ದುಬಾರಿ ನಟಿಯಾದ ಜಾನ್ವಿ ಕಪೂರ್

Public TV
1 Min Read

ಹಿರಿಯ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್‌ಗೆ (Janhvi Kapoor) ಬಾಲಿವುಡ್‌ನಲ್ಲಿ ಹೇಳಿಕೊಳ್ಳುವಂತಹ ಬ್ರೇಕ್ ಸಿಗಲಿಲ್ಲ. ಹಾಗಂತ ಅವರಿಗೆ ಅವಕಾಶಗಳ ಕೊರತೆಯೇನು ಇಲ್ಲ. ಸದ್ಯ ತೆಲುಗಿನಲ್ಲಿ ಬ್ಯುಸಿಯಿರುವ ಜಾನ್ವಿ ದುಬಾರಿ ನಟಿಯಾಗಿದ್ದಾರೆ. ಸಂಭಾವನೆ ಹೆಚ್ಚಿಸಿಕೊಂಡಿರುವ ವಿಷ್ಯವಾಗಿ ನಟಿ ಸುದ್ದಿಯಲ್ಲಿದ್ದಾರೆ.

ಸದ್ಯ ಟಾಲಿವುಡ್‌ನತ್ತ (Tollywood) ಮುಖ ಮಾಡಿರುವ ನಟಿ ಜಾನ್ವಿ ಕಪೂರ್ ಅವರು ‘ದೇವರ’ (Devara) ಸಿನಿಮಾಗೆ 5 ಕೋಟಿ ರೂ. ಚಾರ್ಜ್ ಮಾಡಿದ್ದಾರೆ. ಈ ಚಿತ್ರದ ನಂತರ ಮುಂಬರುವ ಸಿನಿಮಾಗಳಿಗೆ ಶ್ರಿದೇವಿ ಪುತ್ರಿ ಸಂಭಾವನೆ ಏರಿಸಿಕೊಂಡಿದ್ದು, ಪ್ರತಿ ಚಿತ್ರಕ್ಕೆ 10 ಕೋಟಿ ರೂ. ಎನ್ನಲಾಗಿದೆ.

ಜಾನ್ವಿ ಸಿನಿಮಾಗಿಂತ ತಮ್ಮ ಸಂಭಾವನೆ ವಿಚಾರವಾಗಿ ಹೆಚ್ಚೆಚ್ಚು ಸುದ್ದಿಯಾಗಿದ್ದಾರೆ. ಆದರೆ 10 ಕೋಟಿ ರೂ.ವರೆಗೂ ಸಂಭಾವನೆ ಹೆಚ್ಚಿಸಿಕೊಂಡಿರೋದು ನಿಜನಾ? ಎಂಬುದರ ಬಗ್ಗೆ ಶ್ರೀದೇವಿ ಪುತ್ರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ:ನಮ್ಮ ನಡುವೆ ತಂದಿಟ್ಟರೆ ಶೂಟ್ ಮಾಡ್ತೀನಿ: ಬೆಂಕಿ ತನಿಷಾ ಮಾತು

Janhvi Kapoor 2

ಜ್ಯೂ.ಎನ್‌ಟಿಆರ್ ಸಿನಿಮಾಗೆ ಜಾನ್ವಿ ನಾಯಕಿಯಾಗಿದ್ದು, ಡಿಫರೆಂಟ್ ರೋಲ್‌ನಲ್ಲಿ ನಟಿಸಿದ್ದಾರೆ. ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ. ಜ್ಯೂ.ಎನ್‌ಟಿಆರ್‌ಗೆ ನಾಯಕಿಯಾಗುವ ಮೂಲಕ ತೆಲುಗಿಗೆ ನಟಿ ಪಾದಾರ್ಪಣೆ ಮಾಡ್ತಿದ್ದಾರೆ. ಇದೀಗ ಬಾಲಿವುಡ್‌ಗೆ ಠಕ್ಕರ್‌ ಕೊಟ್ಟು ಸೌತ್‌ ಸಿನಿಮಾಗಳೇ ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್‌ ಮಾಡುತ್ತಿದೆ. ಹಾಗಾಗಿ ‘ದೇವರ’ ಸಿನಿಮಾ ಜಾನ್ವಿ ಕೆರಿಯರ್‌ಗೆ ಸಕ್ಸಸ್ ಕೊಡುತ್ತಾ ಕಾಯಬೇಕಿದೆ.

ಇದರ ನಡುವೆ ರಾಮ್ ಚರಣ್ (Ram Charan)  ಹೊಸ ಸಿನಿಮಾಗೆ ಜಾನ್ವಿ ಕಪೂರ್ ನಾಯಕಿಯಾಗಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಬಗ್ಗೆ ಅಪ್‌ಡೇಟ್ ಹೊರಬೀಳಲಿದೆ.

Share This Article