`ಗೃಹಸಚಿವರ ಮಾತಿಗೆ ನಾಚಿಕೆಯಾಗ್ಬೇಕು’ ಎಂದ ನಟಿ ಕಾವ್ಯ ಶಾಸ್ತ್ರಿ

Public TV
1 Min Read

ಮಂಡ್ಯ (Mandya) ಜಿಲ್ಲೆಯ ಮದ್ದೂರು (Maddur) ತಾಲೂಕಿನಲ್ಲಿ ಗಣಪತಿ ವಿಸರ್ಜನೆ ವೇಳೆ ದಾಂಧಲೆ ನಡೆದಿದೆ. ಕೋಮ ಗಲಭೆಗೆ ಕಾರಣವಾಗಿದೆ. ಹಿಂದೂ ಸಂಘಟನೆಗಳಿಂದ ಸೋಮವಾರ ಪ್ರತಿಭಟನೆ ನಡೆದಿದೆ. ಉದ್ರಿಕ್ತ ಪ್ರತಿಭಟನಾಕಾರರ ಮೇಲೆ ಲಾಠಿ ಪೊಲೀಸರಿಂದ ಲಾಠಿ ಪ್ರಹಾರವೂ ನಡೆದಿದೆ. ರಾಜ್ಯವ್ಯಾಪಿ ಚರ್ಚೆಯಾಗುತ್ತಿರುವ ಈ ಘಟನೆ ಕುರಿತು ಇದೀಗ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್/ ನಟಿ, ನಿರೂಪಕಿ ಕಾವ್ಯ ಶಾಸ್ತ್ರಿ ಧ್ವನಿ ಎತ್ತಿದ್ದಾರೆ. ಗೃಹಮಂತ್ರಿಗಳ ಮಾತನ್ನ ತೀವ್ರವಾಗಿ ವಿರೋಧಿಸಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ ಕಾವ್ಯ ಶಾಸ್ತ್ರಿ.

ಘಟನೆ ಸಂಬಂಧ ಗೃಹಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದರು. ಇದೀಗ ಸಚಿವರ ಮಾತನ್ನ ವಿರೋಧಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಕಾವ್ಯ “ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ದಾಂಧಲೆಗೆ ಹಿಂದೂ ಸಂಘಟನೆಗಳು ಕಾರಣ ಎನ್ನುವ ಶಂಕೆ ಅಂದಿರೋ ಗೃಹಮಂತ್ರಿಗಳು. ನಾಚಿಕೆಯಾಗಬೇಕು ಸ್ವಾಮಿ, ಆ ಸ್ಥಾನದಲ್ಲಿದ್ದು ಇಂತಹ ಮಾತುಗಳನ್ನಾಡೋದಕ್ಕೆ” ಎಂದಿದ್ದಾರೆ ಕಾವ್ಯ.

ಹೀಗೆ ಬರೆದಿರುವ ಕಾವ್ಯ ಶಾಸ್ತ್ರಿಯವರ ಪೋಸ್ಟ್‌ಗೆ ಪರ ವಿರೋಧ ಕಾಮೆಂಟ್ಸ್ ಬರುತ್ತಿದೆ. ಹೀಗೆ ಹೇಳುವ ಮೂಲಕ ಗೃಹಮಂತ್ರಿಗಳ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ನಟಿ.

Share This Article