ಬೇಬಿ ಬಂಪ್‌ನೊಂದಿಗೆ ‘ಮೆಟ್ ಗಾಲಾ’ದಲ್ಲಿ ಹೆಜ್ಜೆ ಹಾಕಿದ ಕಿಯಾರಾ ಅಡ್ವಾಣಿ

Public TV
1 Min Read

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ (Kiara Advani) ಅಮ್ಮನಾಗ್ತಿರೋ ಸಂತಸದಲ್ಲಿದ್ದಾರೆ. ಇದೇ ಖುಷಿಯಲ್ಲಿ ಅವರು ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ನಡೆದ ಮೆಟ್ ಗಾಲಾ ಫ್ಯಾಷನ್ ಹಬ್ಬದಲ್ಲಿ ಭಾಗಿಯಾಗಿದ್ದಾರೆ.‌ ಇದನ್ನೂ ಓದಿ:ಅಯ್ಯೋ ನನಗೆ ಹೊಟ್ಟೆ ಬಂದಿದೆ ಎಂದಿದ್ದ ನಟಿ ರಿತಿಕಾ ಸಿಂಗ್ ಸೊಂಟ ಬಳ್ಳಿಯಂತಾಗಿದ್ದು ಹೇಗೆ ಗೊತ್ತಾ?

ಪ್ರತಿ ವರ್ಷದಂತೆ ಈ ವರ್ಷವು ಕೂಡ ‘ಮೆಟ್ ಗಾಲಾ 2025’ (Met Gala 2025) ಫ್ಯಾಷನ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ದೇಶ- ವಿದೇಶಗಳಿಂದ ಸೆಲೆಬ್ರಿಟಿಗಳು ಆಗಮಿಸುತ್ತಿದ್ದಾರೆ. ಈ ಸಾಲಿನಲ್ಲಿ ಪ್ರೆಗ್ನೆಂಟ್ ಕಿಯಾರಾ ಅಡ್ವಾಣಿ ಕೂಡ ಭಾಗಿಯಾಗಿದ್ದಾರೆ.

ನ್ಯೂಯಾರ್ಕ್‌ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ‘ಮೆಟ್ ಗಾಲಾ’ ಫ್ಯಾಷನ್ ಹಬ್ಬ ನಡೆಯುತ್ತಿದೆ. ಇಲ್ಲಿನ ರೆಡ್ ಕಾರ್ಪೆಟ್‌ನಲ್ಲಿ ಕಿಯಾರಾ ಮಸ್ತ್ ಆಗಿ ಬೇಬಿ ಬಂಪ್‌ನೊಂದಿಗೆ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ:ಅವಮಾನ ಸಹಿಸುವಷ್ಟು ಚಿಕ್ಕವನಲ್ಲ – ಸ್ಯಾಂಡಲ್‌ವುಡ್‌ನಿಂದ ಅಸಹಕಾರದ ಬೆನ್ನಲ್ಲೇ ಸೋನು ನಿಗಮ್ ರಿಯಾಕ್ಷನ್

ಕಪ್ಪು ಬಣ್ಣದ ಗೌನ್‌ಗೆ ಗೋಲ್ಡನ್ ಕಲರ್ ವಿನ್ಯಾಸವಿರುವ ಧಿರಿಸಿನಲ್ಲಿ ಕಿಯಾರಾ ಮಿಂಚಿದ್ದಾರೆ. ಈ ವೇಳೆ, ಅವರಲ್ಲಿ ಪ್ರೆಗ್ನೆನ್ಸಿ ಗ್ಲೋ ಎದ್ದು ಕಾಣುತ್ತಿದೆ. ಗೌನ್‌ನ ಹೊಟ್ಟೆಯ ಭಾಗದಲ್ಲಿ ಹೃದಯಾಕಾರದ ಚಿತ್ತಾರವಿದೆ. ಈ ಲುಕ್‌ನಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ರೆಡ್ ಕಾರ್ಪೆಟ್‌ನಲ್ಲಿ ಸ್ಟೈಲಿಶ್ ಆಗಿ ಹೆಜ್ಜೆ ಹಾಕಿದ್ದಾರೆ.

ಅಂದಹಾಗೆ, ಪತ್ನಿಯನ್ನು ನೋಡಿಕೊಳ್ಳಲು ಸಿದ್ಧಾರ್ಥ್ ಮಲ್ಹೋತ್ರಾ ಕೂಡ ಭಾಗಿಯಾಗಿದ್ದರು. ಕಿಯಾರಾ ಅವರನ್ನು ನಟ ಆರೈಕೆ ಮಾಡುತ್ತಿರುವ ರೀತಿ ಕಂಡು ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

ಅಂದಹಾಗೆ, ಕಿಯಾರಾ ಅವರ ಲುಕ್ ಅನ್ನು ಐಶ್ವರ್ಯಾ ರೈ ಹೊಲಿಸಿದ್ದಾರೆ. ಕಳೆದ ಬಾರಿ `ಮೆಟ್ ಗಾಲಾ’ ಕಾರ್ಯಕ್ರಮದಲ್ಲಿ ಇದೇ ಕಪ್ಪು ಬಣ್ಣದ ಗೌನ್‌ನಲ್ಲಿ ಅವರು ಮಿಂಚಿದ್ದರು.

2023ರಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಕಿಯಾರಾ ಮದುವೆಯಾದರು. ಹಲವು ವರ್ಷಗಳ ಡೇಟಿಂಗ್ ಬಳಿಕ ಗುರುಹಿರಿಯರ ಸಮ್ಮತಿ ಪಡೆದು ಮದುವೆಯಾದರು. ಈಗ ಪೋಷಕರಾಗುತ್ತಿರುವ ಸಂತಸದಲ್ಲಿದ್ದಾರೆ.

Share This Article