‘ಶೇರ್ಷಾ’ ಬಳಿಕ ಮತ್ತೊಂದು ಲವ್ ಸ್ಟೋರಿ ಸಿನಿಮಾದಲ್ಲಿ ಸಿದ್ಧಾರ್ಥ್, ಕಿಯಾರಾ?

Public TV
1 Min Read

ಟ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಮತ್ತು ಕಿಯಾರಾ (Kiara Advani) ಮತ್ತೊಮ್ಮೆ ತೆರೆಯ ಮೇಲೆ ಜೋಡಿಯಾಗಿ ನಟಿಸಲು ಸಜ್ಜಾಗಿದ್ದಾರೆ. ಲವ್ ಸ್ಟೋರಿ ಒಳಗೊಂಡ ಚಿತ್ರವನ್ನು ಒಪ್ಪಿದ್ದಾರೆ ಎನ್ನಲಾದ ಸುದ್ದಿಯೊಂದು ಬಿಟೌನ್‌ನಲ್ಲಿ ಹರಿದಾಡುತ್ತಿದ್ದಾರೆ. ಇದನ್ನೂ ಓದಿ:ಸೂಚನ್‌ ಶೆಟ್ಟಿ ನಟನೆಯ ‘ಒಂದು ತಾತ್ಕಾಲಿಕ ಪಯಣ’ ಚಿತ್ರದ ಟ್ರೈಲರ್‌ ಔಟ್

ಸೂಪರ್ ಹಿಟ್ ‘ಶೇರ್ಷಾ’ (Shershaah) ಸಿನಿಮಾದಿಂದಲೇ ರಿಯಲ್ ಲೈಫ್‌ನಲ್ಲೂ ಸಿದ್ಧಾರ್ಥ್ ಮತ್ತು ಕಿಯಾರಾ ಪ್ರೀತಿಸಿ ಮದುವೆಯಾದರು. ಈ ಸಿನಿಮಾ ಬಳಿಕ ಮತ್ತೆ ಯಾವಾಗ ಜೊತೆಯಾಗಿ ನಟಿಸುತ್ತಾರೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮ್ಯಾಡಾಕ್ ಫಿಲ್ಮ್ ಇದೀಗ ಸಿದ್ಧಾರ್ಥ್ ಮತ್ತು ಕಿಯಾರಾ ಜೊತೆ ಹೊಸ ಸಿನಿಮಾ ಮಾಡಲು ಚರ್ಚಿಸಿದ್ದಾರೆ ಎನ್ನಲಾಗಿದೆ. ಲವ್ ಸ್ಟೋರಿ ಸಿನಿಮಾ ಆಗಿದ್ರೂ ಸಾಕಷ್ಟು ಟ್ವಿಸ್ಟ್‌ಗಳಿರುವಂತಹ ವಿಭಿನ್ನ ಕಥೆಗೆ ಈ ಜೋಡಿಯೇ ಸರಿ ಎಂದು ನಿರ್ಮಾಣ ಸಂಸ್ಥೆ ಸಿದ್ಧಾರ್ಥ್ ದಂಪತಿಯನ್ನು ಅಪ್ರೋಚ್ ಮಾಡಿದೆ ಎನ್ನಲಾಗಿದೆ. ಹಾಗಾದ್ರೆ ಸದ್ಯ ಹರಿದಾಡುತ್ತಿರುವ ಈ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ? ಕಾದುನೋಡಬೇಕಿದೆ.

ಅಂದಹಾಗೆ, 2021ರಲ್ಲಿ ತೆರೆಕಂಡ ‘ಶೇರ್ಷಾ’ ಸಿನಿಮಾದಲ್ಲಿ ಸಿದ್ಧಾರ್ಥ್ ಮತ್ತು ಕಿಯಾರಾ ಮೊದಲ ಬಾರಿಗೆ ಜೋಡಿಯಾಗಿ ನಟಿಸಿದರು. ಈ ಚಿತ್ರಕ್ಕೆ ವಿಷ್ಣುವರ್ಧನ್ ಆ್ಯಕ್ಷನ್ ಕಟ್ ಹೇಳಿದ್ದರು.

Share This Article