ಅಭಿಮಾನಿಯ ಅಸಭ್ಯ ವರ್ತನೆಗೆ ‘ಮಗಧೀರ’ ನಟಿ ಶಾಕ್

Public TV
1 Min Read

ತೆಲುಗಿನ ‘ಮಗಧೀರ’ (Magadheera) ಬ್ಯೂಟಿ ಕಾಜಲ್ ಅಗರ್‌ವಾಲ್ (Kajal Aggarwal) ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಮಲ್ ಹಾಸನ್ (Kamal Haasan) ನಟನೆಯ ‘ಇಂಡಿಯನ್ 2’, ‘ಸತ್ಯಭಾಮ’ ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಿನಿಮಾ ಬಿಟ್ಟು ಹೊಸ ವಿಚಾರಕ್ಕೆ ನಟಿ ಸುದ್ದಿಯಾಗಿದ್ದಾರೆ. ಕಾರ್ಯವೊಂದರಲ್ಲಿ ಅಭಿಮಾನಿಯೊಬ್ಬ ಅಸಭ್ಯ ವರ್ತನೆಗೆ ಕಾಜಲ್ ಶಾಕ್ ಆಗಿದ್ದಾರೆ.

ಶೂಟಿಂಗ್‌ಗೆ ಬ್ರೇಕ್ ಹಾಕಿ ಕಾರ್ಯಕ್ರಮವೊಂದಕ್ಕೆ ನಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಪಿಂಗ್ ಮಾಲ್ ಚಾಲನೆ ನೀಡಲು ನಟಿ ಆಗಮಿಸಿದ್ದರು. ಈ ವೇಳೆ, ಒಳಗೆ ಎಲ್ಲಾ ಕೌಂಟರ್‌ಗಳಲ್ಲಿ ಜನ ತುಂಬಿದ್ದರು. ಕಾಜಲ್ ತಮ್ಮ ಅಭಿಮಾನಿಗಳಿಗೆ ಆಟೋಗ್ರಾಫ್ ಕೊಟ್ಟು, ಕೆಲ ಅಭಿಮಾನಿಗಳು ಸೆಲ್ಫಿ ಕೇಳಿದರೆ ಅವರ ಜೊತೆ ಫೋಟೋ ತೆಗೆಸಿಕೊಂಡು ಖುಷಿಪಡಿಸಿದ್ದರು.

ಈ ವೇಳೆ ಅಭಿಮಾನಿಯೊಬ್ಬ ಅತಿರೇಕ ವರ್ತನೆ ತೋರಿದ್ದಾರೆ. ಸೆಲ್ಫಿ ಕೇಳಲು ಬಂದಾಗ ಕಾಜಲ್ ಸೊಂಟಕ್ಕೆ ಕೈ ಹಾಕಿ ಪೋಸ್ ನೀಡಲು ಹೋಗಿದ್ದಾನೆ. ಈ ವೇಳೆ, ಏನಿದು ಎಂದು ಕಾಜಲ್ ಶಾಕ್ ಆಗಿದ್ದಾರೆ. ಕೂಡಲೇ ಬೌನ್ಸರ್ಸ್ ಆತನನ್ನು ದೂರ ಸರಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ:‘ನನ್ನಮ್ಮ ಸೂಪರ್ ಸ್ಟಾರ್-3’ನಲ್ಲಿ ತನಿಷಾ ಕುಪ್ಪಂಡ

ಕಾಜಲ್ ಜೊತೆ ಅಸಭ್ಯವಾಗಿ ವರ್ತಿಸಿದ ಆತನ ನಡೆಗೆ ನೆಟ್ಟಿಗೆರು ಬೇಸರ ವಕ್ತಪಡಿಸುತ್ತಿದ್ದಾರೆ. ಅತಿಯಾಗಿ ವರ್ತಿಸಿದ ಅಭಿಮಾನಿಗೆ ನೆಟ್ಟಿಗರು ಹಿಡಿ ಶಾಪ ಹಾಕಿದ್ದಾರೆ.

Share This Article