ಉದ್ಯಮಿ ಜೊತೆ ಮದ್ವೆ – ಸ್ಪಷ್ಟನೆ ಕೊಟ್ಟ ಕೀರ್ತಿ ಸುರೇಶ್

Public TV
1 Min Read

ಹೈದರಾಬಾದ್: ತೆಲುಗು, ತಮಿಳು ಚಿತ್ರರಂಗದ ಖ್ಯಾತ ನಟಿ ಕೀರ್ತಿ ಸುರೇಶ್ ಸದ್ಯದಲ್ಲೇ ಖ್ಯಾತ ಉದ್ಯಮಿಯೊಬ್ಬರನ್ನು ವರಿಸಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಇದೀಗ ತಮ್ಮ ಮದುವೆ ಸುದ್ದಿಯ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ನಟಿ ಕೀರ್ತಿ ಸುರೇಶ್ ಅವರು ತಮ್ಮ ಮದುವೆ ವದಂತಿಯ ಬಗ್ಗೆ ತಿಳಿದು ಗರಂ ಆಗಿದ್ದು, ಸಂದರ್ಶನವೊಂದರಲ್ಲಿ ತಮ್ಮ ಮದುವೆ ಬಗ್ಗೆ ಹರಿದಾಡುತ್ತಿರುವ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. “ನನ್ನ ಮದುವೆ ಸುದ್ದಿ ಕೇಳಿ ನನಗೆ ಅಚ್ಚರಿಯಾಗಿದೆ. ಸದ್ಯಕ್ಕೆ ನನಗೆ ವಿವಾಹವಾಗುವ ಯೋಚನೆಯೇ ಇಲ್ಲ. ಅಲ್ಲದೇ ಶೀಫ್ರದಲ್ಲಿ ನಾನು ಮದುವೆಯಾಗುವುದಿಲ್ಲ. ಆದರೂ ಮದುವೆ ಸುದ್ದಿ ಹರಿದಾಡಲು ಹೇಗೆ ಪ್ರಾರಂಭವಾಯಿತು ಎಂಬುದು ನನಗೆ ಗೊತ್ತಿಲ್ಲ” ಎಂದು ಹೇಳಿದ್ದಾರೆ.

“ದೇಶದಲ್ಲಿ ಚರ್ಚಿಸಲು ಅನೇಕ ವಿಚಾರಗಳಿವೆ. ಸುಮ್ಮನೆ ಇಂತಹ ಆಧಾರ ರಹಿತ ವದಂತಿಗಳನ್ನು ಹರಡುವುದಕ್ಕಿಂತ ದೇಶದಲ್ಲಿ ಹರಡುತ್ತಿರುವ ಕೊರೊನಾ ರೋಗದ ಬಗ್ಗೆ ಹೋರಾಡಿ” ಎಂದು ಗರಂ ಆಗಿ ಉತ್ತರಿಸಿದ್ದಾರೆ.

ಕೀರ್ತಿ ಅವರು ಅರೆಂಜ್ ಮ್ಯಾರೇಜ್ ಆಗಲು ನಿರ್ಧರಿಸಿದ್ದಾರೆ. ಅಲ್ಲದೇ ತಮ್ಮ ಪೋಷಕರು ಹುಡುಕುವ ಹುಡುಗನನ್ನೇ ಮದುವೆ ಆಗಲು ಕೀರ್ತಿ ಒಪ್ಪಿದ್ದರು. ಹೀಗಾಗಿ ಅವರ ತಂದೆ ಸುರೇಶ್ ಕುಮಾರ್ ಮಗಳಿಗೆ ಹುಡುಗನನ್ನು ಹುಡುಕಿದ್ದಾರೆ ಎನ್ನಲಾಗಿತ್ತು. ಸುರೇಶ್ ಕುಮಾರ್ ಅವರು ರಾಜಕೀಯ ವ್ಯಕ್ತಿಗಳ ಜೊತೆ ಉತ್ತಮ ಭಾಂದವ್ಯ ಹೊಂದಿದ್ದಾರೆ. ಆದ್ದರಿಂದ ರಾಜಕೀಯ ಹಿನ್ನೆಲೆ ಇರುವ ಪ್ರಭಾವಿ ಉದ್ಯಮಿಯ ಜೊತೆ ಮಗಳ ಮದುವೆ ಮಾಡಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.

ತೆಲುಗು, ತಮಿಳು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಕೀರ್ತಿ ಸುರೇಶ್ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರ ‘ಮಹಾನಟಿ’ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದೆ. ಈ ಚಿತ್ರದಲ್ಲಿ ಖ್ಯಾತ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಕೀರ್ತಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಅನ್ನಾತೆ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *