ಬ್ಯಾಕ್‌ಲೆಸ್ ಬ್ಲೌಸ್ ಜೊತೆ ಸೀರೆಯುಟ್ಟು ಮಿಂಚಿದ ‘ಉಪಾಧ್ಯಕ್ಷ’ ನಟಿ

Public TV
1 Min Read

ಟಿ ಮಲೈಕಾ ವಸುಪಾಲ್ (Malaika Vasupal)  ‘ಉಪಾಧ್ಯಕ್ಷ’ ಸಿನಿಮಾದ ಸಕ್ಸಸ್ ನಂತರ ಹೊಸ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಹೊಸದೊಂದು ಫೋಟೋಶೂಟ್ ಮಾಡಿಸಿದ್ದಾರೆ. ಬ್ಯಾಕ್‌ಲೆಸ್ ಬ್ಲೌಸ್ ಜೊತೆ ಸೀರೆಯುಟ್ಟು ಸಖತ್ ಗ್ಲ್ಯಾಮರಸ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಭಾವಿ ಪತ್ನಿ ಶೋಭಿತಾ ಜೊತೆ ಸಿನಿಮಾ ಮಾಡಲ್ಲ: ನಾಗಚೈತನ್ಯ

ಚೆಂದದ ಫೋಟೋಶೂಟ್ ಹಂಚಿಕೊಳ್ಳುವ ಮೂಲಕ ಪಡ್ಡೆಹುಡುಗರ ನಿದ್ದೆಕದ್ದಿದ್ದಾರೆ ಮಲೈಕಾ. ನಟಿ ಧರಿಸಿರುವ ಟ್ರೆಡಿಷನಲ್ ಸೀರೆಗೆ ವೆಸ್ಟರ್ನ್ ಲುಕ್ ಕೊಟ್ಟಿದ್ದಾರೆ. ವಿವಿಧ ಭಂಗಿಯಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ಕೆಂಪು ಮತ್ತು ಗೋಲ್ಡ್ ಮಿಶ್ರಿತ ಬಣ್ಣದ ಸೀರೆಯಲ್ಲಿ ನಟಿ ಕಂಗೊಳಿಸಿದ್ದಾರೆ.

ದಿಲೀಪ್ ರಾಜ್‌ಗೆ ಜೋಡಿಯಾಗಿ ಮಲೈಕಾ ಕಿರುತೆರೆಗೆ ಎಂಟ್ರಿ ಕೊಟ್ಟರು. ‘ಹಿಟ್ಲರ್ ಕಲ್ಯಾಣ’ (Hitler Kalyana) ಎಂಬ ಸೀರಿಯಲ್‌ನಲ್ಲಿ ಹೀರೋಯಿನ್ ಆಗಿ ನಟಿಸಿದರು.‌ ಇದನ್ನೂ ಓದಿ:ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್: ಅಭಿಮಾನಿಗಳಿಂದ ವಿಶೇಷ ಪೂಜೆ

ನಟಿಸಿದ ಮೊದಲ ಸೀರಿಯಲ್ ಸೂಪರ್ ಹಿಟ್ ಆಗಿತ್ತು. ಮಲೈಕಾ ಅವರು ಎಡವಟ್ಟು ಲೀಲಾ ಎಂದೇ ಫೇಮಸ್ ಆಗಿದ್ದರು. ಅಷ್ಟರ ಮಟ್ಟಿಗೆ ಎಜೆ ಪತ್ನಿ ಲೀಲಾ ಆಗಿ ನಟಿ ಎಲ್ಲರ ಗಮನ ಸೆಳೆದಿದ್ದರು. ಹಿಟ್ಲರ್‌ ಕಲ್ಯಾಣ ಮೊದಲ ಪ್ರಾಜೆಕ್ಟ್‌ ನಟಿಯ ವೃತ್ತಿ ಬದುಕಿಗೆ ಬ್ರೇಕ್‌ ನೀಡಿತ್ತು.

ಬಳಿಕ ಕಳೆದ ವರ್ಷ ಚಿಕ್ಕಣ್ಣ (Chikkanna) ನಟನೆಯ ‘ಉಪಾಧ್ಯಕ್ಷ’ ಸಿನಿಮಾದಲ್ಲಿ ನಾಯಕಿಯಾಗಿ ಮಲೈಕಾ ನಟಿಸಿದ್ದರು. ಈ ಸಿನಿಮಾಗೂ ಕೂಡ ಮೆಚ್ಚುಗೆ ಸಿಕ್ಕಿತ್ತು. ‘ಉಪಾಧ್ಯಕ್ಷ’ ಚಿತ್ರವನ್ನು ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದರು.

ಪ್ರಸ್ತುತ ಡಾಲಿ ಧನಂಜಯ (Daali Dhananjay) ನಿರ್ಮಾಣದ ‘ವಿದ್ಯಾಪತಿ’ ಸಿನಿಮಾದಲ್ಲಿ ನಾಗಭೂಷಣ್‌ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಮಲೈಕಾ ಪಾತ್ರಕ್ಕೆ ಸ್ಕೋಪ್ ಇದೆ. ವಿಭಿನ್ನವಾಗಿರುವ ಕಥೆಯನ್ನೇ ನಟಿ ಒಪ್ಪಿಕೊಂಡಿದ್ದಾರೆ. ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Share This Article