ಭಾವಿ ಪತಿಯ ತಂದೆ ನಿಧನ: ನಟಿ ಕಾವ್ಯ ಶಾ ಮದುವೆ ಮುಂದೂಡಿಕೆ

By
1 Min Read

ಅಂದುಕೊಂಡಂತೆ ಆಗಿದ್ದರೆ ಇಂದು (ಏ.18) ನಟಿ ಕಾವ್ಯ ಶಾ ಮತ್ತು ಬಹುಕಾಲದ ಸ್ನೇಹಿತ ವರುಣ್ ವಿವಾಹ ಮಹೋತ್ಸವ ಇಂದು ನಡೆಯಬೇಕಿತ್ತು. ಅದಕ್ಕಾಗಿ ಬೆಂಗಳೂರಿನ ನಂದಿ ಗ್ರೌಂಡ್ಸ್ ಸಿದ್ಧಗೊಂಡಿತ್ತು. ಆದರೆ, ರವಿವಾರ ರಾತ್ರಿ ಭಾವಿ ಮಾವ ಅಕಾಲಿಕ ಮರಣ ಹೊಂದಿದ್ದಾರೆ. ಹಾಗಾಗಿ ಕಾವ್ಯ ಶಾ ಅವರ ಮದುವೆಯನ್ನು ಮುಂದೂಡಲಾಗಿದೆ. ಇದನ್ನೂ ಓದಿ : ನಾನೇಕೆ ಡ್ರಗ್ಸ್ ತಗೆದುಕೊಳ್ಳುತ್ತಿದ್ದೆ? ಅಸಲಿ ಕಾರಣ ಬಿಚ್ಚಿಟ್ಟ ಸಂಜಯ್ ದತ್

ವರುಣ್ ಮತ್ತು ಕಾವ್ಯ ಶಾ ಈ ಹಿಂದೆಯೇ ಹಸೆಮಣೆ ಏರಬೇಕಿತ್ತು. ಆರು ತಿಂಗಳ ಹಿಂದೆಯೇ ಮನೆಯಲ್ಲಿ ಮದುವೆ ನಿಶ್ಚಿಯವಾಗಿತ್ತು. ಆ ವೇಳೆಯಲ್ಲಿ ಪುನೀತ್ ರಾಜ್ ಕುಮಾರ್ ನಿಧನರಾದರು. ಪುನೀತ್ ಅವರಿಗೆ ಆಪ್ತರಾಗಿದ್ದ ವರುಣ್, ಆ ನೋವಿನಲ್ಲಿ ಮದುವೆ ಮಾಡಿಕೊಳ್ಳಲು ಒಪ್ಪಿಕೊಳ್ಳಲಿಲ್ಲ. ಹಾಗಾಗಿ ಅಂದು ಕೂಡ ಈ ಜೋಡಿಯ ಮದುವೆ ಮುಂದೂಡಲಾಗಿತ್ತು. ಇದನ್ನೂ ಓದಿ : ‘ದಿ ಡೆಲ್ಲಿ ಫೈಲ್ಸ್’ : 1984ರ ಗಲಭೆಯೇ ಕಥಾವಸ್ತು ಎಂದ ವಿವೇಕ್ ಅಗ್ನಿಹೋತ್ರಿ

ವರುಣ್ ಮತ್ತು ಮತ್ತು ಕಾವ್ಯ ಶಾ ಆತ್ಮಿಯ ಸ್ನೇಹಿತರು. ಸ್ನೇಹವೇ ಪ್ರೀತಿಗೆ ತಿರುಗಿತ್ತು. ಹಲವು ವರ್ಷಗಳ ಕಾಲ ಪ್ರೇಮಿಗಳಾಗಿದ್ದವರು ಇದೀಗ ಸಪ್ತಪದಿ ತುಳಿಯಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ವಿಧಿಯಾಟ ಬೇರೆಯೇ ಆಟವಾಡಿದೆ. ಸಂಭ್ರಮ ತುಂಬಿದ್ದ ಮನೆಗಳಲ್ಲಿ ಶೋಕ ಆವರಿಸಿಕೊಂಡಿದೆ. ಇದನ್ನೂ ಓದಿ : ಅಜ್ಞಾತವಾಸಿಯಾದ ರಂಗಾಯಣ ರಘು ಮತ್ತು ಪಾವನಾ

ಇಂದು ವರುಣ್ ಅವರ ತಂದೆಯ ಅಂತ್ಯಕ್ರಿಯೆ ನಡೆಯಲಿದ್ದು, ನಂತರದ ದಿನಗಳಲ್ಲಿ ಮದುವೆ ದಿನಾಂಕವನ್ನು ತಿಳಿಸುವುದಾಗಿ ಕಾವ್ಯ ಶಾ ಮತ್ತು ವರುಣ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಕೋರಲು ಅವರು ಮನವಿ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *