ರಶ್ಮಿಕಾ ಬೈ ಮಿಸ್‌ ಆಗಿ ಹೇಳಿರಬೇಕು, ಕ್ಷಮಿಸಿಬಿಡೋಣ: ನಟಿ ಹರ್ಷಿಕಾ ಪೂಣಚ್ಚ

Public TV
2 Min Read

ಬೆಂಗಳೂರು: ರಶ್ಮಿಕಾ ಮಂದಣ್ಣ (Rashmika Mandanna) ಹೇಳಿಕೆ ವಿವಾದ ಅಂತ ಹೇಳಲ್ಲ. ಅವರು ಗೊತ್ತಿಲ್ಲದೇ ಬೈ ಮಿಸ್ ಆಗಿ ಹೇಳಿರಬೇಕು ಕ್ಷಮಿಸಿಬಿಡೋಣ ಅಂತ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಹೇಳಿದ್ದಾರೆ.

ʻಕೊಡವ ಸಮುದಾಯದಿಂದ (Kodava community) ಇಲ್ಲಿಯವರೆಗೆ ಯಾರೂ ಸಿನಿಮಾ ಇಂಡಸ್ಟ್ರಿಗೆ ಬಂದಿಲ್ಲ, ನಾನೇ ಫಸ್ಟ್ ಅನ್ನಿಸುತ್ತೆʼ ಎಂಬ ನಟಿ ರಶ್ಮಿಕಾ ಮಂದಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ರಶ್ಮಿಕಾ ಮಂದಣ್ಣ ಹೇಳಿಕೆಯನ್ನ ಕ್ಷಮಿಸಿಬಿಡೋಣ. ರಶ್ಮಿಕಾ ಮಂದಣ್ಣ ಬಗ್ಗೆ ನೆಗೆಟಿವ್ ಮಾತಾಡೋದು ಬೇಡ. ನಾನಂತೂ ರಶ್ಮಿಕಾ ಅವರ ಬಗ್ಗೆ ನೆಗೆಟಿವ್ ಮಾತಾಡಲ್ಲ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಕೊಡವ ಕಮ್ಯೂನಿಟಿಯಿಂದ ಇಂಡಸ್ಟ್ರಿಗೆ ಬಂದಿದ್ದು ನಾನೇ ಫಸ್ಟ್ – ರಶ್ಮಿಕಾ ಮತ್ತೊಂದು ಯಡವಟ್ಟು 

ರಶ್ಮಿಕಾ ಮಂದಣ್ಣ ಹೇಳಿಕೆ ವಿವಾದ ಅಂತ ಹೇಳಲ್ಲ. ಅವರು ಗೊತ್ತಿಲ್ಲದೇ ಬೈ ಮಿಸ್ ಆಗಿ ಹೇಳಿರಬೇಕು. ತೆಲುಗು, ತಮಿಳು, ಬಾಲಿವುಡ್ ಅಲ್ಲಿ ಹೆಸರು ಮಾಡಿರುವ ಮೊದಲ ನಟಿ ಅಂತ ಹೇಳೋಕೆ ಹೊರಟಿರಬೇಕು. ರಶ್ಮಿಕಾ ಮಂದಣ್ಣ ಬಗ್ಗೆ ನನಗೆ ಗೌರವವಿದೆ. ಅವರು, ಒಳ್ಳೆ ಹೆಸರು ಮಾಡಿದ್ದಾರೆ. ಆದ್ರೆ ಬಾಲಿವುಡ್ ಅಲ್ಲೂ ಅವರೇ ಮೊದಲಲ್ಲ ಅಂತಲೂ ಹೇಳಿದ್ದಾರೆ. ಇದನ್ನೂ ಓದಿ: ಫಾರ್ಮ್‌ ಹೌಸ್‌ನಲ್ಲಿ ಚಾಮುಂಡಿ ಪೂಜೆ ನೆರವೇರಿಸಿದ ದರ್ಶನ್

ನಮ್ಮ ಕೊಡವ ಸಮುದಾಯ ಸಣ್ಣ ಸಮುದಾಯ. ಆದ್ರೇ ಎಲ್ಲಾ ರಂಗದಲ್ಲೂ ನಮ್ಮ ಸಮುದಾಯದವರಿದ್ದಾರೆ. ಸೈನ್ಯ, ಸಿನಿಮಾ, ರಾಜಕೀಯ ಎಲ್ಲಾ ರಂಗದಲ್ಲೂ ನಮ್ಮ ಸಮುದಾಯದವರಿದ್ದಾರೆ. ಕೊಡವರಲ್ಲಿ ಗಂಡು ಹೆಣ್ಣು ಎನ್ನುವ ಬೇಧವಿಲ್ಲ ಎಂದಿದ್ದಾರೆ.

ರಶ್ಮಿಕಾ ಹೇಳಿದ್ದೇನು?
ಇತ್ತೀಚಿಗೆ ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ಮಾತನಾಡುತ್ತಾ, ಕೊಡವ ಸಮುದಾಯದಿಂದ ಇಲ್ಲಿಯವರೆಗೆ ಯಾರೂ ಸಿನಿಮಾ ಇಂಡಸ್ಟ್ರಿಗೆ (Cinema Industry) ಬಂದಿಲ್ಲ. ಸಿನಿಮಾ ಇಂಡಸ್ಟ್ರಿಗೆ ನಟಿಯಾಗಿ ಬಂದಿರೋದು ನಾನೇ ಫಸ್ಟ್ ಅನ್ನಿಸುತ್ತೆ ಎಂದು ಹೇಳಿದ್ದಾರೆ. ಈ ವೇಳೆ ಸಂದರ್ಶಕಿ ನೀವೇ ಮೊದಲು ಎಂದು ಜನ ನಿರ್ಧರಿಸಿದ್ದಾರಾ ಎಂದು ಕೇಳಿದಾಗ, ಖಂಡಿತ ಕೊಡವ ಸಮುದಾಯದವರು ಇದನ್ನು ನಿರ್ಧರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ರೀತಿ ಹೇಳಿಕೆ ನೀಡುವ ಮೂಲಕ ನಟಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಈಗಾಗಲೇ ಕೊಡವ ಸಮುದಾಯದಿಂದ ಸಾಕಷ್ಟು ನಾಯಕಿಯರು ಚಿತ್ರರಂಗಕ್ಕೆ ಬಂದಿದ್ದು, ಖ್ಯಾತಿಯನ್ನು ಗಳಿಸಿದ್ದಾರೆ. ನಟಿ ಪ್ರೇಮ, ನಿಧಿ ಸುಬ್ಬಯ್ಯಾ, ಹರ್ಷಿಕ ಪೂಣಚ್ಚ, ಶುಭ್ರ ಅಯ್ಯಪ್ಪ ಸೇರಿ ಹಲವರು ಬಂದಿದ್ದು, ಹೆಸರು ಮಾಡಿದ್ದಾರೆ. ಇವರೆಲ್ಲರಿಗೂ ಮುನ್ನ ನಟಿ ಪ್ರೇಮ ಹಲವು ಭಾಷೆಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: `ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು’…ಅಮ್ಮನಾಗುತ್ತಿರುವ ನಟಿ ಭಾವನಾ ಮೊದಲ ಮಾತು

Share This Article