ರಾಧಿಕಾ ಬ್ರೈಡಲ್ ಪಾರ್ಟಿ- ಗೆಳೆಯನ ಜೊತೆ ಎಂಟ್ರಿ ಕೊಟ್ಟ ಜಾನ್ವಿ ಕಪೂರ್

Public TV
1 Min Read

ಟಾಪ್ ಉದ್ಯಮಿಗಳಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿ(Mukesh Ambani) ಅವರ ಪುತ್ರ ಅನಂತ್ ಮದುವೆ ಜುಲೈ 12ಕ್ಕೆ ಫಿಕ್ಸ್ ಆಗಿದೆ. ವಿವಾಹ ಪರ‍್ವ ಕರ‍್ಯಕ್ರಮ ಅದ್ಧೂರಿಯಾಗಿ ನಡೆದ ಬೆನ್ನಲ್ಲೇ ಅಂಬಾನಿ ಮನೆ ಭಾವಿ ಸೊಸೆ ರಾಧಿಕಾ (Radhika Merchant) ಬ್ರೈಡಲ್ ಪಾರ್ಟಿ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಜೊತೆ ಬಾಯ್‌ಫ್ರೆಂಡ್ ಶಿಖರ್ ಕೂಡ ಎಂಟ್ರಿ ಕೊಟ್ಟಿದ್ದಾರೆ.

ಪಾರ್ಟಿಯಲ್ಲಿ ಗುಲಾಬಿ ಬಣ್ಣದ ಡ್ರೆಸ್‌ನಲ್ಲಿ ರಾಧಿಕಾ ಸ್ನೇಹಿತೆಯರು ಕಾಣಿಸಿಕೊಂಡ್ರೆ ಬಿಳಿ ಬಣ್ಣದ ಉಡುಪಿನಲ್ಲಿ ವಧು ರಾಧಿಕಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಉಡುಗೆಗೆ ಹೊಂದಿಕೆಯಾಗುವ ಕಿರೀಟವನ್ನು ಸಹ ಧರಿಸಿದ್ದರು. ಪಾರ್ಟಿಯಲ್ಲಿ ಜಾನ್ವಿ ಕೂಡ ಕ್ಯೂಟ್ ಆಗಿ ಕಂಡಿದ್ದಾರೆ. ಮದುವೆಗೆ ಮುಂಚಿನ ಸಂಭ್ರಮಾಚರಣೆಯನ್ನು ಎಂಜಾಯ್ ಮಾಡಿದ್ದಾರೆ. ಸೆಲೆಬ್ರೇಶನ್‌ನಲ್ಲಿ ‘ಬ್ಲೆಸ್ಡ್ ವಿತ್ ದಿ ಬೆಸ್ಟ್’ ಎಂದು ಬೋರ್ಡ್‌ ಹೈಲೆಟ್‌ ಆಗಿದೆ. ಇದನ್ನೂ ಓದಿ:2ನೇ ಮದುವೆಯಾದ ‘ಇಂಡಿಯನ್ 2’ ಚಿತ್ರ ನಿರ್ದೇಶಕನ ಪುತ್ರಿ

 

View this post on Instagram

 

A post shared by Akansha Gupta Munshi (@akanstarr)

ಮದುಮಗಳು ರಾಧಿಕಾ ಸ್ನೇಹಿತೆಯಗಿರುವ ಜಾನ್ವಿ ಕಪೂರ್ ಜೊತೆ ಗೆಳೆಯ ಶಿಖರ್ ಕೂಡ ಎಂಟ್ರಿ ಕೊಟ್ಟಿರೋದು ವಿಶೇಷ. ಜಾನ್ವಿ ಶೇರ್ ಮಾಡಿರುವ ಫೋಟೋದಲ್ಲಿ ಅನಂತ್ ಅಂಬಾನಿ ಜೊತೆ ಶಿಖರ್ ಕೂಡ ಕಾಣಿಸಿಕೊಂಡಿದ್ದಾರೆ.


ಇತ್ತೀಚೆಗೆ ನಡೆದ ರಾಧಿಕಾ -ಅನಂತ್ ಅಂಬಾನಿ ಮದುವೆಯ ಪೂರ್ವ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ-ನಟಿಯರ ದಂಡೇ ಹರಿದು ಬಂದಿತ್ತು. ಶಾರುಖ್ ಖಾನ್, ಸಲ್ಮಾನ್, ರಣ್‌ವೀರ್ ಸಿಂಗ್, ದೀಪಿಕಾ ಪಡುಕೋಣೆ, ರಣ್‌ಬೀರ್- ಆಲಿಯಾ ಭಟ್, ಅನನ್ಯಾ ಪಾಂಡೆ, ರಜನಿಕಾಂತ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

Share This Article