ಹಿಡಿದಿರುವುದು ಹೆಮ್ಮೆಯ ವಿಚಾರವಾಗಿದೆ.

ಅಂದಹಾಗೆ, ಆರಾಧನಾ ರಾಣಿಯಂತೆ ಕಂಗೊಳಿಸುತ್ತಿರುವುದು ದಿ ಜ್ಯುವೆಲ್ಲರಿ ಶೋಗಾಗಿ. ವೆರೈಟಿ ಕಾಸ್ಟೂಮ್ ನಲ್ಲ ಹೆವಿ ಜ್ಯುವೆಲ್ಲರಿ ಧರಿಸಿ ತರಹೇವಾರಿ ಲುಕ್ ನಲ್ಲಿ ಮಿಂಚಿದ್ದಾರೆ.

ಪುತ್ರಿ ಆರಾಧನಾ ಜೊತೆ ಮಾಲಾಶ್ರೀ ಕೂಡ ಡಬೂ ರತ್ನಾನಿ ಅವರ ಕ್ಯಾಮೆರಾಗೆ ಮಸ್ತ್ ಆಗಿ ಪೋಸ್ ನೀಡಿದ್ದಾರೆ. ಅಮ್ಮ ಮತ್ತು ಮಗಳ ಸುಂದರ ಫೋಟೋಗಳನ್ನು ನೋಡಿ ಅಭಿಮಾನಿಗಳು ವಾವ್ ಎಂದಿದ್ದಾರೆ. ಮೊದಲ ಬಾರಿಗೆ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಅವರ ಕ್ಯಾಮೆರಾಗೆ ಪೋಸ್ ನೀಡಿರುವ ಆರಾಧನಾ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಇನ್ನೂ ಮಗಳ ಸುಂದರ ಪೋಸ್ ನೋಡಿ ಮಾಲಾಶ್ರೀ ಕೂಡ ಸಖತ್ ಕೂಡ ಖುಷಿಪಟ್ಟಿದ್ದಾರೆ.

‘ಕಾಟೇರ’ ಬಳಿಕ ಆರಾಧನಾ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಉತ್ತಮ ಸಿನಿಮಾಗಾಗಿ ಎದುರು ನೋಡುತ್ತಿರುವ ಆರಾಧನಾ ಅವರ ಎರಡನೇ ಸಿನಿಮಾ ಯಾವುದು ಎನ್ನುವ ಕುತೂಹಲ ಫ್ಯಾನ್ಸ್‌ಗೆ ಹೆಚ್ಚಾಗಿದೆ.

Share This Article