ತನ್ನ ದೇಹದ ಮೇಲಾದ ದೌರ್ಜನ್ಯವನ್ನು ಇಂಚಿಂಚು ಬರೆದಿಟ್ಟ ನಟಿ, ಬರಹಗಾರ್ತಿ ಕುಬ್ರಾ ಸೇಠ್

Public TV
2 Min Read

ಬಾಲಿವುಡ್ ನಟಿ, ಬರಹಗಾರ್ತಿ ಕುಬ್ರಾ ಸೇಠ್ ಬರೆದ ‘ಓಪನ್ ಬುಕ್’ ಪುಸ್ತಕ ಬಿಡುಗಡೆಯಾಗಿದೆ. ಈ ಪುಸ್ತಕದಲ್ಲಿ ಅವರು ತಮ್ಮ 17ನೇ ವಯಸ್ಸಿನಲ್ಲೇ ನಡೆದ ಲೈಂಗಿಕ ದೌರ್ಜನ್ಯವನ್ನು ದಾಖಲಿಸಿದ್ದಾರೆ. ಈ ದೌರ್ಜನ್ಯ ಬೆಂಗಳೂರಿನಲ್ಲಿ ನಡೆದದ್ದು ಎಂದು ಬರೆದು ಬೆಚ್ಚಿ ಬೀಳಿಸಿದ್ದಾರೆ. ಆ ವಯಸ್ಸಿನಲ್ಲಿ ತಾವು ಯಾವ ರೀತಿಯಲ್ಲಿ ನರಕಯಾತನೆ ಅನುಭವಿಸಿದೆ ಎನ್ನುವುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದನ್ನು ಓದಿ : ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಫಿಕ್ಸ್ : ಘೋಷಣೆಯೊಂದೇ ಬಾಕಿ

ನನಗಾಗ ಕೇವಲ 17 ವರ್ಷ. ನನಗೆ ಏನೂ ಅರಿಯದ ವಯಸ್ಸದು. ಆ ವಯಸ್ಸಿನಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯವಾಯಿತು. ಅವನು ಕಾರಿನಲ್ಲಿ ಹೋಗುವಾಗ ಬಟ್ಟೆಯನ್ನು ಸರಿಸಿ, ಅವನ ಕೈಗಳು ನನ್ನ ತೊಡೆ ಸ್ಪರ್ಶಿಸುತ್ತಿದ್ದವು. ನೇರವಾಗಿ ನಮ್ಮ ಮನೆಗೆ ಬಂದು ಅವನು ಕಿಸ್ ಮಾಡುತ್ತಿದ್ದ. ನೀನಂದರೆ ನನಗೆ ಇಷ್ಟ  ಎನ್ನುತ್ತಿದ್ದ. ಹೋಟೆಲ್‌ನಲ್ಲಿ ನಡೆದದ್ದು ಮತ್ತೊಂದು ಘೋರ ಘಟನೆ. ಇದೆಲ್ಲವೂ ನಡೆದಾಗಲೂ ನಾನು ಅಸಹಾಯಕಳು’ ಎಂದು ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ ಕುಬ್ರಾ ಸೇಠ್.

ಬಾಲ್ಯದಲ್ಲಿ ಇವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಇವರ ತಾಯಿ ಆರ್ಥಿಕವಾಗಿ ತುಂಬಾ ಸಮಸ್ಯೆಯನ್ನು ಎದುರಿಸುತ್ತಿದ್ದರಂತೆ. ಈ ವೇಳೆಯಲ್ಲಿ ಬೆಂಗಳೂರಿನಲ್ಲಿದ್ದ ರೆಸ್ಟೊರೆಂಟ್ ಮಾಲೀಕರೊಬ್ಬರು ಇವರ ಸಹಾಯಕ್ಕೆ ಬಂದರಂತೆ. ಸಹಾಯ ಮಾಡಿದ್ದಕ್ಕೆ ಇಡೀ ಕುಟುಂಬ ಅವರನ್ನು ದೇವರೆಂದು ನೋಡುತ್ತಿದ್ದರಂತೆ. ಆದರೆ ಆ ವ್ಯಕ್ತಿ ಮಾಡಿದ್ದೇ ಬೇರೆ. ಮನೆಗೆ ಬಂದು ಚುಂಬಿಸುತ್ತಿದ್ದರು. ಅಮ್ಮನ ಎದುರೇ ಇದೆಲ್ಲವೂ ನಡೆಯುತ್ತಿತ್ತು ಎಂದು ಕರಾಳ ಸತ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ. ಇನ್ನೂ ಓದಿ : ಪಠ್ಯ ಪುಸ್ತಕ ಪರಿಷ್ಕರಣೆ ಆಕ್ರೋಶ ಹೊರ ಹಾಕಿದ ನಟ ಚೇತನ್ : ಗಾಂಧಿ, ನೆಹರು ನಮ್ ವಿರೋಧಿಗಳು ಎಂದ ನಟ

ಮುಂದೊಂದು ದಿನ ನಾನು ಈ ವಿಷಯವನ್ನು ಬಾಯ್ಬಿಟ್ಟೇನೂ ಅನ್ನುವ ಕಾರಣಕ್ಕಾಗಿ ಅವನು ಕೊಲೆ  ಬೆದರಿಕೆ ಬೇರೆ ಹಾಕಿದ್ದ. ಹಾಗಾಗಿ ನಾನು ಯಾರ ಬಳಿಯೂ ಆಗ ಹೇಳಿಕೊಳ್ಳಲು ಆಗಲಿಲ್ಲ. ಅವನಿಗೆ ಬೇರೊಬ್ಬ ಹುಡುಗಿ ಜೊತೆ ಮದುವೆ ಆಯಿತು. ಮಕ್ಕಳೂ ಆದವು. ಅವನು ಸುಖವಾಗಿ ಜೀವನ ಸಾಗಿಸುತ್ತಿದ್ದಾನೆ. ನನಗೂ ಇವತ್ತಿಗೂ ಆ ನೋವು ಕಾಡುತ್ತಿದೆ ಎಂದು ತಮ್ಮ ಆತ್ಮಕಥೆಯಲ್ಲಿ ಕುಬ್ರಾ ಸೇಠ್ ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *