ರಶ್ಮಿಕಾ, ಶ್ರೀಲೀಲಾ ಅಬ್ಬರದ ನಡುವೆ ಕಾಣೆಯಾದ ಕೃತಿ ಶೆಟ್ಟಿ

By
1 Min Read

ಮಂಗಳೂರಿನ ಬೆಡಗಿ ಕೃತಿ ಶೆಟ್ಟಿಗೆ (Krithi Shetty) ಅದ್ಯಾಕೋ ಅದೃಷ್ಟ ಕೈ ಕೊಟ್ಟಂತಿದೆ. ‘ಉಪ್ಪೇನ’ ಸಿನಿಮಾ ರಿಲೀಸ್ ಬಳಿಕ ಡಿಮ್ಯಾಂಡ್‌ನಲ್ಲಿದ್ದ ನಟಿ ಈಗ ಸಕ್ಸಸ್ ರೇಸ್‌ನಲ್ಲಿ ಹಿಂದೆ ಬಿದ್ದಿದ್ದಾರೆ. ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾ ಹವಾ ನಡುವೆ ಕೃತಿ ಶೆಟ್ಟಿ ಮರೆಯಾಗ್ತಿದ್ದಾರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ.

ಕೃತಿ ಶೆಟ್ಟಿ ಈಗ ಆಗೊಂದು ಈಗೊಂದು ಸಿನಿಮಾ ಮಾಡ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಮನಮೇಯ್’ ಎಂಬ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ತೆಲುಗಿನಲ್ಲಿ ಕೃತಿಗೆ ಆಫರ್ಸ್‌ ಕಮ್ಮಿಯಾಗ್ತಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಇದನ್ನೂ ಓದಿ:ಧನುಷ್ ನಟನೆಯ ‘ರಾಯನ್’ ರಿಲೀಸ್‌ಗೆ ಮುಹೂರ್ತ ಫಿಕ್ಸ್

‘ಉಪ್ಪೇನ’ ಸಿನಿಮಾ ಸಕ್ಸಸ್ ನಂತರ ಎಲ್ಲಾ ಸಿನಿಮಾಗಳನ್ನು ಒಪ್ಪಿಕೊಂಡರು. ಕಥೆಗೆ ಮಹತ್ವ ಕೊಡೋದ್ರಲ್ಲಿ ನಟಿ ಎಡವಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ. ಸದ್ಯ ಅವರ ಕೈಯಲ್ಲಿ ಯಾವುದೇ ತೆಲುಗಿನ ಸಿನಿಮಾಗಳು ಇಲ್ಲ ಎನ್ನಲಾಗಿದೆ. ಮಲಯಾಳಂ ಚಿತ್ರ ಬಿಟ್ಟರೇ ಬೇರೆ ಚಿತ್ರಗಳಿಲ್ಲ.

ಇನ್ನೂ ರಶ್ಮಿಕಾ ಮಂದಣ್ಣ 6ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರವಿತೇಜ ಜೊತೆಗಿನ ಸಿನಿಮಾ, ಸೈಫ್ ಅಲಿ ಖಾನ್ ಪುತ್ರನ ಜೊತೆಗಿನ ಚಿತ್ರ ಸೇರಿದಂತೆ ಕೆಲವು ಪ್ರಾಜೆಕ್ಟ್‌ಗಳಿವೆ. ಹೀಗಿರುವಾಗ ರಶ್ಮಿಕಾ, ಶ್ರೀಲೀಲಾ (Sreeleela) ಅಬ್ಬರದ ನಡುವೆ ಕೃತಿ ಶೆಟ್ಟಿಗೆ ಬೇಡಿಕೆ ಕಮ್ಮಿಯಾಗಿದೆ. ಮತ್ತೆ ಹಳೆಯ ಚಾರ್ಮ್‌ಗೆ ನಟಿ ಬರುತ್ತಾರಾ? ಇತರೆ ನಟಿಯರಿಗೆ ಕೃತಿ ಪೈಪೋಟಿ ಕೊಡ್ತಾರಾ ಕಾದುನೋಡಬೇಕಿದೆ.

Share This Article