ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಂಗನಾ ರಣಾವತ್ ಭೇಟಿ

Public TV
1 Min Read

ಬಾಲಿವುಡ್ ಬೆಡಗಿ, ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ (Kateel Durgaparameshwari Temple) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಿ ದರ್ಶನದ ಬಳಿಕ ತಾಯಿ ತನ್ನ ಆಶೀರ್ವಾದ ನೀಡಲು ಕರೆಸಿಕೊಂಡಿದ್ದಾಳೆ ಎಂದು ಖುಷಿಯಿಂದ ಮಾಧ್ಯಮಕ್ಕೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ IPS ಅಧಿಕಾರಿ ಪುತ್ರಿ, ನಟಿ ರನ್ಯಾ ಬಂಧನ

ಇಂದು (ಮಾ.4) ಮಧ್ಯಾಹ್ನದ ಮಹಾಪೂಜೆಯಲ್ಲಿ ಕಂಗನಾ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನದಲ್ಲೇ ಅನ್ನ ಪ್ರಸಾದ ಸ್ವೀಕರಿಸಿದ್ದಾರೆ. ನಟಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಸಾಥ್ ನೀಡಿದ್ದಾರೆ. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ನಟಿ, ದೇವಿಯ ದರ್ಶನಕ್ಕೆ ಬಂದಿದ್ದೇನೆ. ನಿನ್ನೆ ಕಾಪು ಮಾರಿಗುಡಿ, ಇಂದು ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದಿದ್ದೇನೆ. ಬಹಳ ವರ್ಷಗಳಿಂದ ಈ ಭಾಗಕ್ಕೆ ಬರಬೇಕೆಂಬ ಅಭಿಲಾಷೆ ಇತ್ತು. ಈಗ ತಾಯಿ ತನ್ನ ಆಶೀರ್ವಾದ ನೀಡಲು ನನ್ನನ್ನು ಕರೆಸಿಕೊಂಡಿದ್ದಾಳೆ ಎಂದಿದ್ದಾರೆ.

 

View this post on Instagram

 

A post shared by Kangana Ranaut (@kanganaranaut)


ನಮ್ಮ ಸನಾತನ ಧರ್ಮದ ಬಗ್ಗೆ ಜನರು ಜಾಗೃತರಾಗಿದ್ದಾರೆ. ನಮ್ಮ ದೇಶ ಉನ್ನತ ಪ್ರಗತಿಯತ್ತ ಸಾಗುತ್ತಿದೆ. ನಮ್ಮ ದೇವಾಲಯಗಳು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ. ದೇವಾಲಯಗಳು ನಮ್ಮ ಸಾಂಸ್ಕೃತಿಕ ಪ್ರತಿಬಿಂಬವಾಗಿದೆ. ಈ ವೇಳೆ, ಕುಂಭಮೇಳ, ಸನಾತನ ಧರ್ಮದ ಬಗ್ಗೆ ಅವಹೇಳನ ಟೀಕೆಗಳು ಮುಂದುವರೆದಿರುವ ಬಗ್ಗೆ ಪ್ರತಿಕ್ರಿಯಿಸಿ, ದೇವರ ಆರತಿ ಬೆಳಗುವಾಗ ದುಷ್ಟ ಶಕ್ತಿಗಳು ಉರಿದು ಹೋಗುತ್ತವೆ. ದೇವಿಯ ಅವತಾರಗಳು ದುಷ್ಟ ಶಕ್ತಿಗಳ ಸಂಹಾರಕ್ಕೆ ಆಗಿವೆ. ಎಲ್ಲರ ಮೇಲೂ ದೇವಿಯ ಆಶೀರ್ವಾದವಿರಲಿ. ಟೀಕಿಸುವವರಿಗೆ ಅವಹೇಳನ ಮಾಡಿದವರಿಗೆ ದೇವರು ಬುದ್ಧಿ ಕೊಡಲಿ ಎಂದಿದ್ದಾರೆ ಕಂಗನಾ.

Share This Article