ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಲು ರೆಡಿಯಾದ ಹರ್ಷಿಕಾ-ಭುವನ್

Public TV
2 Min Read

ಸ್ಯಾಂಡಲ್‌ವುಡ್ ಚಿಟ್ಟೆ ಹರ್ಷಿಕಾ (Harshika) ಮೇಲೆ ಕೊಡಗಿನ ಕುವರ ಭುವನ್ ಪೊನ್ನಣ್ಣಗೆ ಪ್ಯಾರ್ ಆಗಿದೆ. ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಲು ಈ ಜೋಡಿ ರೆಡಿಯಾಗಿದೆ. ಅಷ್ಟಕ್ಕೂ ಇಬ್ಬರಿಗೂ ಲವ್ ಆಗಿದ್ದು ಹೇಗೆ, ಮೊದಲ ಭೇಟಿ ಪ್ರೀತಿಗೆ ತಿರುಗಿದ್ದು ಹೇಗೆ? ಹರ್ಷಿಕಾ- ಭುವನ್ (Bhuvan) ಪ್ರೇಮ ಕಹಾನಿ ಬಗ್ಗೆ ಇಂಚಿಂಚು ಕಥೆ ಇಲ್ಲಿದೆ ನೋಡಿ.

ವಸಿಷ್ಠ ಸಿಂಹ- ಹರಿಪ್ರಿಯಾ, ಅಭಿಷೇಕ್-ಅವಿವಾ ಮದುವೆ ನಂತರ ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಮದುವೆಯ ಸಂಭ್ರಮ ಮನೆಮಾಡಿದೆ. ಈ ಮೂಲಕ ಚಂದನವನದ ಮತ್ತೊಂದು ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದೆ. ಭವನ್‌ಗೆ ಹರ್ಷಿಕಾ ಮನಸೋತಿದ್ದು ಹೇಗೆ.? ಹರ್ಷಿಕಾ ಚಿತ್ರ ಜೀವನದಿಂದ ಭುವನ್ ಜೊತೆಗಿನ ಲವ್ ಸ್ಟೋರಿವರೆಗೂ ಇಲ್ಲಿದೆ ಅಪ್‌ಡೇಟ್. ಇದನ್ನೂ ಓದಿ:ಕೋಟಿ ಕೊಟ್ರೂ ಸಿನಿಮಾದಲ್ಲಿ ಕಿಸ್‌ ಮಾಡಲ್ಲ- ಪ್ರಿಯಾಮಣಿ ಖಡಕ್‌ ಉತ್ತರ

‘ಪಿಯುಸಿ’ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಪರಿಚಿತರಾದ ನಟಿ ಹರ್ಷಿಕಾ ಪೂಣಚ್ಚ ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದರು. ತಮಸ್ಸು, ಜಾಕಿ ಚಿತ್ರದಲ್ಲಿ ಹರ್ಷಿಕಾ ಅದ್ಭುತವಾಗಿ ನಟಿಸಿದ್ದರು. ಕೊಡಗಿನ ಕುವರಿ ಹರ್ಷಿಕಾ ಅವರು ಸಾಲು ಸಾಲು ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಗಟ್ಟಿ ಸ್ಥಾನ ಗಿಟ್ಟಿಸಿಕೊಳ್ಳುವ ಸಂದರ್ಭದಲ್ಲಿ 2010ರಲ್ಲಿ ಭುವನ್ ಪೊನ್ನಣ್ಣ ಅವರು ‘ಜಸ್ಟ್ ಮಾತ್ ಮಾತಲ್ಲಿ’ ಚಿತ್ರದ ಮೂಲಕ ಎಂಟ್ರಿ ಕೊಟ್ಟರು. ಗಣೇಶ್ ನಟನೆಯ ಕೂಲ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಭುವನ್ ನಟಿಸಿದ್ರು. ಆದರೆ ಗುರುತಿಸುವಂತಹ ಪಾತ್ರ ಅವರಿಗೆ ಸಿಗಲೇ ಇಲ್ಲಾ. ಅದ್ಯಾವಾಗ ಸುದೀಪ್ ನಿರೂಪಣೆಯ ಬಿಗ್ ಬಾಸ್ ಶೋ ಮೂಲಕ ದೊಡ್ಮನೆಗೆ ಕಾಲಿಟ್ರೋ ಅಂದಿನಿಂದ ಕನ್ನಡಿಗರ ಕಣ್ಣಿಗೆ ಭುವನ್ ಗಮನ ಸೆಳೆದರು.

ಹರ್ಷಿಕಾ- ಭುವನ್ ಒಂದೇ ಜಿಲ್ಲೆ ಕೂರ್ಗ್‌ನವರಾಗಿದ್ದಾರೆ. ಆ ಆಪ್ತತೆಯೇ ಇಬ್ಬರನ್ನು ಲವ್ ರಿಂಗ್‌ಗೆ ಬೀಳುವಂತೆ ಮಾಡಿತ್ತು. ಹಲವು ವರ್ಷಗಳ ಗೆಳೆತನವೇ ಇಂದು ಮದುವೆಯೆಂಬ ಹೊಸ ಹೆಜ್ಜೆ ಇಡಲು ಸಾಕ್ಷಿಯಾಗಿದೆ. ಈ ಜೋಡಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಬ್ಬರೂ ಜೊತೆಯಾಗಿ ಸಮಾಜಮುಖಿ ಕಾರ್ಯಗಳನ್ನೂ ಮಾಡಿದ್ದಾರೆ. ಕೊವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಅನೇಕರಿಗೆ ಅವರು ನೆರವು ನೀಡಿದ್ದರು. ಇಬ್ಬರ ನಡುವೆ ಪ್ರೀತಿ ಇದೆ ಎಂದು ಅನೇಕ ಬಾರಿ ಗಾಸಿಪ್ ಹಬ್ಬಿತ್ತು. ಆದರೆ ಆ ಕುರಿತು ಅವರು ಬಹಿರಂಗವಾಗಿ ಏನನ್ನೂ ಹೇಳಿಕೊಂಡಿರಲಿಲ್ಲ. ಈಗ ಅವರಿಬ್ಬರು ವೈವಾಹಿಕ ಜೀವನ (Wedding)ಆರಂಭಿಸುವ ಸಿದ್ಧತೆಯಲಿದ್ದಾರೆ. ಎರಡೂ ಕುಟುಂಬಗಳು ಮದುವೆಗೆ ತಯಾರಿ ಮಾಡಿಕೊಳ್ಳುತ್ತಿವೆ.

ಇದೇ ಜುಲೈ 15ಕ್ಕೆ ಕೊಡಗಿನಲ್ಲಿ ಭುವನ್ ಮನೆಯ ಗೃಹಪ್ರವೇಶ. ಇದಾದ ಬಳಿಕ ಕೊಡವ ಸಂಪ್ರದಾಯದಂತೆ ಹರ್ಷಿಕಾ-ಭುವನ್ ಅವರು ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗುತ್ತಿದ್ದಾರೆ. ಆಗಸ್ಟ್ 24ಕ್ಕೆ ವಿರಾಜ್‌ಪೇಟೆಯಲ್ಲಿ ಹರ್ಷಿಕಾ-ಭುವನ್ ಅದ್ದೂರಿ ಮದುವೆ ನಡೆಯಲಿದೆ. ರಾಜಕೀಯ- ಚಿತ್ರರಂಗದ ಗಣ್ಯರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಮದುವೆಯ ಆಮಂತ್ರಣ ಪತ್ರಿಕೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್