ಅಶ್ಲೀಲ ವಿಡಿಯೋ ಲೀಕ್ ಆದ ಬೆನ್ನಲ್ಲೇ ಜ್ಯೋತಿ ರೈ ಟೆಂಪಲ್ ರನ್

Public TV
1 Min Read

ಶ್ಲೀಲ ವಿಡಿಯೋ ಪ್ರಕರಣದ ಬೆನ್ನಲ್ಲೇ ಕಿರುತೆರೆ ನಟಿ ಜ್ಯೋತಿ ರೈ (Jyothi Rai) ತಿರುಪತಿ ದೇವಾಲಯಕ್ಕೆ (Tirupathi Temple) ಭೇಟಿ ನೀಡಿದ್ದಾರೆ. ತಿಮ್ಮಪ್ಪನಿಗೆ ನಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

ತಮ್ಮ ಪತಿ ಪೂರ್ವಜ್ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಕೆಲ ಕಾಲ ದೇವಸ್ಥಾನದಲ್ಲಿ ನಟಿ ಸಮಯ ಕಳೆದಿದ್ದಾರೆ. ಈ ವೇಳೆ, ಅಭಿಮಾನಿಗಳು ಜ್ಯೋತಿ ರೈ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ.

ಅಂದಹಾಗೆ, ಅಶ್ಲೀಲ ವಿಡಿಯೋ ಪ್ರಕರಣ ವಿಚಾರವಾಗಿ ನಟಿ ನೊಂದಿದ್ದಾರೆ. ಈ ಕುರಿತು ಸೈಬರ್ ಕ್ರೈಂಗೆ ನಟಿ ದೂರು ನೀಡಿದ್ದಾರೆ. ಮಾರ್ಫಿಂಗ್ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ನಟಿ ಜ್ಯೋತಿ ರೈ ಮನವಿ ಮಾಡಿದ್ದು, ನನ್ನ ಮಾನ ಹಾಗೂ ಕುಟುಂಬದ ಗೌರವ ಅಪಾಯದಲ್ಲಿದೆ. ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ ನನ್ನ ಜೀವನದಲ್ಲಿ ಸರಿಪಡಿಸಲಾಗದ ಹಾನಿ ಉಂಟಾಗುತ್ತದೆ ಎಂದು ದೂರಿನಲ್ಲಿ ನಟಿ ಕಳವಳ ವ್ಯಕ್ತಪಡಿಸಿದ್ದರು. ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಬಳಿಕ ‘ಸಿಖಂದರ್’ ಚಿತ್ರತಂಡ ಸೇರಿಕೊಂಡ ತ್ರಿಷಾ

ಕನ್ನಡದ ಅನುರಾಗ ಸಂಗಮ, ಜೋಗುಳ, ಗೆಜ್ಜೆಪೂಜೆ, ಲವಲವಿಕೆ, ಕನ್ಯಾದಾನ, ಪ್ರೇರಣಾ, ಕಿನ್ನರಿ, ಕಸ್ತೂರಿ ನಿವಾಸ ಸೇರಿದಂತೆ ಅನೇಕ ಸೀರಿಯಲ್‌ಗಳಲ್ಲಿ ಜ್ಯೋತಿ ನಟಿಸಿದ್ದಾರೆ. ತಮಿಳು ಮತ್ತು ತೆಲುಗಿನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.

Share This Article